ಗುರುವಾರ , ಜುಲೈ 7, 2022
20 °C

ದರ್ಗಾ ಅಭಿವೃದ್ಧಿಗೆ ಒತ್ತಾಯ: ಕೆ. ಬಾಬಾ ಫಕ್ರುದ್ದೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ‘ಪಟ್ಟಣದ ಹಜರತ್ ಸೈಯ್ಯದನಾ ಶೇಖ್ ಹುಸೇನ್ ಷಾ ವಲಿ ದರ್ಗಾ ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು’ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಬಾಬಾ ಫಕ್ರುದ್ದೀನ್ ಪ್ರತಿಕ್ರಿಯಿಸಿದರು.

‘ಪ್ರಜಾವಾಣಿ’ಯಲ್ಲಿ ‘ಅಭಿವೃದ್ಧಿ ಕಾಣದ ಹುಸೇನ್ ಷಾ ವಲಿ ದರ್ಗಾ’ ಬಗ್ಗೆ ವಿಶೇಷ ವರದಿ ಮಾಡಲಾಗಿದೆ. ಪಟ್ಟಣದಲ್ಲಿ ಹುಸೇನ್ ಷಾ ವಲಿ ಸಂತ ಹಾಗೂ ಪವಾಡ ಪುರುಷರಾಗಿದ್ದರು. ಹಿಂದೂ-ಮುಸ್ಲಿಂ ಸಮುದಾಯವರ ಭಾವೈಕ್ಯತೆಗೆ ಜೀವನ ಮುಡಿಪಿಟ್ಟಿದ್ದರು. ಸೂಫಿ ಮತ್ತು ಅಚಲ ಪರಂಪರೆ ಮೈಗೂಡಿಸಿಕೊಂಡಿದ್ದರು ಎಂದು ಹೇಳಿದರು.

ಇಂತಹ ಸಂತರ ದರ್ಗಾವನ್ನು ವಕ್ಫ್ ಮಂಡಳಿ ಅಧಿಕಾರಿಗಳು ದಶಕ ಕಳೆದರೂ ಅಭಿವೃದ್ಧಿಪಡಿಸಿಲ್ಲ. ಸರ್ಕಾರದಿಂದ ಮಸೀದಿ, ದರ್ಗಾ ಅಭಿವೃದ್ಧಿಗೆ ಕೋಟ್ಯಂತರ ಹಣ ಬಂದರೂ ನಿರೀಕ್ಷಿದಷ್ಟು ಪ್ರಗತಿ ಹೊಂದಿಲ್ಲ. ಚಿಂತಾಮಣಿಯ ಮುರಗಮಲ್ಲಾ ದರ್ಗಾಗೆ ಕೋಟ್ಯಂತರ ಹಣ ವ್ಯಯ ಮಾಡಿರುವ ವಕ್ಫ್ ಮಂಡಳಿಯು ಬಾಗೇಪಲ್ಲಿ ದರ್ಗಾವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು