ಭಾನುವಾರ, ಜನವರಿ 24, 2021
17 °C
ಕೊರೊನಾ ಸೋಂಕು ಮರೆತ ಗ್ರಾಮಸ್ಥರು

ನಾಮಪತ್ರ ಸಲ್ಲಿಕೆಗೆ ನೂಕು ನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ಗ್ರಾ.ಪಂ.ಚುನಾವಣೆಗೆ ನಾಮಪತ್ರ ಸಲ್ಲಿಸಲು ಚೇಳೂರಿನ ಕೇಂದ್ರ ಸ್ಥಾನದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಅಭ್ಯರ್ಥಿಗಳು ಕೋವಿಡ್‌–19 ನಿಯಮಗಳನ್ನು ಮರೆತು, ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಧರಿಸದೆ ಸಾಲಿನಲ್ಲಿ ನಿಂತಿದ್ದರು.

ಚೇಳೂರುಗ್ರಾ.ಪಂಯಲ್ಲಿ 75 ನಾಮಪತ್ರ; ಪಾಳ್ಯಕೆರೆಯಲ್ಲಿ 73; ನಲ್ಲಗುಟ್ಲಪಲ್ಲಿಯಲ್ಲಿ 43; ಪುಲಗಲ್ಲು 58; ಚಾಕವೇಲು 50; ರಾಶ್ಚೇರುವುನಲ್ಲಿ 45 ನಾಮಪತ್ರ ಸೇರಿದಂತೆ ಚೇಳೂರು ಹೋಬಳಿಯ ಒಟ್ಟು ಆರು ಗ್ರಾಪಂನಲ್ಲಿ 344 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾದ್ದರಿಂದ ಅಭ್ಯರ್ಥಿಗಳು, ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಸದೇ ಕೇಂದ್ರದಲ್ಲಿ ಸೇರಿದ್ದರು. ಚೇಳೂರು ಪೋಲಿಸ್ ಠಾಣೆವ್ಯಾಪ್ತಿಯ 7 ಗ್ರಾ.ಪಂ.ಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು