ಮಂಗಳವಾರ, ನವೆಂಬರ್ 24, 2020
21 °C

ಪಿಎಸ್‌ಎಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನ ಪಾತಪಾಳ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ತೆರೆಯುವಂತೆ ಹಾಗೂ ನಾಡಕಚೇರಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ತಡೆಯುವಂತೆ ಆಗ್ರಹಿಸಿ ಪ್ರಜಾ ಸಂಘರ್ಷ ಸಮಿತಿ, ಪಾತಪಾಳ್ಯ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ‘ರಾಜ್ಯದ ಅತಿ ಹಿಂದುಳಿದ ಹಾಗೂ ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ಪಾತಪಾಳ್ಯದ ಸುತ್ತಲೂ ಅನೇಕ ಗ್ರಾಮಗಳು ಇದೆ. ಪಾತಪಾಳ್ಯ ಹೋಬಳಿ ಕೇಂದ್ರ ಆದರೂ, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೆಲ ಗ್ರಾಮಗಳಿಗೆ ರಸ್ತೆಗಳು ಸಮರ್ಪಕವಾಗಿ ಇಲ್ಲ. ನಾಡಕಚೇರಿಯಲ್ಲಿ ರೈತರ ಕೆಲಸ
ಗಳಿಗೆ ಸಮರ್ಪಕವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವ್ಯಾಪಕವಾಗಿ ಭ್ರಷ್ಟಾಚಾರ, ಲಂಚ ಪಡೆಯುತ್ತಿದ್ದಾರೆ’ ಎಂದರು.

ಪಾತಪಾಳ್ಯದ ಮುಖ್ಯರಸ್ತೆಯಲ್ಲಿ ಪಿಎಸ್‌ಎಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಿದರು. ಪಿಎಸ್ ಎಸ್ ಸಂಘಟನೆಯ ಜಿಲ್ಲಾ ಸಹ ಸಂಚಾಲಕರಾದ ಚನ್ನರಾಯಪ್ಪ, ಆರ್.ಎನ್.ರಾಜು, ಮುಖಂಡರಾದ ಎಚ್.ಎನ್. ಚಂದ್ರಶೇಖರರೆಡ್ಡಿ, ಜಿ.ಎಂ.
ರಾಮಕೃಷ್ಣಪ್ಪ, ಕೆ.ರಾಮಾಂಜಿ, ಟಿ.ಎಲ್. ವೆಂಕಟೇಶ್, ಜೈನಾಭೀ, ನಾರಾಯಣ ಸ್ವಾಮಿ, ಎಲ್.ವೆಂಕಟೇಶ್, ಬಿ.ಕೆ.ನರಸಿಂಹಪ್ಪ, ಇ.ಟಿ.ನರಸಿಂಹಾರೆಡ್ಡಿ, ಬೂರಗಮಡುಗುನರಸಿಂಹಪ್ಪ, ಜುಬೇರ್ ಅಹಮದ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.