ಶಿಡ್ಲಘಟ್ಟ: ಹಾಲು ಎಲ್ಲ ವಯೋಮಾನದವರೂ ಸೇವಿಸಬಹುದಾದ ಉತ್ಕೃಷ್ಟವಾದ ಪೌಷ್ಟಿಕ ಆಹಾರ. ನಿತ್ಯವೂ ಹಾಲು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಕೋಚಿಮುಲ್ನ ಶಿಬಿರ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಡಾ.ರವಿ ಕಿರಣ್ ಹೇಳಿದರು.

‘ವಿಶ್ವ ಹಾಲು ದಿನ’ ಅಂಗವಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಒಳ ರೋಗಿಗಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಹಾಲಿನ ಪ್ಯಾಕೇಟ್ ವಿತರಿಸಿ ಮಾತನಾಡಿದರು.

ಹಾಲು ಉತ್ಕೃಷ್ಟ, ಪೌಷ್ಟಿಕ ಪದಾರ್ಥ ಮಾತ್ರವಲ್ಲ ನಮ್ಮ ಬದುಕು, ಸಂಪ್ರದಾಯದಲ್ಲಿ ಪವಿತ್ರ ಸ್ಥಾನವನ್ನು ಹೊಂದಿದೆ. ಆಹಾರವಾಗಿ ಸೇವಿಸುವ ಜತೆಗೆ ಪೂಜೆಯಲ್ಲೂ ಹಾಲನ್ನು ಬಳಸುತ್ತಾರೆ. ಹಾಲು ಅಷ್ಟರಮಟ್ಟಿಗೆ ಪವಿತ್ರ ಸ್ಥಾನ ಪಡೆದುಕೊಂಡಿದೆ ಎಂದರು.

ಹಾಲಿನಲ್ಲಿ ಪ್ರೊಟೀನ್, ವಿಟಮಿನ್, ಕಾರ್ಬೋ ಹೈಡ್ರೈಟ್, ಕ್ಯಾಲ್ಸಿಯಂ ಇನ್ನಿತರೆ ದೈಹಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳು ಕೂಡ ಅಧಿಕ ಪ್ರಮಾಣದಲ್ಲಿದೆ ಎಂದರು.

ಬೇರೆಲ್ಲಾ ಕಂಪನಿಗಳಿಗೆ ಹೋಲಿಸಿದರೆ ನಂದಿನಿ ಹಾಲು ಗುಣಮಟ್ಟದಿಂದ ಕೂಡಿದ್ದು ಹಾಲು ಸೇರಿದಂತೆ ಎಲ್ಲ ಉತ್ಪನ್ನಗಳನ್ನು ಆರೋಗ್ಯ ದೃಷ್ಟಿಯಿಂದ ಉತ್ಪಾದಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ ಎಂದರು.

ಡಾ.ಮಂಜಯ್ಯ ನಾಯ್ಕ್, ಕೋಚಿಮುಲ್ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.