ಚಿಕ್ಕಬಳ್ಳಾಪುರ: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದಲ್ಲಿ ಅಂಕಿತಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಗಳನ್ನು ಬಿಡುಗಡೆಗೊಳಿಸಿ, ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಆದೇಶ ಹೊರಡಿಸಲಾಗಿದೆ.

ಈ ಆದೇಶವು ಜಿಲ್ಲೆಯಲ್ಲಿ ಎಸಿ ಅವರ ನೇತೃತ್ವದಲ್ಲಿ ಇನ್ನಾದರೂ ಇಲಾಖೆಯ ಕಾರ್ಯಚಟುವಟಿಕೆಗಳು ಚುರುಕಾಗುತ್ತವೆಯೇ? ‘ವಸೂಲಿ’ ಮತ್ತು ಭ್ರಷ್ಟಾಚಾರದ ಹಣಪಟ್ಟಿಯನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಹೊತ್ತಿದ್ದ ‘ಅಂಕಿತಾಧಿಕಾರಿ’ಗೆ ಆ ಕಳಂಕ ಮುಕ್ತಗೊಳ್ಳುತ್ತದೆಯೇ ಎನ್ನುವ ನಿರೀಕ್ಷೆಗಳು ಪ್ರಜ್ಞಾವಂತರಲ್ಲಿದೆ.

ಆಹಾರ ಸುರಕ್ಷತಾಧಿಕಾರಿಗಳ ದಾಳಿಯ ಪ್ರಹಸನ ಜಿಲ್ಲೆಯಲ್ಲಿ ಇತ್ತೀಚೆಗಂತೂ ಜೋರಾಗಿತ್ತು. ದಾಳಿ ನಡೆದಿದೆ ಎಂದರೆ ಅಲ್ಲಿ ಭ್ರಷ್ಟಾಚಾರದ ವಾಸನೆಗಳು ಢಾಳಾಗಿ ಕಾಣುತ್ತಿದ್ದವು. ಬೇಕರಿಗಳು, ಹೋಟೆಲ್ಗಳು ಸೇರಿದಂತೆ ವಿವಿಧ ಕಡೆ ನಡೆಯುತ್ತಿದ್ದ ದಾಳಿಗಳ ಜಾಗೃತಿ, ಎಚ್ಚರಿಕೆ, ದಂಡಕ್ಕಿಂತ ‘ಮಾಮೂಲಿ’ ವಸೂಲಿ ಎನ್ನುವ ಸ್ಥಿತಿಗೆ ತಲುಪಿತ್ತು.

ನಿಯಮ ಉಲ್ಲಂಘಿಸುವ ಆಹಾರ ಮಾರಾಟಗಾರರಿಗೆ ದಂಡ ವಿಧಿಸಲಾಗುತ್ತದೆ. ಆದರೆ ಅಧಿಕಾರಿಗಳು ಪಡೆಯುವ ದಂಡಕ್ಕೂ ಮತ್ತು ರಸೀದಿಯಲ್ಲಿರುವ ದಂಡಕ್ಕೂ ವ್ಯತ್ಯಾಗಳಿವೆ ಎನ್ನುವ ಮಾತು ಚಿಕ್ಕಬಳ್ಳಾಪುರ ನಗರದಲ್ಲಿಯೇ ವ್ಯಾಪಕವಾಗಿದೆ.

ಸಿಹಿ ತಿನಿಸುಗಳ ತಯಾರಿಕೆ ಅಂಗಡಿಗಳು, ಹೋಟೆಲ್ಗಳು, ಆಹಾರ ಮಳಿಗೆಗಳಲ್ಲಿ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಆಹಾರಕ್ಕೆ ಕೃತಕ ಬಣ್ಣ ಬಳಸಲಾಗುತ್ತಿದೆ ಎನ್ನುವ ಆರೋಪಗಳು ಇವೆ. ವಿಶೇಷವಾಗಿ ಗಡಿಭಾಗದ ತಾಲ್ಲೂಕುಗಳಲ್ಲಿ ಈ ರೀತಿಯ ಸ್ಥಿತಿಯೂ ಇದೆ.

‘ನಮ್ಮ ಅಂಗಡಿಯ ಮೇಲೆ ದಾಳಿ ನಡೆಸಿದರು. ಹೆಚ್ಚು ದಂಡ ವಿಧಿಸಿದರು. ಆದರೆ ನಾವು ಮಾತುಕತೆ ನಡೆಸಿ ಸರಿದೂಗಿಸಿಕೊಂಡೆವು’ ಎಂದು ನಗರದ ಆಹಾರ ಮಾರಾಟ ವ್ಯಾಪಾರಿಯೊಬ್ಬರು ತಿಳಿಸುವರು.

ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ನಿಷೇಧಕ್ಕೆ ಒಳಗಾಗಿರುವ ಬಣ್ಣವನ್ನು ಆಹಾರಕ್ಕೆ ಬಳಸಿದರೂ ಕೆಲವು ಕಡೆ ತಪಾಸಣೆಗೂ ಮುಂದಾಗಿಲ್ಲ. ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆ. ಬೇಕರಿಗಳು ಮತ್ತು ಹೋಟೆಲ್ಗಳು ಕಡ್ಡಾಯವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮಗಳ ಪ್ರಕಾರ ಪರವಾನಗಿ ಪಡೆಯಬೇಕು. ಆದರೆ ಬಹಳಷ್ಟು ಆಹಾರ ಮಾರಾಟ ಮಳಿಗೆಗಳು ಪರವಾನಗಿಯನ್ನೂ ಪಡೆದಿಲ್ಲ.

ನಿಯಮ ಉಲ್ಲಂಘಿಸುವವ ವಿರುದ್ಧ ಕಠಿಣ ನಿಯಮಗಳು, ಕಾಯ್ದೆಗಳು ಇವೆ. ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ವಿಚಾರಣೆಗಳು ನಡೆದು ದಂಡ ವಿಧಿಸಲಾಗುತ್ತದೆ. ಹೀಗೆ ನಿಯಮಗಳಿಗೆ ಹೆದರಿ ಆಹಾರ ಮಾರಾಟ ಮಳಿಗೆಗಳ ಮಾಲೀಕರು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ‘ಕಪ್ಪ’ ಒಪ್ಪಿಸುವ ಪರಿಪಾಠವೂ ಇದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಆಹಾರ ಸುರಕ್ಷೆ ಅಧಿಕಾರಿಗಳ ‘ವ್ಯವಹಾರ’ಗಳ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವೂ ಆಗಿದೆ.

‘ಚುರುಕುಗೊಳ್ಳಲಿದೆ ಕಾರ್ಯಾಚರಣೆ’ ಆಹಾರ ಕಲಬೆರಕೆಗೆ ಸಂಬಂಧಿಸಿದಂತೆ ನಿಯಮಗಳು ಕಠಿಣವಾಗಿವೆ. ₹ 5 ಲಕ್ಷದವರೆಗೂ ದಂಡ ವಿಧಿಸಬಹುದು. ಪರವಾನಗಿ ಸಹ ರದ್ದುಗೊಳಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ಆಹಾರ ಕಲಬೆರಕೆ ವಿರುದ್ಧ ಕಾರ್ಯಾಚರಣೆಗಳು ನಡೆಯುತ್ತಿವೆ. ಈಗ ಆಹಾರ ಸುರಕ್ಷತೆ ಮತ್ತುಅಂಕಿತಾಧಿಕಾರಿ ಹುದ್ದೆಯ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿ ಅವರಿಗೆ ನೀಡಲಾಗಿದೆ. ಕಾರ್ಯಾಚರಣೆ ಮತ್ತಷ್ಟು ಚುರುಕು ಪಡೆಯಲಿದೆ ಎಂದು ತಿಳಿಸಿದರು. ಈ ಹಿಂದೆ ಡಾಬಾ ಮಾಲೀಕರ ಜೊತೆ ಸಭೆ ಸಹ ನಡೆಸಿದ್ದೆವು. ಎಸಿ ಅವರ ನೇತೃತ್ವದಲ್ಲಿ ಹೆಚ್ಚು ದಾಳಿ ನಡೆಸಿ ಕಲಬೆರಕೆ ತಡೆಗಟ್ಟಬೇಕಿದೆ. ಆಹಾರ ಕಲಬೆರಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಖಚಿತ. ಇದು ನಿಧಾನವಾಗಿ ಹಬ್ಬುವ ವಿಷ ಎಂದರು.

ಈಗ ಎಸಿಗೆ ಜವಾಬ್ದಾರಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದಲ್ಲಿ ಅಂಕಿತಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಗಳನ್ನು ಬಿಡುಗಡೆಗೊಳಿಸಿ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ನಿರ್ದೇಶನದ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ. ಅಂಕಿತಾಧಿಕಾರಿ ಹುದ್ದೆಯಲ್ಲಿ 18 ವೈದ್ಯಾಧಿಕಾರಿಗಳು ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದರು. ಬಿಡುಗಡೆಗೊಂಡ ಈ ವೈದ್ಯಾಧಿಕಾರಿಗಳು ಮುಂದಿನ ಸ್ಥಳ ನಿಯುಕ್ತಿಗೆ ಆರೋಗ್ಯ ಇಲಾಖೆ ಆಯುಕ್ತರಿಗೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.