ಚಿಕ್ಕಬಳ್ಳಾಪುರ: ನಗರದ ಹೊರವಲಯದ ನಂದಿ ಕ್ರಾಸ್ ಬಳಿಯ ತೋಟಗಾರಿಕಾ ಇಲಾಖೆಗೆ ಸೇರಿದ 20 ಎಕರೆ ಜಮೀನನ್ನು ಹೂ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದೆ.

ಜಮೀನು ಈಗಾಗಲೇ ಚಿಕ್ಕಬಳ್ಳಾಪುರ ಎಪಿಎಂಸಿ ಸುಪರ್ದಿಗೆ ಬಂದಿದ್ದು ಪಹಣಿ ತಿದ್ದುಪಡಿಯ ಪ್ರಕ್ರಿಯೆಗಳು ನಡೆಯುತ್ತಿವೆ.

ಈ ನಡುವೆಯೇ ಹೂ ಮಾರುಕಟ್ಟೆ ನಿರ್ಮಾಣಕ್ಕೆ ನೀಲನಕ್ಷೆ ಸಹ ಸಿದ್ಧಗೊಳ್ಳುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಹೂ ಮಾರುಕಟ್ಟೆಯ ನೀಲನಕ್ಷೆ ಸಿದ್ಧಗೊಳಿಸುವ ವಿಚಾರವಾಗಿ ಆಸಕ್ತರಾಗಿದ್ದಾರೆ. ‘ಸಚಿವರೇ ನೀಲನಕ್ಷೆ ಸಿದ್ಧಗೊಳಿಸುವ ವಿಚಾರವಾಗಿ ಜವಾಬ್ದಾರಿ ಹೊತ್ತಿದ್ದಾರೆ’ ಎಂದು ಚಿಕ್ಕಬಳ್ಳಾಪುರ ಎಪಿಎಂಸಿ ಮೂಲಗಳು ತಿಳಿಸುತ್ತವೆ.

ಯಾವ ಭಾಗಗಳಲ್ಲಿ ಹೂ ವಹಿವಾಟು ನಡೆಯಬೇಕು. ರೈತರಿಗೆ ವಿಶ್ರಾಂತಿ ಗೃಹ, ವಾಹನಗಳ ನಿಲುಗಡೆಗೆ ಸ್ಥಳ, ವಹಿವಾಟಿಗೆ ಅಗತ್ಯವಾದ ಫ್ಲಾಟ್ಫಾರಂಗಳು, ಮಳಿಗೆಗಳ ನಿರ್ಮಾಣ, ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಲು ಸೂಕ್ತವಾದ ವ್ಯವಸ್ಥೆ, ಆಡಳಿಯ ಕಚೇರಿ... ಹೀಗೆ ನಾನಾ ಹೂ ಮಾರುಕಟ್ಟೆಯಲ್ಲಿ ಯಾವ ಯಾವ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವ ನೀಲನಕ್ಷೆ ಸಿದ್ಧವಾಗುತ್ತಿದೆ.

ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಗೆ ರಾಜ್ಯವಷ್ಟೇ ಅಲ್ಲ ಹೊರ ರಾಜ್ಯಗಳ ವಾಹನಗಳು ಸಹ ನಿತ್ಯ ಬರುತ್ತವೆ. ನಿತ್ಯ ಗ್ರಾಹಕರು, ವ್ಯಾಪಾರಿಗಳು ಮತ್ತು ರೈತರು ಸೇರಿದಂತೆ ಸಾವಿರಾರು ಮಂದಿ ವಹಿವಾಟಿನಲ್ಲಿ ಭಾಗಿಯಾಗುವರು. ಹೀಗೆ ದೊಡ್ಡ ಪ್ರಮಾಣದಲ್ಲಿ ಜನಸಂದಣಿ ನಿತ್ಯವೂ ಬರುವ ಕಾರಣ ಹೂ ಮಾರುಕಟ್ಟೆಯಲ್ಲಿ ಸೌಲಭ್ಯಗಳು ಉತ್ತಮವಾಗಿರಬೇಕು. ಜಾಗವೂ ಕಿಷ್ಕಿಂದೆಯಂತೆ ಇರಬಾರದು.

ಅಲ್ಲದೆ ವರ್ಷದಿಂದ ವರ್ಷಕ್ಕೆ ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚುತ್ತಲೇ ಇದೆ. ಹೀಗೆ ಎಲ್ಲ ಆಯಾಮ ಮತ್ತು ದೂರದೃಷ್ಟಿಯಿಂದ ಹೂ ಮಾರುಕಟ್ಟೆ ರೂಪುಗೊಳ್ಳಬೇಕಾಗಿದೆ. ನೀಲನಕ್ಷೆಯ ಸಿದ್ಧಗೊಂಡ ತರುವಾಯ ವಿಸ್ತೃತ ಯೋಜನಾ ವರದಿಯೂ ಸಿದ್ಧಗೊಳ್ಳುವ ಸಾಧ್ಯತೆ ಇದೆ.

ತೋಟಗಾರಿಕೆ ಇಲಾಖೆಯ 20 ಎಕರೆ ಜಮೀನು ಈಗಾಗಲೇ ಎಪಿಎಂಸಿಯ ಅಧೀನಕ್ಕೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಅಧಿಕಾರಿಗಳು ಪಹಣಿಯಲ್ಲಿ ಹೆಸರು ಬದಲಾವಣೆಗೆ ಕಂದಾಯ ಇಲಾಖೆಗೆ ಮಾಹಿತಿ ಸಹ ನೀಡಿದ್ದಾರೆ. ಎಪಿಎಂಸಿ ಹೆಸರಿಗೆ ಪಹಣಿ ಬದಲಾವಣೆಯ ಪ್ರಕ್ರಿಯೆಗಳು ಸದ್ಯ ನಡೆಯುತ್ತಿವೆ.

ಮತ್ತೊಂದು ಕಡೆ ಈ 20 ಎಕರೆಯಲ್ಲಿ ಬೆಳೆದಿರುವ 791 ಮರಗಳನ್ನು ಕತ್ತರಿಸಬೇಕಾಗಿದೆ. ಇದಕ್ಕಾಗಿ ಚಿಕ್ಕಬಳ್ಳಾಪುರ ಎಪಿಎಂಸಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಸಹ ಬರೆದಿದ್ದಾರೆ. ಈ ತೋಟಗಾರಿಕಾ ಇಲಾಖೆಯ ಜಮೀನಿನಲ್ಲಿ ಹಲವು ವರ್ಷಗಳಿಂದ ಇದ್ದ ಮರಗಳನ್ನು ತೆರವುಗೊಳಿಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯ ನಿಯಮಗಳನ್ನು ಸಹ ಪಾಲಿಸಬೇಕಾಗುತ್ತದೆ. ಹೀಗೆ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ತೆರವುಗೊಳಿಸವು ಕಾರ್ಯಾಚರಣೆ ಸಹ ನಡೆಯಬೇಕಾಗಿದೆ.

46 ವರ್ಷ ಪ್ರಾಯದ 487 ಸಪೋಟ ಮರಗಳನ್ನು ತೆರವುಗೊಳಿಸಬೇಕಾಗಿದೆ. ಹೀಗೆ ದೊಡ್ಡ ಪ್ರಮಾಣದಲ್ಲಿಯೇ ಸಪೋಟ ಮರಗಳು ನೆಲಕಚ್ಚಲಿವೆ.

ನಂದಿಕ್ರಾಸ್ನಲ್ಲಿ ಹೂ ಮಾರುಕಟ್ಟೆ ನಿರ್ಮಾಣವಾದರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ರೈತರಷ್ಟೇ ಅಲ್ಲ ದೇವನಹಳ್ಳಿ ತಾಲ್ಲೂಕಿನ ರೈತರೂ ಈ ಮಾರುಕಟ್ಟೆಗೆ ಬರುವ ಅವಕಾಶಗಳು ಹೆಚ್ಚಿವೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಈ ಜಮೀನು ಇರುವ ಕಾರಣ ಹೂ ಮಾರುಕಟ್ಟೆಗೆ ಪ್ರಶಸ್ತವಾದ ಸ್ಥಳವಾಗಿದೆ.

ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಈ ಹಿಂದೆ ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರಲ್ಲಿ 9.05 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿತ್ತು. ಅಂದಿನ ಸಚಿವ ಡಾ.ಕೆ.ಸುಧಾಕರ್ ಅವರು ಈ ಮಾರುಕಟ್ಟೆಗೆ ಜಮೀನು ದೊರಕಿಸಿಕೊಟ್ಟಿದ್ದರು. ಆದರೆ ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರ ಜಮೀನಿಗೆ ಸೂಕ್ತ ರಸ್ತೆ ಇಲ್ಲ. ಜಾಗವೂ ಸಮತಟ್ಟಾಗಿಲ್ಲ. ಆದ ಕಾರಣ ಆ ಜಾಗದ ಬದಲು ಬೇರೊಂದು ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಬೇಕು ಎಂದು ತೀರ್ಮಾನಿಸಿದ್ದರು.

ನಂತರ ತೋಟಗಾರಿಕೆ ಇಲಾಖೆಯ 20 ಎಕರೆಯನ್ನು ಹೂ ಮಾರುಕಟ್ಟೆಗೆ ನೀಡಲಾಗಿದೆ. ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಒಳಗೊಂಡ ಸಸ್ಯ ಕ್ಷೇತ್ರವು 48 ಎಕರೆ ವಿಸ್ತೀರ್ಣವನ್ನು ಹೊಂದಿದೆ.

‘ನೀಲನಕ್ಷೆ ಮತ್ತು ಡಿಪಿಆರ್ ಸಿದ್ಧವಾದ ನಂತರ ಸರ್ಕಾರವು ಹೂ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ನೀಡುವ ನಿರೀಕ್ಷೆ ಇದೆ. ಅನುದಾನ ದೊರೆತರೆ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣವಾಗಲಿದೆ’ ಎಂದು ಅಧಿಕಾರಿಗಳು ತಿಳಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.