ಗುಡಿಬಂಡೆ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕೇವಲ ಒಂದು ಜಾತಿ ಅಥವಾ ಒಂದು ಕುಲಕ್ಕಾಗಲಿ ಸೀಮಿತವಲ್ಲ. ಅದು ಸರ್ವರಿಗೂ ಸಲ್ಲುವಂತಹುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಒಟ್ಟು 1.10 ಗುಂಟೆ ಜಮೀನನ್ನು ನೀಡಲಾಗಿದೆ. ₹2 ಕೋಟಿ ಅನುದಾನದಲ್ಲಿ ಭವನ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನದ ಕೊರತೆಯಿಂದ ತಡವಾಗುತ್ತಿದೆ. ₹2 ಕೋಟಿ ಜೊತೆಗೆ ಅಗತ್ಯ ಬಿದ್ದರೆ ₹5 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನ ಮಾಡುತ್ತೇನೆ ಎಂದರು.

ವಾಲ್ಮೀಕಿ ಸಂಘದ ಮುಖಂಡರ ಮನವಿಯಂತೆ ಭವನ ನಿರ್ಮಾಣಕ್ಕೆ ನೀಡಿದ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು ಭೂಮಿಪೂಜೆ ನೆರವೇರಿಸಿದ್ದೇನೆ. ಮುಂದಿನ ವರ್ಷದೊಳಗೆ ಭವನ ನಿರ್ಮಾಣ ಮಾಡಿಕೊಡಲು ಪ್ರಯತ್ನ ಮಾಡುತ್ತೇನೆ ಎಂದರು.

ವಾಲ್ಮೀಕಿ ಸಂಘದ ಅಧ್ಯಕ್ಷ ಎನ್.ವಿ.ಗಂಗಾಧರ್, ಭವನ ನಿರ್ಮಾಣಕ್ಕೆ ಸುಮಾರು ವರ್ಷಗಳಿಂದ ಬೇಡಿಕೆ ಇಡುತ್ತಿದ್ದೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೆಲವೊಂದು ಸಮಸ್ಯೆಗಳಿಂದ ತಡವಾಗುತ್ತಿದೆ. ಸದ್ಯ ವಾಲ್ಮೀಕಿ ಭವನ ನಿರ್ಮಾಣದ ಜಾಗದ ಸುತ್ತಲೂ ಕಾಪೌಂಡ್ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡಿದ್ದಾರೆ ಎಂದರು.

8 ಗ್ರಾಮ ಪಂಚಾಯಿತಿಗಳಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಗಳನ್ನೊಳಗೊಂಡ ಬೆಳ್ಳಿ ರಥಗಳನ್ನು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮುಖ್ಯರಸ್ತೆಯಲ್ಲಿ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು, ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಸಿಗ್ಬತ್ತುಲ್ಲಾ, ಇಒ ನಾಗಮಣಿ, ಕೃಷ್ಣಕುಮಾರಿ, ವಿಕಾಸ್, ಗಂಗರಾಜು, ಕೇಶವರೆಡ್ಡಿ, ನಯಾಜ್ ಬೇಗ್, ಮುನಿಕೃಷ್ಣಪ್ಪ, ನರೇಂದ್ರ, ಮಂಜುನಾಥ್, ಹರಿಕೃಷ್ಣ, ಕೋರೆನಹಳ್ಳಿ ಶ್ರೀನಿವಾಸ್, ದಪ್ಪರ್ತಿ ನಂಜುಂಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.