ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಮೃಗ ಮಾಂಸ ವಶ: 5 ಮಂದಿ ಬಂಧನ

Published 14 ಮಾರ್ಚ್ 2024, 14:10 IST
Last Updated 14 ಮಾರ್ಚ್ 2024, 14:10 IST
ಅಕ್ಷರ ಗಾತ್ರ

ಬಾಗೇಪಲ್ಲಿ: 15 ಕೆ.ಜಿ ಕೃಷ್ಣಮೃಗದ ಮಾಂಸವನ್ನು ಬೇಟೆ ಮಾಡಿದ 5 ಮಂದಿಯನ್ನು ಬಾಗೇಪಲ್ಲಿ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಸೋಲಮಾಕಲಪಲ್ಲಿ ಗ್ರಾಮದ ಸಂದೇಶ್, ವೆಂಕಟೇಶಪ್ಪ, ಕೃಷ್ಣಪ್ಪ, ಯಲ್ಲಂಪಲ್ಲಿ ಗ್ರಾಮದ ಎನ್.ಚಂದ್ರಶೇಖರ್, ಪುಟ್ಟಪರ್ತಿ ಗ್ರಾಮದ ನಾಗಪ್ಪ ಬಂಧಿತರು.

ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಗ್ರಾಮದ ಮುಖ್ಯರಸ್ತೆಯಲ್ಲಿ ಗಲಾಟೆ ನಡೆಯುತ್ತಿದೆ ಎಂದು ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ 12 ಕೆ.ಜಿ ಕೃಷ್ಣಮೃಗದ ಮಾಂಸವನ್ನು ಹಾಗೂ ಸಂದೇಶ್, ವೆಂಕಟೇಶ್ ಹಾಗೂ ಕೃಷ್ಣಪ್ಪ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಬೆಳಿಗ್ಗೆ ಕೃಷ್ಣಮೃಗದ ಮಾಂಸ ಹಾಗೂ ಮೂರು ಮಂದಿಯನ್ನು ಪೊಲೀಸರು ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳು ಗುರುವಾರ ಚಂದ್ರಶೇಖರ್ ಹಾಗೂ ನಾಗಪ್ಪ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರ ಕುಟುಂಬದವರು ಹಾಗೂ ಗ್ರಾಮಸ್ಥರು ವಲಯ ಅರಣ್ಯ ಅಧಿಕಾರಿ ಕಚೇರಿ ಮುಂದೆ ಸಂಜೆವರೆಗೂ ಜಮಾಯಿಸಿದ್ದರು. ಪ್ರಾದೇಶಿಕ ಅರಣ್ಯ ವಲಯದ ಕಚೇರಿಯಲ್ಲಿ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು.

ಬಂಧಿತರಿಂದ ಕೃಷ್ಣಮೃಗದ ಮಾಂಸ, 2 ಚಾಕು, ಮಚ್ಚು, ಒಂದು ದ್ವಿಚಕ್ರ ವಾಹನ, 3 ಮೊಬೈಲ್ ಹಾಗೂ ₹5,710 ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT