ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ಮಳೆ ಕೊರತೆ - ಫಸಲು ಕುಸಿತ, ರಾಗಿ ಮಾರಾಟಕ್ಕೆ ರೈತರ ನಿರಾಸಕ್ತಿ

Published 5 ಮೇ 2024, 6:24 IST
Last Updated 5 ಮೇ 2024, 6:24 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ರಾಗಿ ಫಸಲು ಕುಸಿದಿದ್ದು, ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ ಖರೀದಿಗೆ ಕೇಂದ್ರದಲ್ಲಿ ರಾಗಿ ಮಾರಾಟಕ್ಕೆ ರೈತರು ನಿರಾಸಕ್ತಿ ತೋರುತ್ತಿದ್ದಾರೆ.

ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ಬಾರಿ ಶೇ 40 ರಷ್ಟು ರೈತರು ಮಾತ್ರ ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಕೆಲವು ರೈತರು ಮಾತ್ರ ರಾಗಿ ಮಾರಾಟ ಮಾಡುತ್ತಿದ್ದಾರೆ. ರಾಗಿ ಕೇಂದ್ರಕ್ಕೆ ಬರುವ ರೈತರ ಸಂಖ್ಯೆ ವಿರಳವಾಗಿದ್ದು, ರಾಗಿ ಖರೀದಿಗೆ ಜೂನ್‌ ವರೆಗೂ ಅವಕಾಶ ನೀಡಲಾಗಿದೆ.

ಕಳೆದ ಬಾರಿ 1,764 ರೈತರು ನೋಂದಾಯಿಸಿಕೊಂಡಿದ್ದರು. ಈ ಬಾರಿ 674 ರೈತರು ಮಾತ್ರ ನೋಂದಾಯಿಸಿಕೊಂಡಿದ್ದಾರೆ. ರಾಗಿ ಖರೀದಿ ಕೇಂದ್ರ ಆರಂಭವಾಗಿ 20 ದಿನ ಕಳೆದಿದೆ. ಆದರೂ 149 ರೈತರು ಮಾತ್ರ ಖರೀದಿ ಕೇಂದ್ರದಲ್ಲಿ 2,835 ಕಿಟ್ಟಾಂಲ್ ರಾಗಿ ಮಾರಟ ಮಾಡಿದ್ದಾರೆ.

ಹದ ಮಳೆ ಬಿದ್ದರೆ ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಐದಾರು ಕಿಂಟ್ವಾಲ್‌ ರಾಗಿ ಬೆಳೆಯಬಹುದು. ಆದರೆ ಮಳೆ ಕುಂಠಿತದಿಂದ ಈ ಬಾರಿ ಒಂದು ಎಕೆರೆಯಲ್ಲಿ ಒಂದು–ಎರಡು‌ ಕಿಂಟ್ವಾಲ್‌ ರಾಗಿ ಮಾತ್ರ ಫಸಲು ಬಂದಿದೆ.

ಇದರ ನಡುವೆ ರಾಗಿ ಖರೀದಿ ನೋಂದಣಿ ಮತ್ತು ಖರೀದಿಯನ್ನು ತಡವಾಗಿ ಆರಂಭಿಸಲಾಯಿತು. ಇದರಿಂದ ರೈತರು ತಮ್ಮ ಹಣದ ಅವಶ್ಯಕತೆ ಪೂರೈಸಲು ಹೊರಗಿನ ಮಾರುಕಟ್ಟೆಗಳಲ್ಲಿ ಕಿಂಟ್ವಾಲ್‌ಗೆ ₹3 ಸಾವಿರದಂತೆ ರಾಗಿ ಮಾರಾಟ ಮಾಡಿದ್ದಾರೆ. ಇದರಿಂದ ಖರೀದಿ ಕೇಂದ್ರಕ್ಕೆ ರಾಗಿ ಆವಕ ಕಳೆದ ಬಾರಿಗಿಂತ ಶೇ 60 ರಷ್ಟು ಇಳಿಮುಖವಾಗಿದೆ.

ಕಳೆದ ಸಾಲಿನಲ್ಲಿ ಸರ್ಕಾರ ಕಿಂಟ್ವಾಲ್‌ ರಾಗಿಗೆ ₹3,578 ನಿಗದಿ ಮಾಡಲಾಗಿತ್ತು. ಅದರಂತೆ ತಾಲ್ಲೂಕಿನಲ್ಲಿ 1,764 ರೈತರು ನೋಂದಾಯಿಸಿಕೊಂಡಿದ್ದರು.  28 ಸಾವಿರ ಕಿಟ್ಟಾಂಲ್ ರಾಗಿ ಮಾರಟ ಮಾಡಲಾಗಿತ್ತು.

ಈ ಬಾರಿ ₹3,846 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ‌. 674 ರೈತರು 14,953 ಕಿಂಟ್ವಾಲ್‌ ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದರು. ಆದರೆ ಖರೀದಿ ಕೇಂದ್ರ ಆರಂಭವಾಗಿ 20 ದಿನ ಕಳೆದರೂ 149 ರೈತರು ಮಾತ್ರ 2,835 ಕಿಂಟ್ವಾಲ್‌ ರಾಗಿ ಮಾರಾಟ ಮಾಡಿದ್ದಾರೆ.

ಶೇ 70 ರಷ್ಟು ಫಸಲು ನಷ್ಟ

ತಾಲ್ಲೂಕಿನಲ್ಲಿ 2023-24 ನೇ ಸಾಲಿನಲ್ಲಿ 3465 ಹೇಕ್ಟರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಮಳೆ ಇಲ್ಲದೆ ಶೇ 70 ರಷ್ಟು ಬೆಳೆ ನಷ್ಟವಾಗಿದೆ. ಈ ಬಾರಿ ರಾಗಿ ಫಸಲು ಸಹ ತಾಲ್ಲೂಕಿನಲ್ಲಿ ಕಳೆದ ಬಾರಿಯಂತೆ ಬಂದಿಲ್ಲ. ಇದು ಸಹ ರೈತರ ನೋಂದಣಿ ಕಡಿಮೆಯಾಗಲು ಕಾರಣ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ ತಿಳಿಸಿದ್ದಾರೆ. ರಾಗಿ ಮಾರಾಟಕ್ಕೆ  674 ರೈತರು ನೋಂದಣಿ ಮಾಡಿಕೊಂಡಿದ್ದರು. ಕೇಂದ್ರದ ಬಳಿ ಕಿರಿದಾದ ಜಾಗ ಇರುವುದರಿಂದ ದಿನಕ್ಕೆ 10 ರೈತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಜೂನ್‌ ಅಂತ್ಯದವರೆಗೂ ರಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಖರೀದಿ ಅಧಿಕಾರಿ ಹಸೇನ್ ಸಾಬ್ ಹಿಟ್ಟನಹಳ್ಳಿ ಮನವಿ ಮಾಡಿದ್ದಾರೆ.

ಅಂಕಿ ಅಂಶ

₹3,846 ರಾಗಿ ಬೆಂಬಲ ಬೆಲೆ 

674 ನೋಂದಾಯಿಸಿಕೊಂಡ ರೈತರು

149 ಮಾರಾಟ ಮಾಡಿದ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT