ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಮೂಡಿದ್ದು ಬೆಳಗ್ಗೆ ವಾಕಿಂಗ್ ಮಾಡಲು ಆದ್ಯತೆ ನೀಡುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳ ಸಂಚಾರವಿರುವುದರಿಂದ ರಸ್ತೆಗಳ ಮೇಲೆ ವಾಕಿಂಗ್ ಮಾಡಲಾಗದು ಎಂಬ ಕಾರಣಕ್ಕೆ ಉದ್ಯಾನ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈ ಉದ್ಯಾನವು ಇದೀಗ ಅವ್ಯವಸ್ಥೆಯ ಆಗರವಾಗಿದೆ. ನಗರಸಭೆ ಆಡಳಿತ ನಡೆಸುವವರಿಗೆ ಕಾಳಜಿ ಇರದಿದ್ದಾಗ ಅತ್ಯುತ್ತಮ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಉದ್ಯಾನದ ಉದ್ದೇಶವನ್ನು ಸರಿಯಾಗಿ ಅರಿತು ಜನಸ್ನೇಹಿಯಾಗಿ ರೂಪಿಸಬೇಕಿದೆ.
-ಎಂ.ರಾಜಣ್ಣ, ಮಾಜಿ ಶಾಸಕ
ನಗರದ ನಿವಾಸಿಗಳು ಆರೋಗ್ಯವರ್ಧನೆಗಾಗಿ ಉದ್ಯಾನವನದಲ್ಲಿ ವಾಯುವಿಹಾರ ಮಾಡಲು ಇಷ್ಟಪಡುತ್ತಾರೆ. ವಾಯುವಿಹಾರಿಗಳಿಗಾಗಿ ನಿರ್ಮಿಸಲಾಗಿರುವ ಉದ್ಯಾನವು ಇಂದು ಕುಡುಕರ ಮತ್ತು ಪುಡಾರಿಗಳ ಅಡ್ಡೆಯಾಗಿ ಪರಿಣಿಸಿದೆ. ಹೀಗಿದ್ದಾಗ ಹೆಣ್ಣು ಮಕ್ಕಳು ಮತ್ತು ಮಕ್ಕಳು ಹೇಗೆ ಅಲ್ಲಿಗೆ ಹೋಗುತ್ತಾರೆ. ಸಂಜೆ ಹೊತ್ತು ಮಕ್ಕಳೊಂದಿಗೆ ಹೋಗಿ ಸ್ವಲ್ಪ ಹೊತ್ತು ಕಾಲ ಕಳೆಯಲು ಹೇಗೆ ಸಾಧ್ಯವಾದೀತು. ಉದ್ಯಾನದ ಅಭಿವೃದ್ಧಿಗಾಗಿ ಹಣವನ್ನು ನೀರಿನಂತೆ ವೆಚ್ಚ ಮಾಡಲಾಗಿದೆ. ಜನರಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ. ವಾಯುವಿಹಾರಕ್ಕೆ ಹೋಗುವವರಿಗೆ ತೊಂದರೆಯಾಗಿದೆ