ಬಾಗೇಪಲ್ಲಿ: ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಅಧಿಕಾರ ಉಳಿಸಲು ದಲಿತರ, ಹಿಂದುಳಿದ, ಅಲ್ಪಸಂಖ್ಯಾತ ಜನರ ನಡುವೆ ಕೋಮುದ್ವೇಷ ಹರಡಿ, ವಿಭಜನೆ ಮಾಡುತ್ತಿವೆ. ಇದರ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು ಎಂದು ಸಿಪಿಎಂ ಮುಖಂಡ ಡಾ.ಅನಿಲ್ಕುಮಾರ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ, ಸೌಹಾರ್ದ ಸಾಮರಸ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹಿಂದುತ್ವದ ಹೆಸರಿನಲ್ಲಿ, ಆಮಿಷ, ಹಣ ಹಂಚಿಕೆ ಮೂಲಕ ಕಾಂಗ್ರೆಸ್, ಬಿಜೆಪಿ ಅಧಿಕಾರ ಪಡೆದು ನಂತರ ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದಿಲ್ಲ. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ, ಇಂದಿಗೂ ಕೆಳವರ್ಗದ ಜನರಿಗೆ ನಿವೇಶನ, ಮನೆ ಇಲ್ಲ. ಅರಣ್ಯಭೂಮಿಗೆ ಸಾಗುವಳಿ ಚೀಟಿ ನೀಡಿಲ್ಲ. ಆರೋಗ್ಯ, ಶಿಕ್ಷಣ, ಉದ್ಯೋಗ ಸಿಗುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಜಾತಿ, ಧರ್ಮಗಳ ನಡುವೆ ಕೋಮುದ್ವೇಷ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ. ಅಶಾಂತಿ ಸೃಷ್ಟಿಸಿದವರು ತಪ್ಪಿಸಿಕೊಳ್ಳುತ್ತಾರೆ. ಕೂಲಿ, ಕಾರ್ಮಿಕರು ಬಲಿಯಾಗಿ ಜೈಲಿಗೆ ಹೋಗುತ್ತಾರೆ. ಅನೇಕ ಕುಟುಂಬಗಳು ಬಲಿಪಶು ಆಗಿವೆ. ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕು ಎಂದರು.

ಅಲ್ಪಸಂಖ್ಯಾತರು ಕೂಲಿಕೆಲಸ ಮಾಡುವ ಶ್ರಮಜೀವಿಗಳು. ಸರ್ಕಾರಗಳು ಸಮುದಾಯಗಳ ಏಳಿಗೆಗೆ ಕೋಟ್ಯಂತರ ಹಣ ಜಾರಿ ಮಾಡಲಾಗಿದೆ ಎಂದು ಜಾಹೀರಾತುಗಳಲ್ಲಿ ಪ್ರಕಟ ಮಾಡುತ್ತದೆ. ಆದರೆ ಇಂದಿಗೂ ಸಹ ಕಟ್ಟಕಡೆಯ ಪ್ರಜೆಗೆ ಸೌಲಭ್ಯ ಸಿಕ್ಕಿಲ್ಲ ಎಂದರು.

ಸಿಪಿಎಂ ನಾಯಕ ತುಮಕೂರಿನ ಮುಜೀಬ್ ಮಾತನಾಡಿ, ಬಿಜೆಪಿ ಹಿಂದುತ್ವದ ಮೂಲಕ ಜನರನ್ನು ಹುಬ್ಬೇರಿಸುವಂತೆ ಮಾಡಿದೆ. ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿನ ಕಪ್ಪು ಹಣ ತಂದು ಖಾತೆಗೆ ₹15 ಲಕ್ಷ ಹಾಕುತ್ತೇನೆ. 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ನರೇಂದ್ರಮೋದಿ ಭರವಸೆ ನೀಡಿದರು. ಆದರೆ ನರೇಂದ್ರಮೋದಿ ಪ್ರಧಾನಮಂತ್ರಿ ಆದ ನಂತರ ₹130 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅಲ್ಪಸಂಖ್ಯಾತರ, ದಲಿತರ, ಹಿಂದುಳಿದವರ ಮೇಲೆ ದಾಳಿ, ಹಲ್ಲೆ, ಹತ್ಯೆಗಳು ಹೆಚ್ಚಾಗಿವೆ. ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುತ್ತಿವೆ. ಅಲ್ಪಸಂಖ್ಯಾತರು ಹಕ್ಕು ಪಡೆಯಲು ಸಂಘಟಿತರಾಗಬೇಕು ಎಂದರು.

ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೋಟ್ಯಂತರ ಹಣ ವ್ಯಯ ಮಾಡಲಾಗಿದೆ ಎಂದು ಬಿಜೆಪಿ, ಕಾಂಗ್ರೆಸ್ ಸುಳ್ಳು ಹೇಳಿಕೊಂಡಿದೆ. ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ ಎಂದರು.

ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಸಿಪಿಎಂ ಹೋರಾಟ ಮಾಡುತ್ತಿದೆ. ಭೂಮಿ, ಮನೆ, ನಿವೇಶನ ಕಲ್ಪಿಸಲು ಸಂಘಟಿತರಾಗಬೇಕು. ಸಂಘಟಿತರಾಗಿ ಹೋರಾಟಗಳ ಮೂಲಕ ಹಕ್ಕುಗಳನ್ನು ಪಡೆಯಬೇಕು ಎಂದರು.

ಅಲ್ಪಸಂಖ್ಯಾತರ ಮುಖಂಡ ಷಫೀವುಲ್ಲಾ, ರಶೀದ್ಸಾಬ್, ಮೊಹಿದ್ದೀನ್, ಜಿ.ಮುಸ್ತಾಫ, ಇಮ್ರಾನ್, ರಫೀಕ್ ಅಹಮದ್, ನೆಟಕುಂಟಪಲ್ಲಿ ಜಹೀಗ್ಬೇಗ್, ಡಾ.ಮೌಲಾಷರೀಫ್, ಚಿಂತಾಮಣಿ ಬಾಬಾಜಾನ್, ಮೆಹಬೂಬ್, ರಫೀ, ಬಿ.ಎಚ್.ರಫೀಕ್, ಬಿ.ಎಚ್.ಸಾದಿಕ್, ತಬ್ರೇಜ್, ದಿಲಾನ್, ಮುಸ್ತಾಫ, ಸಿದ್ದಗಂಗಪ್ಪ, ಎಂ.ಎನ್.ರಘುರಾಮರೆಡ್ಡಿ, ಬಿಳ್ಳೂರು ನಾಗರಾಜ್, ಅಶ್ವತ್ಥಪ್ಪ, ಚನ್ನರಾಯಪ್ಪ, ಜಿ.ಕೃಷ್ಣಪ್ಪ, ಹರೀಶ್, ಸೋಮಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.