ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಚಿಕ್ಕಬಳ್ಳಾಪುರ: ಆ.12, ಹಲವೆಡೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ವಿದ್ಯುತ್ ಉಪ ಕೇಂದ್ರಗಳಲ್ಲಿ ಕಾಮಗಾರಿ ಕೈಗೊಳ್ಳುವ ಕಾರಣ ಆ. 12ರಂದು ಚಿಕ್ಕಬಳ್ಳಾಪುರ, ಗುಡಿಬಂಡೆ ಮತ್ತು ಗೌರಿಬಿದನೂರು ತಾಲ್ಲೂಕಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಳ್ಳಿ, ಅರಸನಹಳ್ಳಿ, ಮಾವಳ್ಳಿ, ದೊಡ್ಡಪೈಲಗುರ್ಕಿ, ಚಿಕ್ಕಪೈಲಗುರ್ಕಿ, ಸಾಮಸೇನಹಳ್ಳಿ, ಎಚ್. ಕುರುಬರಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ  ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಚಿಕ್ಕಬಳ್ಳಾಪುರ ನಗರ, ನಂದಿ, ನಂದಿ ಕ್ರಾಸ್, ಬೀಡಗಾನಹಳ್ಳಿ, ನಂದಿಬೆಟ್ಟ, ಸುಲ್ತಾನ್ ಪೇಟೆ, ಸಿಂಗಾಟಕದಿರೇನಹಳ್ಳಿ, ಹೊಸೂರು, ಮುದ್ದೇನಹಳ್ಳಿ, ಪಟ್ರೇನಹಳ್ಳಿ, ಜಾತವಾರ, ಹೊಸಹುಡ್ಯ, ಅಜ್ಜವಾರ, ದಿಬ್ಬೂರು, ಮಂಚನಬಲೆ, ಕೇತೇನಹಳ್ಳಿ, ರೆಡ್ಡಿಗೊಲ್ಲರಹಳ್ಳಿ, ರಾಮದೇವರಗುಡಿ, ಹಾರೋಬಂಡೆ, ಗುಂಡ್ಲಗುರ್ಕಿ, ಜಿಲ್ಲಾಆಡಳಿತ ಭವನ, ತಿಪ್ಪೇನಹಳ್ಳಿ, ಕಣಜೇನಹಳ್ಳಿ, ಮೈಲಪ್ಪನಹಳ್ಳಿ, ಕಂದವಾರ, ಚದಲಪುರ, ಗವಿಗಾನಹಳ್ಳಿ, ಕಣಿತಹಳ್ಳಿ, ಬೊಮ್ಮನಹಳ್ಳಿ, ಅಗಲಗುರ್ಕಿ, ಹೊನ್ನೇನಹಳ್ಳಿ, ಕೆಳಗಿನ ತೋಟ, ಜಕ್ಕಲಮಡಗು ಪ್ರದೇಶದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಗೌರಿಬಿದನೂರು ನಗರ, ಹಿರೇಬಿದನೂರು, ಗೊಟಕನಾಪುರ, ಮಾಧವನಗರ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮಧ್ಯಾಹ್ನ 12.30ರಿಂದ ಮಧ್ಯಾಹ್ನ 2.30ರವರೆಗೆ, ಗುಡಿಬಂಡೆ ತಾಲ್ಲೂಕಿನ ಬೋಗೇನಹಳ್ಳಿ, ಜೆ.ಪಿ. ನಗರ, ಬೀಚಗಾನಹಳ್ಳಿ, ದಪ್ಪರ್ತಿ, ಚಿಕ್ಕಕುರುಬರಹಳ್ಳಿ, ತಲವಾರದಿನ್ನೆ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.