ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕು ತೋರಿಸಿ ಮಹಿಳೆ ಸರ ಕಸಿದರು

Last Updated 24 ಫೆಬ್ರವರಿ 2021, 3:58 IST
ಅಕ್ಷರ ಗಾತ್ರ

ಚಿಂತಾಮಣಿ: ಕೋಲಾರ ರಸ್ತೆಯ ಕುರುಬೂರು ಫಾರಂ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಮಹಿಳೆಯನ್ನು ತಡೆದ ದುಷ್ಕರ್ಮಿಗಳು, ಚಾಕು ತೋರಿಸಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಕುರುಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಜಲಹಳ್ಳಿ ಗ್ರಾಮದ ಗಾಯತ್ರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ದ್ವಿಚಕ್ರವಾಹನದಲ್ಲಿ ಮೈಲಾಂಡ್ಲಹಳ್ಳಿಗೆ ಬಂದು, ಅಲ್ಲಿಂದ ಬಸ್ಸಿನಲ್ಲಿ ಚಿಂತಾಮಣಿಗೆ ಹೋಗುತ್ತೇನೆ. ಬಹಳ ಹೊತ್ತಾದರೂ ಬಸ್ ಸಿಗದಿದ್ದಾಗ ದ್ವಿಚಕ್ರವಾಹನದಲ್ಲಿ ಚಿಂತಾಮಣಿಗೆ
ಹೋಗುತ್ತಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಕುರುಬೂರುಫಾರಂ- ಕಾಚಹಳ್ಳಿ ನಡುವೆ ಬರುತ್ತಿದ್ದಾಗ ಹಿಂದಿನಿಂದ ಬಂದ ಎರಡು ದ್ವಿಚಕ್ರವಾಹನಗಳು ನನ್ನ ಗಾಡಿಯ ಹಿಂದೆ ಮುಂದೆ ನಿಂತವು. ಹಿಂಬದಿ ಕುಳಿತಿದ್ದ ವ್ಯಕ್ತಿ ಕುತ್ತಿಗೆಗೆ ಕೈಹಾಕಿ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ. ತಪ್ಪಿಸಿಕೊಳ್ಳಲು ದ್ವಿಚಕ್ರವಾಹನವನ್ನು ಪಕ್ಕಕ್ಕೆ ತಿರುಗಿಸಲು ಪ್ರಯತ್ನಿಸಿದಾಗ ಮುಂದಿನ ಗಾಡಿಯಲ್ಲಿದ್ದ ವ್ಯಕ್ತಿ ಚಾಕು ತೋರಿಸಿ ಬೆದರಿಸಿ, ಸರವನ್ನು ಕಿತ್ತುಕೊಂಡು ಚಿಂತಾಮಣಿ ಕಡೆಗೆ ಪರಾರಿಯಾದರು’ ಎಂದು ತಿಳಿಸಿದ್ದಾರೆ.

‘ಚಿನ್ನ ಲೇಪಿತ ಸರವಾಗಿದ್ದು, ಎರಡು ಮಾಂಗಲ್ಯಗಳು ಮಾತ್ರ ಬಂಗಾರದ್ದಾಗಿವೆ. ಸುಮಾರು ₹25 ಸಾವಿರ ಮೌಲ್ಯದ್ದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT