ಬಾಗೇಪಲ್ಲಿ: ಸದಾ ಸಾರ್ವಜನಿಕರ ಸೇವೆ ಮಾಡುವ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿಗೆ ನಿರ್ಮಿಸಿರುವ ಪೊಲೀಸರ ವಸತಿ ಗೃಹಗಳು ಶಿಥಿಲಗೊಂಡಿವೆ. ಜೀವಭಯದಲ್ಲೇ ಸಿಬ್ಬಂದಿ ವಾಸ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೂ ವಸತಿ ಗೃಹಗಳು ಇಲ್ಲದೆ ಖಾಸಗಿ ಮನೆಗಳಲ್ಲಿ ವಾಸ ಮಾಡುವ ಅನಿವಾರ್ಯತೆ ಇದೆ.

ಪೊಲೀಸ್ ವೃತ್ತದ ವ್ಯಾಪ್ತಿಯಲ್ಲಿ ಒಬ್ಬ ಸರ್ಕಲ್ ಇನ್ಸ್ಪೆಕ್ಟರ್, ಮೂವರು ಪಿಎಸ್ಐ ಹಾಗೂ ಐವರು ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ 38 ಪೊಲೀಸ್ ಕಾನ್ಸ್ಟೆಬಲ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಡಿವಿಜಿ ಮುಖ್ಯರಸ್ತೆಗೆ ಅಂಟಿಕೊಂಡಂತೆ ವಿಶಾಲವಾದ ಜಾಗದಲ್ಲಿ ಪೊಲೀಸ್ ವಸತಿ ಗೃಹ ನಿರ್ಮಿಸಲಾಗಿದೆ.

45ವರ್ಷಗಳ ಹಿಂದೆ ನಿರ್ಮಿಸಿದ ವಸತಿಗೃಹಗಳು ಇದೀಗ ಪಾಳು ಬಿದ್ದಿವೆ. ಕೊಠಡಿಗಳು ವಾಸ ಮಾಡಲು ಯೋಗ್ಯವಾಗಿಲ್ಲ. ಕಿಟಕಿ, ಬಾಗಿಲುಗಳು ತುಕ್ಕು ಹಿಡಿದಿವೆ. ಕಸ, ತ್ಯಾಜ್ಯ ರಾಶಿ ಆವರಿಸಿದೆ. ಉಳಿದಂತೆ 6 ಗೃಹಗಳಲ್ಲಿ ಸ್ವಲ್ಪಮಟ್ಟಿಗೆ ವಾಸ ಮಾಡಲು ಕಟ್ಟಡಗಳು ಇವೆ. ಪೊಲೀಸರು ಅನಿವಾರ್ಯವಾಗಿ ವಾಸ ಮಾಡುತ್ತಿದ್ದಾರೆ. ಹಳೆಯದಾದ ಕಟ್ಟಡ ಆಗಿರುವುದರಿಂದ ಸಿಮೆಂಟ್, ಮೇಲ್ಛಾವಣಿ ಮುರಿದಿದೆ. ಮಳೆ ಬಂದರೆ ಸೋರುತ್ತದೆ.

ಪೊಲೀಸ್ ವಸತಿ ಗೃಹಗಳಿಗೆ ಮುಖ್ಯ ರಸ್ತೆ ಅಂಟಿಕೊಂಡಂತೆ ಮಾತ್ರ ತಡೆಗೋಡೆಗೆ ಸಿಮೆಂಟ್ ಚಪ್ಪಡಿ ಜೋಡಿಸಲಾಗಿದೆ. ಮನೆಗಳ ಸುತ್ತಲೂ ಹಾಗೂ ಆವರಣದಲ್ಲಿ ಕಳೆ, ಮುಳ್ಳಿನ ಗಿಡ ಬೆಳೆದಿದೆ. ಪೊಲೀಸರು, ಕುಟುಂಬಸ್ಥರು ಓಡಾಡಲು ಸಮರ್ಪಕವಾದ ರಸ್ತೆ ಇಲ್ಲ. ಮಳೆ ಬಂತೆಂದರೆ ಪೊಲೀಸ್ ವಸತಿ ಗೃಹಗಳಿಗೆ ನೀರು ನುಗ್ಗುತ್ತದೆ.

ರಾತ್ರಿ ವೇಳೆಯಲ್ಲಿ ಬೀದಿ ದೀಪ ಇಲ್ಲ. ಕಗ್ಗತ್ತಲಿನಲ್ಲಿ ಪೊಲೀಸರು, ಮಕ್ಕಳು, ಮಹಿಳೆಯರು, ವೃದ್ಧರು ಸಂಚರಿಸಬೇಕಾಗಿದೆ. ಹಾವು, ಚೇಳು ಕಾಟ ಹೆಚ್ಚಾಗಿದೆ. ಕುಟುಂಬಸ್ಥರು ಮನೆ ಬಾಗಿಲು, ಕಿಟಕಿ ಮುಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. 15 ವರ್ಷಗಳ ಹಿಂದೆ 2 ಕಡೆ 3 ಅಂತಸ್ತಿನಲ್ಲಿ ಜೋಡಿಯಾಗಿ 24 ಕೊಠಡಿ ನಿರ್ಮಿಸಲಾಗಿದೆ.

ಇಷ್ಟಾದರೂ ಸರ್ಕಾರ ಯೋಗ್ಯ ಇರುವ ಕಟ್ಟಡ ನಿರ್ಮಿಸಿಲ್ಲ ಎಂಬುದು ಸ್ಥಳೀಯರ ಆರೋಪ.

ವಸತಿಗೃಹಗಳು ಇಲ್ಲದೆ ಇರುವುದರಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅನಿವಾರ್ಯವಾಗಿ ಖಾಸಗಿ ಮನೆಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ಮನೆಗಳಲ್ಲಿ ವಾಸ ಮಾಡಬೇಕಾಗಿದೆ ಎನ್ನುತ್ತಾರೆ ಸಿಬ್ಬಂದಿ ಕುಟುಂಬದ ಸದಸ್ಯರು.

ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗೆ ಹಗಲು-ಇರುಳು ಪಾಳಿ ಪ್ರಕಾರ ಕೆಲಸ ಮಾಡುವಂತೆ ಸೂಚನೆ ನೀಡುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ಬಂದರೆ ವಿಶ್ರಾಂತಿ ಪಡೆಯಲು ಯೋಗ್ಯವಾದ ಗೃಹಗಳು ಇಲ್ಲ ಎನ್ನುತ್ತಾರೆ ಸಿಬ್ಬಂದಿ.

ಕೂಡಲೇ ಶಿಥಿಲವಾದ ಪೊಲೀಸ್ ಗೃಹಗಳನ್ನು ನೆಲಸಮ ಮಾಡಬೇಕು. ಹೈಟೆಕ್ ಮಾದರಿಯಲ್ಲಿ ವಸತಿಗೃಹಗಳನ್ನು ನಿರ್ಮಿಸಬೇಕು. ಇಲ್ಲವಾದರೆ ಜನಾಂದೋಲನ ರೂಪಿಸಲಾಗುವುದು ಎಂದು ಹೋರಾಟಗಾರ ಚನ್ನರಾಯಪ್ಪ ಒತ್ತಾಯಿಸುತ್ತಾರೆ.

'ಪೊಲೀಸ್ ವಸತಿಗೃಹಗಳಲ್ಲಿ ಜನರು ವಾಸ ಮಾಡಲು ಯೋಗ್ಯವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿವೆ. ಸಿಮೆಂಟ್, ಮೇಲ್ಛಾವಣಿ ಉದುರುತ್ತಿದೆ. ಮಕ್ಕಳು, ಮಹಿಳೆಯರು ಇರಲು ಗುಣಮಟ್ಟದ ಕಟ್ಟಡಗಳು ಬೇಕು' ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್.ಹರೀಶ್.

ವೈಜ್ಞಾನಿಕ ರೀತಿಯಲ್ಲಿ ವಸತಿ ಗೃಹಗಳು ನಿರ್ಮಾಣ ಆಗಬೇಕು. ಕುಡಿಯುವ ನೀರು, ಚರಂಡಿ, ಬೀದಿದೀಪ ಸೇರಿದಂತೆ ಕನಿಷ್ಠ ಸೌಲಭ್ಯ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿ ಹುಸೇನ್ ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.