ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಗೌರಿಬಿದನೂರು | ಪೂರೈಕೆಯಾಗದ ಅಕ್ಕಿ, ಧಾನ್ಯ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಕಂಟಕ

Published : 30 ಜುಲೈ 2023, 3:04 IST
Last Updated : 30 ಜುಲೈ 2023, 3:04 IST
ಫಾಲೋ ಮಾಡಿ
Comments
ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಬಾಳೆಹಣ್ಣು ನೀಡಿರುವುದು
ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಬಾಳೆಹಣ್ಣು ನೀಡಿರುವುದು
ಅಧಿಕಾರಿಗೆ ಕಪ್ಪ ಕಾಣಿಕೆ
ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿನಿಂದಲೂ ಸಾಕಷ್ಟು ದೂರುಗಳು ಶಾಲಾ ಶಿಕ್ಷಕರಿಂದ ಕೇಳಿ ಬರುತ್ತಿವೆ. ಇದರ ಜತೆಗೆ ಪ್ರತಿ ತಿಂಗಳ ಸಿ.ಜಿ ಹಣ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪೋನ್ ಪೇ ಮತ್ತು ಗೂಗಲ್ ಪೇ ಮೂಲಕ ಕಪ್ಪ ಕಾಣಿಕೆ ನೀಡಿದರೆ ಮಾತ್ರ ಮಾಸಿಕ ಹಣವನ್ನು ಬಿಡುಗಡೆ ಮಾಡುತ್ತಾರೆ. ಇಲ್ಲವಾದಲ್ಲಿ ಆರೇಳು ತಿಂಗಳಾದರೂ ಹಣ ಬಿಡುಗಡೆ ಮಾಡಲು ಮೀನಾಮೇಷ ಎಣಿಸುವ ಪರಿಸ್ಥಿತಿ ‌ನಿರ್ಮಾಣವಾಗಿದೆ. ಶಿಕ್ಷಣ ‌ಇಲಾಖೆಯಲ್ಲಿ ಇಂತಹ ಅವ್ಯವಸ್ಥೆಗೆ ಶಿಕ್ಷಕರೇ ತಲೆತಗ್ಗಿಸುವ ಪರಿಸ್ಥಿತಿ ‌ನಿರ್ಮಾಣವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು.
ಶಾಲಾ ಮಕ್ಕಳಿಗೆ ಮಧ್ಯಾಹ್ನ ಮನೆಯೂಟ
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಇಲಾಖೆ ಸಮರ್ಪಕವಾಗಿ ಆಹಾರ ಧಾನ್ಯ ಮತ್ತು ತರಕಾರಿ ಕೊಳ್ಳಲು ಹಣ ಬಿಡುಗಡೆಯಾಗದ ಕಾರಣ ಮಧ್ಯಾಹ್ನ ‌ಬಿಸಿಯೂಟ ವ್ಯವಸ್ಥೆ ಮಾಡುವಲ್ಲಿ ಶಿಕ್ಷಕರು ನಿರುತ್ಸಾಹ ತೋರುತ್ತಿದ್ದಾರೆ. ತರಕಾರಿಗಳ ಬೆಲೆ ಏರಿಕೆಯಿಂದಾಗಿ ಗುಣಮಟ್ಟ ರಹಿತ ಊಟ ನೀಡುತ್ತಿರುವ ಕಾರಣ ನಿತ್ಯ ಮಧ್ಯಾಹ್ನದ ಊಟಕ್ಕೆ ಮನೆಯಿಂದಲೇ ಬಾಕ್ಸ್ ತಂದು‌ ತಿನ್ನುವ ‌ಪರಿಸ್ಥಿತಿ‌ ನಿರ್ಮಾಣವಾಗಿದೆ ಎನ್ನುತ್ತಾರೆ ಆದರ್ಶ ಶಾಲೆಯ ವಿದ್ಯಾರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT