ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೇತ್ರದ ಅಭಿವೃದ್ಧಿ ಹೆಚ್ಚಿನ ಆದ್ಯತೆ’

Last Updated 7 ಫೆಬ್ರುವರಿ 2020, 10:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕ್ಷೇತ್ರದ ಜನರ ಅಭಿವೃದ್ಧಿಗಾಗಿ ನಾನು ಶಾಸಕ ಸ್ಥಾನವನ್ನು ತ್ಯೆಜಿಸಿದೆ, ಆದರೆ ಕ್ಷೇತ್ರದ ಜನರು ನನಗೆ ರಾಜ್ಯ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಿ ಆಶೀರ್ವದಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ನೂತನ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಗುರುವಾರ ಸಂಜೆ ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಮೆರವಣಿಗೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಜನರ ಆಶೀರ್ವಾದದಿಂದ ಸಾಮಾನ್ಯ ಶಿಕ್ಷಕನ ಮಗ ಇಂದು ರಾಜ್ಯ ಸಂಪುಟ ದರ್ಜೆ ಸಚಿವನಾಗಿದ್ದಾನೆ. ಕ್ಷೇತ್ರದ ಶಾಸಕರದವರೊಬ್ಬರು 30 ವರ್ಷಗಳ ನಂತರ ಸಚಿವರಾಗಿದ್ದಾರೆ’ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಾದ ನಂತರ ಕ್ಷೇತ್ರದಿಂದ ಮೊದಲ ಬಾರಿಗೆ ನಿಮ್ಮ ಆಶೀರ್ವಾದದಿಂದ ಸಚಿವನಾಗಿದ್ದೇನೆ. ರೈತರಿಗೆ ನೀಡಿದ ಮಾತು ಈಡೇರಿಸಿದ ಖುಷಿ ಹೆಚ್ಚಾಗಿದೆ. ನಾನು ಸಚಿವನಾಗುತ್ತಿದ್ದಂತೆ ಎಚ್‌.ಎನ್‌. ವ್ಯಾಲಿಯ ಗಂಗೆ ಕಂದವಾರ ಕೆರೆಗೆ ಆಗಮಿಸಿದ್ದಾಳೆ. ಜನತೆಗೆ ನೀಡಿದ್ದ ಮಾತು ತಪ್ಪಲಿಲ್ಲ. ಕ್ಷೇತ್ರದ ಜನತೆಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದರು.

ವೈದ್ಯಕೀಯ ಕಾಲೇಜಿಗಾಗಿ ನಾನು ಶಾಸಕ ಸ್ಥಾನವನ್ನು ತ್ಯಾಗ ಮಾಡಿದೆ. ಆದರೆ, ಕ್ಷೇತ್ರದ ಜನರು ನನ್ನನ್ನು ಸಚಿವನಾಗಿ ಆಯ್ಕೆ ಮಾಡಿದರು. ಕ್ಷೇತ್ರದ ಜನರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದದಿಂದ ನಾನು ಸಚಿವನಾಗಿದ್ದು, ವೈದ್ಯಕೀಯ ಕಾಲೇಜು ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಶೀಘ್ರವೇ ಆಗಲಿದೆ ಭರವಸೆ ನೀಡಿದರು.

ಪ್ರಸ್ತುತ ನಗಸಭಾ ಚುನಾವಣಯೆಲ್ಲಿ ಬಿಜೆಪಿಯ 24 ಮಂದಿ ಅಧಿಕೃತ ಅಭ್ಯರ್ಧಿಗಳು ಮತ್ತು 7 ಮಂದಿ ನಮ್ಮ ಅನುಯಾಯಿಗಳು ಸ್ಪರ್ಧೆ ಮಾಡಿದ್ದಾರೆ. ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ನಗರದಲ್ಲಿ ಸುಸಜ್ಜಿತ ರಸ್ತೆ, ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಕ್ಷಣಿಕ ಸುಖಕ್ಕಾಗಿ 5 ವರ್ಷದ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ಸಚಿವನಾಗಿ ಮಾತು ನೀಡುತ್ತಿದ್ದೇನೆ. ಚಿಕ್ಕಬಳ್ಳಾಪುರ ನಗರವನ್ನು ಬೆಂಗಳೂರಿಗೆ ಪರ್ಯಾಯವಾಗಿ ಉಪ ನಗರ ಮಾಡಲು ಸಹಕರಿಸಿ ಎಂದು ಕೋರಿದರು.

ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ಚಿಂತನೆ ಬಿಜೆಪಿಗೆ ಇದೆ. ನಗರ ವ್ಯಾಪ್ತಿಯ ಪ್ರತಿ ವಾರ್ಡಿನಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ತರೆಯಲಾಗಿದೆ. ಇದರಿಂದ ಬಡವರಿಗೆ ಶುದ್ಧ ನೀರು ಲಭಿಸುತ್ತಿದೆ. ಇಂತಹ ಒಂದು ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಮಾಡಿಲ್ಲ, ನಗರಸಭೆಯ ಮೇಲೆ ಕೇಸರಿ ಭಾವುಟ ಹಾರಬೇಕು ಇದಕ್ಕೆ ನಿಮ್ಮ ಸಹಕಾರ ಅಗತ್ಯವಿದೆ ಎಂದರು.

ಕಾಂಗ್ರೆಸ್‌ ಅಪಪ್ರಚಾರ
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್‌ನವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಸುಧಾಕರ್‌ ಆರೋಪಿಸಿದರು. ನರೇಂದ್ರ ಮೋದಿ ಪ್ರಧಾನಿಯಾಗಿರುವ ಕೊನೆಯ ಭಾಷಣದವರೆಗೂ ದೇಶವನ್ನು ಕಾಪಾಡುತ್ತಾರೆ. ಭಾರತೀಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT