ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಒತ್ತುವರಿ ಆಗಿದ್ದರೆ ತೆರವುಗೊಳಿಸಲಾಗುವುದು. ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಲಕ್ಷ್ಮಿನಾರಾಯಣಪ್ಪ ನಗರಸಭೆ ಅಧ್ಯಕ್ಷ ಗೌರಿಬಿದನೂರು ಅಧಿಕಾರಿಗಳ ಮೀನ ಮೇಷ ಹಲವು ಬಾರಿ ಈ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಿಕೊಡುವಂತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಮೀಷಮೇಷ ಎನಿಸುತ್ತಿದ್ದಾರೆ.
ಅಶೋಕ್ ವಾರ್ಡ್ ನಿವಾಸಿ
ಬದ್ಧತೆ ಎಷ್ಟಿದೆ ಎನ್ನುವ ಅರಿವು ನಗರದ ಹೃದಯ ಭಾಗದ ಸಂಪರ್ಕ ರಸ್ತೆ ದಶಕಗಳ ಕಾಲ ಸಾರ್ವಜನಿಕರಿಗೆ ಓಡಾಡಲು ಆಗದೆ ಸಂಬಂಧಿಸಿದ ಅಧಿಕಾರಿಗಳು ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಅಧಿಕಾರಿಗಳ ಬದ್ಧತೆ ಎಷ್ಟಿದೆ ಎಂದು ತಿಳಿಯುತ್ತದೆ.
ಅಂಜಿನಪ್ಪ ಗೌರಿಬಿದನೂರು
ನಗರದ ಪ್ರಮುಖ ರಸ್ತೆ ದಶಕಗಳಿಂದ ಒತ್ತುವರಿಯಾಗಿ ಅನೈತಿಕ ಚಟುವಟಿಗೆಗಳ ತಾಣವಾಗಿದೆ. ಹೀಗಿದ್ದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳಿಗೆ ಜನರೇ ಪಾಠ ಕಲಿಸಬೇಕು.