ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರಿಗೆ ಅಗತ್ಯ ಸೌಲಭ್ಯಕ್ಕೆ ಬದ್ಧ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Last Updated 26 ನವೆಂಬರ್ 2022, 4:22 IST
ಅಕ್ಷರ ಗಾತ್ರ

ಸಾದಲಿ: ‘ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗಾಗಿ ಬೆಂಬಲ ನೀಡಿದ್ದ ಕಾಂಗ್ರೆಸ್ ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡಲು ನಿರಾಕರಿಸಿತ್ತು. ಆದಾಗ್ಯೂ, ನಾನು₹ 25,000 ಕೋಟಿ ಸಾಲಮನ್ನಾ ಮಾಡಿದ್ದೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ವಿರೋಧ ಲೆಕ್ಕಿಸದೆ ರೈತರ ಸಾಲಮನ್ನಾ ಮಾಡಿದ್ದೆ. ಇದರಿಂದ 26 ಸಾವಿರ ಆದರೆ, ಇದೀಗ ಈ ಸಾಲಮನ್ನಾದಲ್ಲಿ ತಮಗೂ ಪಾಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಒಂದು ವರ್ಷದಲ್ಲಿ 500 ಪದವಿ ಪೂರ್ವ ಕಾಲೇಜುಗಳು,179 ಪ್ರಥಮ ದರ್ಜೆ ಕಾಲೇಜುಗಳು ಹಾಗೂ 1,400 ಪ್ರೌಢ ಶಾಲೆ ಸ್ಥಾಪಿಸಿದ್ದೇನೆ. ಆದರೆ ಈಗ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು
ಕಾಣುತ್ತಿದೆ. ಹಲವು ಶಾಲೆಗಳುಶಿಥಿಲಾವಸ್ಥೆಗೆ ತಲುಪಿವೆ. ಪರಿಸ್ಥಿತಿಹೀಗಿದ್ದಾಗ ಬಡವರಿಗೆ ಶಿಕ್ಷಣದೊರೆಯುವುದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಹಳ್ಳಿ ಪ್ರದೇಶಗಳಲ್ಲಿ ಆರೋಗ್ಯ ಸಲುವಾಗಿ 6,000 ಗ್ರಾಮ ಪಂಚಾಯ್ತಿಗಳಲ್ಲಿ ಸುಸಜ್ಜಿತವಾದ 30 ಹಾಸಿಗೆಗಳಿರುವ ಹಾಗೂ ಉತ್ತಮ ಪ್ರಯೋಗಗಳನ್ನು ಒಳಗೊಂಡ ಆರೋಗ್ಯ ಕೇಂದ್ರ ಸ್ಥಾಪಿಸುವುದು ಪಂಚರತ್ನ ಯೋಜನೆಯ 2ನೇ ಗುರಿ.

ಪಕ್ಕದ ತೆಲಂಗಾಣ ರೈತರಿಗೆ ಒಂದು ಎಕರೆಗೆ ಬೆಳೆ ಬಿತ್ತನೆಗೆ ₹10 ಸಾವಿರ ನೀಡಲಾಗುತ್ತಿದೆ. ನಾವು ಅಧಿಕಾರಕ್ಕೆಬಂದರೆ, ಅದೇ ರೀತಿ ಯೋಜನೆಯನ್ನೂ ರಾಜ್ಯದಲ್ಲೂ ಜಾರಿಗೆ ತರುತ್ತೇವೆ ಎಂದರು. ಜತೆಗೆ ಪ್ರತಿ ರೈತರಿಗೂ ಮುಂಗಾರಿನಲ್ಲಿ ಅವರ ಖಾತೆಗಳಿಗೆ ಹಣ ಹಾಕುವ ವ್ಯವಸ್ಥೆ ಮಾಡುತ್ತೇವೆ ಎಂದರು.

‘ರಾಜ್ಯದ ಎಲ್ಲ ಜಿಲ್ಲೆಯಲ್ಲಿ ನಡೆಯುವ ರಥಯಾತ್ರೆ ಕಾರ್ಯಕ್ರಮಕ್ಕೆ ಹೋಗುವ ಪ್ರಯತ್ನ ಮಾಡುತ್ತೇನೆ. ‘ಪಂಚರತ್ನ ರಥಯಾತ್ರೆ ಯಾವ ಜಾತಿಗೂ ಸೇರಿದ್ದು ಅಲ್ಲ. ಜಾತಿ ಭೇದವೂ ಇಲ್ಲ. ಈ ಕಾರ್ಯಕ್ರಮ ಹಳ್ಳಿ ಹಳ್ಳಿಗೆ ಹೋಗಿ ಜನರ ಮನಸ್ಸಿಗೆ ನಾಟುವಂತಿರಬೇಕು’ ಎಂದರು.

ಜೆಡಿಎಸ್ ಮುಖಂಡ ಮೇಲೂರು ರವಿ ದೇವೇಗೌಡರ ಸಾಧನೆಗಳ ಸಾಧನೆಯ ಶಿಖಾರೋಹಣ ಪುಸ್ತಕವನ್ನು ಎಲ್ಲರಿಗೆ ಹಂಚಿದರು.

‘ರಾಜ್ಯದಲ್ಲಿರುವುದು ಸಿದ್ದರಾಮಯ್ಯ, ಬಿಜೆಪಿಯ ಜಂಟಿ ಸರ್ಕಾರ’
‘ಪಂಚರಥ್ನ ಯಾತ್ರೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ. ಆದರೆ, ಈ ಯಾತ್ರೆ ಮೂಲಕ ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರೇ ನಿಮ್ಮ ಭಾಗ್ಯಗಳಿಂದ ಬಡ ಕುಟುಂಬಗಳು ಬದುಕಲು ಆಗಲಿಲ್ಲ’ ಎಂದು ಟೀಕಿಸಿದರು.

‘ಕುಮಾರಸ್ವಾಮಿ ಹೊಂದಾಣಿಕೆ ರಾಜಕೀಯ ನಡೆಸುತ್ತಿದ್ದಾರೆ, ಅವಕಾಶವಾದಿ ರಾಜಕಾರಣಿ ಎಂದು ಟೀಕಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಮತ್ತು ಬಿಜೆಪಿಯ ಜಂಟಿ ಸರ್ಕಾರ. ಈಗ ಈ ಸರ್ಕಾರವನ್ನು ಸಿದ್ದರಾಮಯ್ಯ ಲಜ್ಜೆಗೆಟ್ಟ ಸರ್ಕಾರ ಎಂದು ಟೀಕಿಸುತ್ತಿದ್ದಾರೆ. ಆದರೆ, ಈ ಸರ್ಕಾರವನ್ನು ತಂದವರು ಯಾರು’ ಎಂದು ಪ್ರಶ್ನಿಸಿದರು.

2023ರಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿ ಪಂಚರತ್ನ ಯೋಜನೆ ಜಾರಿ ಮಾಡದಿದ್ದರೆ, ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT