ಶಿಡ್ಲಘಟ್ಟ: ನಗರ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ನಡೆಯುತ್ತಿರುವ ಸಮೀಕ್ಷಾ ಕಾರ್ಯಕ್ಕೆ ಅಧಿಕಾರಿಗಳು ಒಂದೇ ಮನೆಗೆ 4-5 ಬಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವುದು ನಾಗರಿಕರಲ್ಲಿ ಅಸಮಾಧಾನ, ಅನುಮಾನಕ್ಕೆ ಕಾರಣವಾಗಿದೆ.

ಜನರ ಮಾಹಿತಿ ಸಂಗ್ರಹಿಸಲು ನೇಮಿಸಲಾದ ಗಣತಿದಾರರು ಹಾಗೂ ಅಧಿಕಾರಿಗಳು ನಿಗದಿತ ಸಮಯವಲ್ಲದೆ ಸಂಜೆ, ರಾತ್ರಿ ವೇಳೆಯೂ ಮನೆ ಮನೆಗೆ ತೆರಳುತ್ತಿದ್ದಾರೆ. ಕೆಲವರು ಗಣತಿದಾರರು ಎಂದು ಹೇಳಿಕೊಂಡು ಹಾಳೆ, ಪುಸ್ತಕ ಹಿಡಿದು ಬಂದು ಮಾಹಿತಿ ಪಡೆಯುವುದು, ಕೆಲವೊಮ್ಮೆ ರಾತ್ರಿ ವೇಳೆ ಗಣತಿದಾರರೆಂದು ಬಂದು, ಹಿಂದೆ ಮಾಡಿದವರು ಗಣತಿ ಸರಿಯಾಗಿ ಮಾಡಿಲ್ಲ, ಮತ್ತೆ ಗಣತಿ ಮಾಡಬೇಕೆಂದು ಕೇಳುತ್ತಿದ್ದಾರೆ. ಗುರುತಿನ ಚೀಟಿ ಕೇಳಿದರೆ ಕೆಲವರು ತೋರಿಸದೆ ಇರುವುದು ಅನುಮಾನಕ್ಕೆ ಕಾರಣ ಎಂದು ನಾಗರಿಕರು ಹೇಳುತ್ತಾರೆ.

ಈಗಾಗಲೇ ಸಮೀಕ್ಷಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಉಳಿದ ಮನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ತಹಶೀಲ್ದಾರ್ ಗಗನ ಸಿಂಧು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಶಿಡ್ಲಘಟ್ಟ ನಗರ ಭಾಗದಲ್ಲಿ, ನಗರಸಭೆಯಿಂದ ಇನ್ನೊಂದು ಗಣತಿ ನಡೆಯುತ್ತಿದೆ ಎಂದು ಯಾವುದೇ ಪೂರ್ವ ಮಾಹಿತಿ ನೀಡದೆ ಅಧಿಕಾರಿಗಳು ಮನೆ, ಮನೆಗೆ ಭೇಟಿ ಕೊಡುತ್ತಿರುವುದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ.

ಒಮ್ಮೆಲೇ ಸಂಪೂರ್ಣ ಮಾಹಿತಿ ತೆಗೆದುಕೊಂಡು ದಾಖಲೆ ಮಾಡಬಹುದಿತ್ತು. ಕೆಲಸಕ್ಕೆ ಅಥವಾ ಹೊರಗೆ ಹೋದಾಗ ಮನೆಯಲ್ಲಿ ಹೆಂಗಸರು ಒಂಟಿಯಾಗಿ ಇರುತ್ತಾರೆ. ಈಗಾಗಲೇ 3-4 ಬಾರಿ ಮಾಹಿತಿ ನೀಡಿದ್ದರೂ ನಗರಸಭೆಯಿಂದ ಎಂದು ಹೇಳಿಕೊಂಡು ಮತ್ತೆ ವಿವರ ಸಂಗ್ರಹಿಸುತ್ತಿರುವುದು ಯಾಕೆ? ಎಷ್ಟು ಗಣತಿ ಕಾರ್ಯ ನಡೆಯುತ್ತಿವೆ? ಎಂದು ನಗರದ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.