ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪು ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಸಿಬ್ಬಂದಿ ಮುಷ್ಕರಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಶೇ 70ರಷ್ಟು ಬಸ್ ಗಳು ಈಗಾಗಲೇ ಸಂಚಾರಕ್ಕೆ ಇಳಿದಿವೆ.

ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಬಂದ್ ಇದೆ ಎನ್ನುವುದನ್ನು ತಿಳಿದು ಬಹಳಷ್ಟು ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಹೆಚ್ಚಿನ ಬಸ್ ಗಳು ಬೆಳಗಿನ ವೇಳೆ ಸಂಚರಿಸುತ್ತವೆ. ಅದೇ ಪ್ರಕಾರ ಇಂದೂ ಸಹ ನಿತ್ಯದಂತೆ ಬಸ್ ಸಂಚಾರ ವಿದೆ. ನಗರದ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಗೌರಿಬಿದನೂರು, ದೊಡ್ಡಬಳ್ಳಾಪುರ, ಬಾಗೇಪಲ್ಲಿ, ಕೋಲಾರ, ತುಮಕೂರು ಹೀಗೆ ವಿವಿಧ ಕಡೆಗಳಿಗೆ ಚಿಕ್ಕಬಳ್ಳಾಪುರ ನಿಲ್ದಾಣದಿಂದ ಮುಖ ಮಾಡಿವೆ.

ಚಿಕ್ಕಬಳ್ಳಾಪುರ ಘಟಕದಿಂದ ಶೇ 80ರಷ್ಟು ಬಸ್ ಗಳು ಕಾರ್ಯಾಚರಣೆ ಗೆ ಇಳಿದಿವೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ಕೆಎಸ್ ಆರ್ ಟಿಸಿ ಚಿಕ್ಕಬಳ್ಳಾಪುರ ನಿಲ್ದಾಣ ಅಧಿಕಾರಿ ನಾಗೇಶ್ ತಿಳಿಸಿದರು.

ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಗಾಗಿ 1059 ಖಾಸಗಿ ವಾಹನಗಳನ್ನು ಬಳಸಿಕೊಳ್ಳಲು ಮುಂದಾಗಿತ್ತು. ಆದರೆ ಈಗ ಕೆಎಸ್ ಆರ್ ಟಿಸಿ ಬಸ್ ಗಳೇ ಚಾಲನೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.