ಪತ್ರಿಕೆಗಳು ಜ್ಞಾನ ಸಂಗ್ರಹಣೆಯ ಮೂಲಗಳು. ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬರುವ ವಿಷಯದ ಆಳ, ವಸ್ತುನಿಷ್ಠ ಮಾಹಿತಿ ತುಂಬಾ ಪ್ರಯೋಜನಕಾರಿ. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಪತ್ರಿಕೆಯನ್ನು ಚೆನ್ನಾಗಿ ಓದಿ ನ್ಯೂಸ್ ಕ್ವಿಜ್ ವಿನ್ನರ್ ಆಗಬೇಕು.
-ಎಸ್.ಜಿ. ನಾಗೇಶ್, ಉಪ ನಿರ್ದೇಶಕ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ

ಓದುವ ಹವ್ಯಾಸ ವೃದ್ಧಿಗೆ ಪೂರಕ
ಶಿಕ್ಷಣ ಎನ್ನುವುದು ಒಂದು ಕಲಿಕಾ ಪ್ರಕ್ರಿಯೆ. ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ದಿವ್ಯಾಮೃತ. ಕಲಿಕಾ ಪ್ರಕ್ರಿಯೆಯಲ್ಲಿ ರಸ ಪ್ರಶ್ನೆ ಕಾರ್ಯಕ್ರಮ ಮಹತ್ತರವಾದದ್ದು. ಇಂತಹ ಜ್ಞಾನಮೃತವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ‘ಪ್ರಜಾವಾಣಿ’ ಕ್ವಿಜ್ ಮೂಲಕ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ವೃದ್ಧಿಸಲು ಪೂರಕವಾಗಿದೆ. ಭಾಷೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಇತಿಹಾಸ, ಸಮಕಾಲಿನ ಸಂಗತಿಗಳು ಬಗ್ಗೆ ಅರಿಯಲು ಸ್ವರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಸಂಜೀವಿನಿಯಾಗಿದೆ.
-ತಳಗವಾರ ಆನಂದ್, ಪ್ರವಚನಕಾರ

ಬಹಳಷ್ಟು ಉಪಯುಕ್ತ
ಇಂದಿನ ಸ್ಪರ್ಧಾ ಯುಗದಲ್ಲಿ ಸ್ಪರ್ಧಿಗಳ ಜ್ಞಾನದ ದಾಹ ನೀಗಿಸುವಲ್ಲಿ ಹಾಗೂ ನಿಖರ ಸುದ್ದಿಗಳಿಗೆ ‘ಪ್ರಜಾವಾಣಿ’ ಹೆಸರಾಗಿದೆ. ಮಾಧ್ಯಮದ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿ ನ್ಯೂಸ್ ಕ್ವಿಜ್ ಆಯೋಜಿಸಿರುವುದು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಪ್ರಚಲಿತ ವಿದ್ಯಾಮಾನದ ಮಾಹಿತಿ, ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಇದು ಸಹಕಾರಿ.
-ಕೃಷ್ಣಕುಮಾರಿ, ಮುಖ್ಯಶಿಕ್ಷಕಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ವಾಪಸಂದ್ರ

ವಿದ್ಯಾಭ್ಯಾಸದ ಕಡೆಗೆ ಸೆಳೆಯಲಿ
ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸಿನಲ್ಲಿ ‘ಪ್ರಜಾವಾಣಿ’ ದಿನಪತ್ರಿಕೆಯ ಪಾತ್ರ ಹಿರಿದು. ಕೊರೊನಾ ಸೋಂಕು ಪಸರುವಿಕೆಯನ್ನು ತಡೆಗಟ್ಟಲು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿದ್ದಾರೆ. ಅವರನ್ನು ಪುನಃ ವಿದ್ಯಾಭ್ಯಾಸದ ಕಡೆಗೆ ಸೆಳೆಯಲು ನ್ಯೂಸ್ ಕ್ವಿಜ್ ತುಂಬಾ ಸಹಕಾರಿ ಆಗಲಿದೆ.
-ಸುಶೀಲಾ ಮಂಜುನಾಥ, ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇನಮಿಂಚೇನಹಳ್ಳಿ

ಓದುಗರ ಕುತೂಹಲ ಹೆಚ್ಚಿಸಿದೆ
ಮುದ್ರಣ ಮಾಧ್ಯಮ ದಿನನಿತ್ಯದ ನೈಜ ಸುದ್ದಿಯ ಜೊತೆಗೆ, ಸ್ಪರ್ಧಾತ್ಮಕ ಯುಗದಲ್ಲಿ ಯುವ ಉದ್ಯೋಗಾಂಕ್ಷಿಗಳಿಗೆ ಪೂರಕವಾಗಿರುವುದು ಪ್ರಶಂಸನೀಯ. ದಿನಪತ್ರಿಕೆ ಓದುವ ಹವ್ಯಾಸ, ಕಲಿಕಾ ಪ್ರವೃತ್ತಿ ಹಾಗೂ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ‘ಪ್ರಜಾವಾಣಿ’ ಪತ್ರಿಕೆಯ ಈ ಕ್ವಿಜ್ ಓದುಗರ ಕುತೂಹಲ ಹೆಚ್ಚಿಸಿದೆ.
-ಯಲುವಹಳ್ಳಿ ಸೊಣ್ಣೇಗೌಡ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.