ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಜೀವಿಕ ಸಂಘಟನೆಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ

ಜೀತ ವಿಮುಕ್ತರಿಗೆ ಪುನರ್ ವಸತಿ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ತಾಲ್ಲೂಕು ಜೀತ ವಿಮುಕ್ತರಿಗೆ ಸಮಗ್ರವಾದ ಪುನರ್‌ವಸತಿ ಕಲ್ಪಿಸುವಂತೆ ಹಾಗೂ ಗುರುತಿಸಿದ ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಲು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ತಾಲ್ಲೂಕು ಕಚೇರಿ ಮುಂದೆ ಜೀವಿಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜೀವಿಕ ರಾಜ್ಯ ಸಂಚಾಲಕ ವಿ.ಗೋಪಾಲ್ ಮಾತನಾಡಿ, ಜೀವಿಕ-ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯು ಜಿಲ್ಲೆಯಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಶ್ರಮಿಸುತ್ತಿದೆ. ಜೀತ ಪದ್ಧತಿ ರದ್ದತಿ ಕಾನೂನು ಜಾರಿಗೆ ಬಂದು 45 ವರ್ಷ ಕಳೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಜೀತ ಪದ್ಧತಿ ಕಾನೂನನ್ನು ಅರ್ಥೈಸಿಕೊಳ್ಳಲು ದರ್ಪ ಧೋರಣೆಯನ್ನು ಅನುಸರಿಸುತ್ತಿರು
ವುದು ಸರಿಯೇ?
ಎಂದು ಪ್ರಶ್ನಿಸಿದರು.

ಜೀವಿಕ ಸಂಘಟನೆಯ ತಾಲ್ಲೂಕು ಸಂಚಾಲಕ ರಾಮಾಂಜಿನೇಯ ಮಾತನಾಡಿ, ತಾಲ್ಲೂಕಿನಲ್ಲಿ ಸಂಘಟನೆಯು ನಿರಂತರವಾಗಿ ಜೀತದಾಳುಗಳ ಬಗ್ಗೆ, ಬಾಲ ಕಾರ್ಮಿಕರ ಬಗ್ಗೆ, ಮಹಿಳೆಯರ ಬಗ್ಗೆ, ಮಕ್ಕಳ ಬಗ್ಗೆ ಕೆಲಸ ನಿರ್ವಹಿಸಿಕೊಂಡು ಬರುತ್ತಿದೆ. 131 ಮಂದಿಯನ್ನು ಜೀತಮುಕ್ತರೆಂದು ಗುರುತಿಸಿದ್ದು
ಸರಕಾರದಿಂದ ಪರಿಹಾರ ಕೊಡುವುದರಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದರು.

ಜೀತದಾಳುವಿಗೆ 24 ಗಂಟೆಯೊಳಗೆ ಬಿಡುಗಡೆ ಪತ್ರ ಮತ್ತು ಪುನರ್‌ವಸತಿ ಕಲ್ಪಿಸಬೇಕೆಂದು ಕಾನೂನು ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

ಜೀವಿಕ ರಾಜ್ಯ ಸಂಚಾಲಕಿ ರತ್ನಮ್ಮ, ಸಂಚಾಲಕ ಚನ್ನರಾಯಪ್ಪ, ಶ್ರೀನಿವಾಸ್, ಮುಖಂಡ ಅಶ್ವತ್ಥಪ್ಪ, ನಾರಾಯಣಪ್ಪ, ಲಕ್ಷೀದೇವಮ್ಮ, ಮುನಿಯಪ್ಪ, ಗಂಗಾಧರಪ್ಪ, ಆದಿನಾರಾಯಣಪ್ಪ, ರವೀಂದ್ರ, ರಾಮಪ್ಪ, ನಾರಾಯಣಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.