ಶಿಡ್ಲಘಟ್ಟ: ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ಊರ ಹೊರವಲಯದಲ್ಲಿನ ಕೆರೆಗಳಿಗೆ ಹಕ್ಕಿಗಳು ಅತಿಥಿಗಳಂತೆ ಆಗಮಿಸುತ್ತವೆ. ಕೆರೆಯಲ್ಲಿ ನೀರು ಕಡಿಮೆಯಾಗಿರುವೆಡೆ ಅವುಗಳು ಆಹಾರವನ್ನು ಹುಡುಕುತ್ತಿರುವುದು ಕಂಡುಬರುತ್ತಿದೆ.

ದೊಡ್ಡ ಗಾತ್ರದ ನೀರು ಹಕ್ಕಿಗಳಿಗೆಲ್ಲ ಮೊಟ್ಟೆ ಇಟ್ಟು ಮರಿ ಮಾಡುವ ಕಾಲವಿದು. ಹಾಗಾಗಿ ಕೆರೆ, ಕುಂಟೆ ಮತ್ತು ಜೌಗು ಪ್ರದೇಶಗಳನ್ನರಸಿ ಹಕ್ಕಿಗಳು ಬರುತ್ತವೆ. ಗುಂಪು ಗುಂಪಾಗಿ ಎತ್ತರದ ಮರಗಳ ಮೇಲೆ ಕಡ್ಡಿಗಳನ್ನು ಒಟ್ಟು ಮಾಡಿ ಗೂಡು ಕಟ್ಟುವ ಇವು ಗುಂಪಲ್ಲೇ ಆಹಾರಕ್ಕಾಗಿ ಕೆರೆಗಳ ಅಂಚಿನಲ್ಲಿ ಕಾಣಿಸುತ್ತವೆ.

ಬೆಳ್ಳಕ್ಕಿಗಳು, ವಿವಿಧ ರೀತಿಯ ಬಾತುಗಳು ಗುಂಪಿನಲ್ಲಿ ಕಂಡುಬರುತ್ತವೆ. ಕೆಸರು ಗೊರವ ಅಥವಾ ನೀರು ಗೊರವ (ಬ್ಲಾಕ್ ವಿಂಗ್ಡ್ ಸ್ಟಿಲ್ಟ್), ಚಿಟ್ಟುಗೊರವ (ಲಿಟಲ್ ರಿಂಗ್ಡ್ ಪ್ಲೋವರ್), ಟಿಟ್ಟಿಭ ಅಥವಾ ತೇನೆ ಹಕ್ಕಿ (ರೆಡ್ ವ್ಯಾಟಲ್ಡ್ ಲ್ಯಾಪ್ ವಿಂಗ್), ಅಡವಿ ಗದ್ದೆಗೊರವ (ವುಡ್ ಸ್ಯಾಂಡ್ ಪೈಪರ್), ಗುಳುಮುಳುಕ (ಲಿಟಲ್ ಗ್ರೇಬ್), ಪುಟ್ಟ ನೀರು ಕಾಗೆ (ಲಿಟಲ್ ಕಾರ್ಮೊರೆಂಟ್), ಬೂದು ಕೊಕ್ಕರೆ (ಗ್ರೇ ಹೆರಾನ್), ದಾಸಗೋರೆ (ಸ್ಪಾಟ್ ಬಿಲ್ಡ್ ಡಕ್), ನೀಲಿ ನಾಮಗೋಳಿ (ಪರ್ಪಲ್ ಮೋರ್ ಹೆನ್), ಮಿಂಚು ಕೆಂಬರಲು (ಗ್ಲಾಸಿ ಐಬಿಸ್), ಕೊಳಬಕ (ಪಾಂಡ್ ಹೆರಾನ್) ಮುಂತಾದ ಹಕ್ಕಿಗಳನ್ನು ನಾವಿಲ್ಲಿ ಕಾಣಬಹುದಾಗಿದೆ.

ಕೆರೆಯ ನೀರಿನಲ್ಲಿ ಸಿಗುವ ಮೀನು, ಏಡಿ, ಕಪ್ಪೆ, ಶಂಖದ ಹುಳುಗಳು ಮೊದಲಾದ ಜಲಚರಗಳನ್ನು ಈ ಹಕ್ಕಿಗಳು ಬೆನ್ನು ಗೂನು ಮಾಡಿಕೊಂಡು ತಾಳ್ಮೆಯಿಂದ ಕಾದು ಹಿಡಿದು ತಿನ್ನುತ್ತಿವೆ.

ಚಿಟ್ಟುಗೊರವ (ಲಿಟಲ್ ರಿಂಗ್ಡ್ ಪ್ಲೋವರ್) ಎಂಬ ಹಕ್ಕಿಯು ಉತ್ತರ ಭಾರತದಿಂದ ಬಂದಿದೆ. ಈ ಹಕ್ಕಿ ಪುಟ್ಟ ಕೌಜು ಹಕ್ಕಿಯ ಗಾತ್ರವಿದೆ. ಬಾಲ, ರೆಕ್ಕೆ, ಬೆನ್ನು ಹಾಗೂ ತಲೆಯ ಭಾಗ ಕಂದುಬಣ್ಣ, ಹಳದಿ ಕಾಲುಗಳು, ಪುಟ್ಟ ಕಪ್ಪು ಕೊಕ್ಕನ್ನು ಹೊಂದಿದೆ. ಕುತ್ತಿಗೆಗೆ ಕಪ್ಪು ಬಣ್ಣದ ಪಟ್ಟಿಯನ್ನು ಕಟ್ಟಿಕೊಂಡಂತೆ ಕಾಣುವ ಗುರುತಿದೆ. ಗಡ್ಡಭಾಗ ಹಾಗೂ ಹೊಟ್ಟೆ ಅಚ್ಚ ಬಿಳುಪಿನಿಂದ ಕೂಡಿದೆ.

ಕೆರೆಗಳನ್ನು ಸ್ವಚ್ಛವಾಗಿರಿಸುವುದರಿಂದ ಅಂತರ್ಜಲ ಮರುಪೂರಣ, ಅನೇಕ ಜಲಚರಗಳ ಬದುಕು ಇನ್ನಿತರ ಅನುಕೂಲಗಳಿವೆ. ಪ್ರತಿವರ್ಷ ಬರುವ ವಲಸೆ ಹಕ್ಕಿಗಳಿಗೂ ತಾಣವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.