ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಕೊಡಬಹುದಾದ ಉತ್ತಮ ಆಸ್ತಿ ಆರೋಗ್ಯ: ಶಾಸಕ ಬಿ.ಎನ್. ರವಿಕುಮಾರ್

Published 3 ಮಾರ್ಚ್ 2024, 14:13 IST
Last Updated 3 ಮಾರ್ಚ್ 2024, 14:13 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಚಾಲನೆ ನೀಡಿದರು.

‘ಮಕ್ಕಳಿಗೆ ನಾವು ಕೊಡಬಹುದಾದ ಉತ್ತಮ ಆಸ್ತಿ ಎಂದರೆ ಆರೋಗ್ಯ. ಅವರು ಆರೋಗ್ಯವಂತರಾಗಿ ಇದ್ದಾಗ ಮಾತ್ರ ಬಲಿಷ್ಠ ದೇಶ ಕಟ್ಟಲು ಸಾಧ್ಯ. ಹೀಗಾಗಿ ಯಾವುದೇ ರೋಗರುಜಿನೆ ಬಾರದಂತೆ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು’ ಎಂದು ಶಾಸಕ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಮಿಸ್ಬಾ ಮಾತನಾಡಿ, ‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಬ್ಬದ ರೀತಿಯಲ್ಲಿ ಪೋಲಿಯೊ ಲಸಿಕೆ ಹಾಕಿಸುವ ಕಾರ್ಯಕ್ರಮ ಆಚರಿಸುತ್ತಿರುವುದನ್ನು ಕಂಡಾಗ ಆರೋಗ್ಯಕ್ಕೆ ನೀವು ಕೊಡುವ ಪ್ರಾಮುಖ್ಯತೆ ಅರಿವಾಗುತ್ತದೆ’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ‘ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ 106 ಬೂತ್‌ ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 26, ಗ್ರಾಮೀಣ ಪ್ರದೇಶದಲ್ಲಿ 80 ಬೂತ್‌ ಸ್ಥಾಪಿಸಿ, ಪ್ರತಿ ಬೂತ್‌ಗಳಲ್ಲಿಯೂ 250 ಮಕ್ಕಳಿಗೆ ಲಸಿಕೆ ಹಾಕುವ ಗುರಿ ನೀಡಲಾಗಿದೆ. ತಾಲ್ಲೂಕಿನಾದ್ಯಂತ 24,500 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಮೊದಲ ದಿನ ಶೇ 95ರಷ್ಟು ಲಸಿಕೆ ಹಾಕಲಾಗುತ್ತದೆ. ಎರಡು ದಿನ ಮನೆಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ರಮೇಶ್, ಉಪಾಧ್ಯಕ್ಷ ಶಿವಾನಂದ್, ಸದಸ್ಯ ಆರ್.ಎ.ಉಮೇಶ್, ರವಿಪ್ರಸಾದ್, ಸಿ.ಕೆ.ಗಜೇಂದ್ರ ಬಾಬು, ಎಂ.ಜೆ.ಶ್ರೀನಿವಾಸ್, ತಿರುಮಲೇಶ್, ಸವಿತಾ ಗೋಪಾಲ, ಭಾಗ್ಯಮ್ಮ, ಪಿಡಿಒ ಶಾರದಾ, ಡಾ.ಮನೋಹರ್, ನವತಾಜ್, ಡಾ.ರಮೇಶ್, ಡಾ.ವಿಜಯಕುಮಾರ್, ದೇವರಾಜ್, ಬಿ.ಕೆ ಶ್ರೀನಿವಾಸ್, ಧರ್ಮೇಂದ್ರ, ಶ್ರೀನಿವಾಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT