ಮಂಗಳವಾರ, ಜೂಲೈ 7, 2020
28 °C

ಚಿಕ್ಕಬಳ್ಳಾಪುರ | ದೇವಾಲಯಗಳಲ್ಲಿ ತೀರ್ಥ; ಪ್ರಸಾದ ವಿತರಣೆಗೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಲಾಕ್‌ಡೌನ್ ಪರಿಣಾಮ ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಸೋಮವಾರದಿಂದ ಬಾಗಿಲು ತೆರೆದು, ಭಕ್ತರಿಗೆ ಷರತ್ತು ಬದ್ಧ ದರ್ಶನ ವ್ಯವಸ್ಥೆ ಕಲ್ಪಿಸಿವೆ.

ಸರ್ಕಾರ ದೇವಾಲಯ ತೆರೆಯಲು ಅನುಮತಿ ನೀಡಿದ್ದೇ, ಜಿಲ್ಲೆಯಲ್ಲಿ ಭಾನುವಾರ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗಳು ದೇಗುಲಗಳನ್ನು ಶುಚಿಗೊಳಿಸಿ, ಮಾರ್ಗಸೂಚಿ ಅನುಸಾರ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡ ದರ್ಶನಕ್ಕೆ ಅಣಿಗೊಳಿಸಿದ್ದರು.

ಸೋಮವಾರ ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯಗಳತ್ತ ಮುಖ ಮಾಡಿದ್ದು, ಕೆಲ ದೇವಾಲಯಗಳಲ್ಲಿ ಸರತಿ ಸಾಲಿ‌ನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

ಜಿಲ್ಲೆಯ ಪ್ರಮುಖ ದೇವಾಲಯಗಳಾದ ನಂದಿ ಗ್ರಾಮದ ಭೋಗನಂದೀಶ್ವರ, ರಂಗಸ್ಥಳದ ರಂಗನಾಥ ಸ್ವಾಮಿ, ವಿಧುರಾಶ್ವತ್ಥದ ನಾರಾಯಣ ಸ್ವಾಮಿ, ಗಡಿದಂ ವೆಂಕಟರಮಣಸ್ವಾಮಿ ದೇಗುಲ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಎ, ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. 

ದೇವಾಲಯಗಳ ಪ್ರವೇಶದ್ವಾರಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ, ಥರ್ಮಲ್‌ ಸ್ಕ್ಯಾನಿಂಗ್ ನಡೆಸಿದ ಬಳಿಕ ಸ್ಯಾನಿಟೈಸರ್ ನಿಂದ ಕೈಶುಚಿಗೊಳಿಸಿ ದೇಗುಲಗಳ ಒಳಗೆ ಬಿಡಲಾಗುತ್ತಿದೆ.

65 ವಯಸ್ಸಿನ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.
ಮುಜರಾಯಿ ಇಲಾಖೆಯ ಅನೇಕ ದೇವಾಲಯಗಳಲ್ಲಿ ಸಿಬ್ಬಂದಿ ದರ್ಶನಕ್ಕೆ ಬಂದ ಭಕ್ತರ ಮೊಬೈಲ್ ನಲ್ಲಿ   ಆರೋಗ್ಯಸೇತು ಆ್ಯಪ್‌ ಅಳವಡಿಸಿಕೊಂಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು