ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ನದಿಗೆ ಕೈಗಾರಿಕಾ ತ್ಯಾಜ್ಯ ಬಿಡಲಾಗಿತ್ತು. ಈಗ ಮತ್ತೆ ಮರಳೂರು ಸಮೀಪದ ರೈತರ ಹೊಲಗಳಿಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಹರಿಸಲಾಗಿದೆ. ಗೌರಿಬಿದನೂರು ಹೊರ ವಲಯದಲ್ಲಿ ಹದಿನೈದು ವರ್ಷಗಳ ಹಿಂದೆ ನಿಷ್ಕ್ರಿಯವಾಗಿರುವ ಗೌರಿ ಡಿಸ್ಟಿಲರಿ ಕಾರ್ಖಾನೆಯವರು ಹೊಂಡಗಳಲ್ಲಿ ಶೇಖರಣೆ ಮಾಡಿದ್ದ ಮಲಾಸಿಸ್ ನ್ನು ಅಕ್ರಮವಾಗಿ ಮರಳೂರು ಕೆರೆಗೆ ಹರಿಯಬಿಟ್ಟಿದ್ದಾರೆ. ಕೆರೆಗೆ ಕೆರೆ ಸುತ್ತಲಿನ ಹೊಲಗಳಲ್ಲಿಯೂ ಈ ತ್ಯಾಜ್ಯ ಹರಿದಿದೆ. ಬೆಳೆಗಳಿಗೆ, ಜಲಚರಗಳಿಗೆ ಹಾಗೂ ದನಕರುಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.