ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕೋವಿಡ್ ಆಸ್ಪತ್ರೆಯಲ್ಲಿದ್ದ 10 ಆಮ್ಲಜನಕ ಸಿಲಿಂಡರ್ ಕಳ್ಳತನ

Last Updated 8 ಮೇ 2021, 14:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಹಳೇ ಸರ್ಕಾರಿ ಆಸ್ಪತ್ರೆಯಲ್ಲಿದ್ದ 10 ಆಮ್ಲಜನಕದ ಸಿಲಿಂಡರ್‌ಗಳು ಕಳ್ಳತನವಾಗಿವೆ. ಹಳೇ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.

ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಯ ಒಂದು ಕೊಠಡಿಯಲ್ಲಿ ಆಮ್ಲಜಕದ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿದೆ. ಗ್ರೂಪ್ ‘ಡಿ’ ನೌಕರ ಡಿ.ಎನ್.ಮುನಿರಾಜು ಅವರಿಗೆ ಇದರ ಉಸ್ತುವಾರಿವಹಿಸಲಾಗಿದೆ.

ಡಿ.ಎನ್ ಮುನಿರಾಜು ಬಳಿ ಒಂದು ಕೀಲಿ ಹಾಗೂ ನಿವಾಸಿ ವೈದ್ಯರ ಬಳಿ ಒಂದು ಕೀಲಿ ಇದೆ. ಡಿ.ಎನ್ ಮುನಿರಾಜು ಸಂಜೆ ಸಿಲಿಂಡರ್ ಗಳನ್ನು ಪರೀಶಿಲಿಸಿ ಒಟ್ಟು ಸಿಲಿಂಡರ್‌ಗಳ ಸಂಖ್ಯೆಯನ್ನು ಪುಸ್ತಕದಲ್ಲಿ ನಮೂದಿಸಿ ಬೀಗ ಹಾಕಿಕೊಂಡು ಹೋಗಿದ್ದರು. ಮರುದಿನ ಮುನಿರಾಜು ಕೊಠಡಿ ಬೀಗ ತೆಗೆದು ನೋಡಿದ್ದು 10 ಆಮ್ಲಜಕನದ ಸಿಲಿಂಡರ್‌ಗಳು ಇರಲಿಲ್ಲ. ಸಿಲಿಂಡರ್‌ಗಳ ಒಟ್ಟು ಬಲೆ ₹ 80,000. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT