ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ಕಲಿಕೆ, ಫಲಿತಾಂಶ ಸುಧಾರಿಸಲು ಮತ್ತು ಉತ್ತಮ ಬೋಧನೆಗೆ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಸಂಪೂರ್ಣವಾಗಿ ಶಾಲೆಯಲ್ಲಿ ಹಾಜರಿರುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿಯೇ ಹಾಜರಿರಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶಿಸಿದೆ.

ಸರ್ಕಾರ ಈ ಆದೇಶ ಪೋಷಕರು ಮತ್ತು ಪ್ರಜ್ಞಾವಂತರು ಉತ್ತಮ ನಿರ್ಧಾರ ಎನ್ನುತ್ತಿದ್ದರೆ, ಶಿಕ್ಷಕ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ.

ಶಿಕ್ಷಕರು, ಮುಖ್ಯ ಶಿಕ್ಷಕರು ಯಾವುದೇ ತರಬೇತಿ ಕಾರ್ಯಕ್ರಮಗಳಿಗೆ, ಕಾರ್ಯಾಗಾರಗಳಿಗೆ, ಸಭೆಗಳಿಗೆ ಇತರೆ ಚಟುವಟಿಕೆಗಳಿಗೆ ಶಾಲಾ ದಿನಗಳಲ್ಲಿ, ಶಾಲಾ ಸಮಯದಲ್ಲಿ ನಿಯೋಜನೆ, ಓಓಡಿ, ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕ ಕಳುಹಿಸಬಾರದು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹ ಇಂತಹ ನಿರ್ದೇಶನಗಳನ್ನು ನೀಡಬಾರದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಕೆಲವು ಶಿಕ್ಷಕರು ಮತ್ತು ಇಲಾಖೆಯ ಅಧಿಕಾರಿಗಳು ಆದೇಶವನ್ನು ಸಮರ್ಥಿಸಿಕೊಂಡರೆ ಮತ್ತಷ್ಟು ಮಂದಿ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮತ್ತಷ್ಟು ಶಿಕ್ಷಕರು ಆದೇಶ ಅನುಷ್ಠಾನ ಕಷ್ಟ ಸಾಧ್ಯ ಎನ್ನುತ್ತಿದ್ದಾರೆ.

ಸರ್ಕಾರದ ಈ ಆದೇಶ ಹೊರ ಬಿದ್ದ ನಡುವೆಯೇ ಜಿಲ್ಲೆಯಲ್ಲಿ ಶಾಲಾ ಅವಧಿಯಲ್ಲಿಯೇ ಎರಡು ಕಾರ್ಯಾಗಾರಗಳು ಶಿಕ್ಷಕರಿಗೆ ನಡೆದಿವೆ. ಜು.8ರಂದು ಮಧ್ಯಾಹ್ನ 2.30ಕ್ಕೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಸಂಬಂಧ ಚರ್ಚಿಸುವ ಸಲುವಾಗಿ ಸರ್ಕಾರಿ, ಅನುದಾನಿತ, ಅಲ್ಪಸಂಖ್ಯಾತ ಮತ್ತು ಎಲ್ಲ ವಸತಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಸಹ ನಡೆಸಲಾಗಿದೆ.

ಮುಖ್ಯ ಶಿಕ್ಷಕರು ತಮ್ಮ ಬೋಧನೆ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದರು.

ಚೇಳೂರು , ಬಾಗೇಪಲ್ಲಿ, ಗೌರಿಬಿದನೂರು ಮತ್ತು ಚಿಂತಾಮಣಿ ತಾಲ್ಲೂಕಿನ ಗಡಿಭಾಗದ ಶಾಲೆಗಳ ಮುಖ್ಯ ಶಿಕ್ಷಕರು ಪಾಠಗಳನ್ನು ಪೂರ್ಣಗೊಳಿಸಿ ಈ ನಿಗದಿತ ಸಮಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗಿ ಆಗಿದ್ದಾರೆ. ಅಂದಹಾಗೆ ಈ ಮುಖ್ಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಜಿಲ್ಲಾ ಕೇಂದ್ರಕ್ಕೆ ಬರಬೇಕು ಎಂದರೆ ಅವರು ಪಾಠ ಮಾಡಿ ಬರಲು ಸಾಧ್ಯವೇ ಎನ್ನುವ ಪ್ರಶ್ನೆ ಶಿಕ್ಷಕ ವಲಯದಿಂದೇ ಕೇಳಿ ಬಂದಿತ್ತು.

ಮತ್ತೊಂದೆಡೆ ಗೌರಿಬಿದನೂರಿನಲ್ಲಿ ಬುಧವಾರ ಶಾಲೆ ಅವಧಿಯಲ್ಲಿಯೇ ಶಿಕ್ಷಕರನ್ನು ಮತದಾರರ ಪಟ್ಟಿ ತಯಾರಿಕೆಗೆ ಬಳಸಿಕೊಳ್ಳಲಾಗಿದೆ.

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025–26ಕ್ಕೆ ಸಂಬಂಧಿಸಿದಂತೆ ಆರೋಗ್ಯ ಪೂರ್ಣ ಮತದಾರರ ಪಟ್ಟಿ ತಯಾರಿಸುವ ಕುರಿತು ಜು.16ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಿರೇಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭೆ ಏರ್ಪಡಿಸಲಾಗಿದೆ. ಸಭೆಗೆ ಎಲ್ಲ ಬಿಎಲ್ಒ ಮತ್ತು ಬಿಎಲ್ಒ ಮೇಲ್ವಿಚಾರಕರು ತಪ್ಪದೆ ಹಾಜರಾಗಬೇಕು ಎಂದು ಗೌರಿಬಿದನೂರು ತಹಶೀಲ್ದಾರರು ಸೂಚನೆ ನೀಡಿದ್ದರು. ಈ ಪ್ರಕಾರ ಬುಧವಾರ ಸಭೆ ನಡೆದಿದೆ.

ಗೌರಿಬಿದನೂರು ಕೋಟೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕಾದಲವೇಣಿ ಪ್ರೌಢಶಾಲೆ, ಸರ್ಕಾರಿ ಕಾಲೇಜಿಗಳ ಉಪನ್ಯಾಸಕರು ಈ ಸಭೆಗೆ ಹಾಜರಾಗಬೇಕು ಎಂದು ನಿರ್ದೇಶನ ನೀಡಲಾಗಿದೆ.

ನಿರ್ಬಂಧದ ಸುತ್ತೋಲೆಯ ನಂತರ ಜಿಲ್ಲೆಯಲ್ಲಿ ಎರಡು ಕಾರ್ಯಾಗಾರಗಳು ನಡೆದಿವೆ.

‘ಬಿಸಿಯೂಟ, ಮೊಟ್ಟೆ ವಿತರಣೆ ಹೀಗೆ ನಾನಾ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶ ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತದೆ ಎನ್ನುವುದೇ ಪ್ರಶ್ನೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಪೂರ್ಣ ಪ್ರಮಾಣದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಿಸಬೇಕು. ಆ ನಂತರ ಈ ಆದೇಶ ಅನುಷ್ಠಾನ ಸಾಧ್ಯವಾಗುತ್ತದೆ ಎನ್ನುತ್ತಾರೆ.

‘ಸಭೆಗಳು, ಕಾರ್ಯಾಗಾರ ಎಂದು ಶಿಕ್ಷಕರು ಶಾಲೆಗಳಿಂದ ಹೆಚ್ಚು ಸಮಯ ಹೊರಗೆ ಉಳಿಯುತ್ತಿದ್ದರು. ಆದರೆ ಸರ್ಕಾರದ ಈ ಆದೇಶದಿಂದ ಅವರ ಚಟುವಟಿಕೆ ಶಾಲೆ ಆವರಣದಲ್ಲಿಯೇ ಇರುತ್ತದೆ. ಇದು ಒಳ್ಳೆಯ ತೀರ್ಮಾನ’ ಎಂದು ಪೋಷಕರು ನುಡಿಯುವರು.

ಕಾರ್ಯಕ್ರಮಗಳಿಗೆ ಮಕ್ಕಳ ಬಳಕೆಗೆ ತಡೆ!

‘ನಮ್ಮ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಿ’ ಎಂದು ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಮನವಿ ಸಲ್ಲಿಸುತ್ತಿದ್ದವು. ಸರ್ಕಾರದ ಈ ನಿರ್ಬಂಧದ ಆದೇಶದ ತರುವಾಯವೂ ಕೆಲವು ಇಲಾಖೆಗಳು ಈ ಮನವಿ ಸಲ್ಲಿಸಿದ್ದರು. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ‘ವಿದ್ಯಾರ್ಥಿಗಳನ್ನು ಶಾಲೆಯ ಅವಧಿಯಲ್ಲಿ ಹೊರಗೆ ಕಳುಹಿಸುವಂತಿಲ್ಲ’ ಎನ್ನುವ ಆದೇಶದ ಬಗ್ಗೆ ತಿಳಿಸಿದಾಗ ಸುಮ್ಮನಾಗಿದ್ದಾರೆ. ಕಳೆದ ತಿಂಗಳು ನಡೆದ ಕೆಂಪೇಗೌಡ ಜಯಂತಿ ಕನ್ನಡ ಭವನ ಉದ್ಘಾಟನೆಯಲ್ಲಿಯೂ ಸಭಾಂಗಣದಲ್ಲಿ ಕಿಕ್ಕಿರಿದಿದ್ದು ವಿದ್ಯಾರ್ಥಿಗಳೇ. ‘ಕಾರ್ಯಕ್ರಮಕ್ಕೆ ಮಕ್ಕಳನ್ನು ಕಳುಹಿಸಿ ಎಂದು ವಿವಿಧ ಇಲಾಖೆಯವರು ಕೇಳುತ್ತಿದ್ದರು. ಸಚಿವರು ಶಾಸಕರ ಈ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲು ಆಗುತ್ತಿರಲಿಲ್ಲ. ಆದರೆ ಈಗ ಸುತ್ತೋಲೆ ಇದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.