ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ರೇಷ್ಮೆಗೂಡು ಅಲಂಕಾರಿಕ ವಸ್ತು ತಯಾರಿಕೆ ತರಬೇತಿ

Last Updated 22 ಅಕ್ಟೋಬರ್ 2021, 4:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ರೇಷ್ಮೆಗೂಡಿನಿಂದ ಅಲಂಕಾರಿಕಾ ವಸ್ತುಗಳನ್ನು ತಯಾರಿಸಲು ಯಾವುದೇ ಯಂತ್ರ ಬೇಕಿಲ್ಲ. ಬದಲಿಗೆ ಕೈನಲ್ಲೇ ಸುಂದರ ಚಿತ್ತಾಕರ್ಷಕ ಕಲಾತ್ಮಕ ಹೂಗಳು, ಗೊಂಬೆಗಳನ್ನು ಮಾಡಬಹುದು. ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಮಹಿಳೆಯರು ಇದನ್ನು ಹವ್ಯಾಸದ ಜೊತೆಗೆ ಸಣ್ಣ ಉದ್ದಿಮೆಯಾಗಿ ರೂಢಿ ಮಾಡಿಕೊಳ್ಳಬಹುದು ಎಂದು ಚಿಂತಾಮಣಿಯ ರೇಷ್ಮೆ ವಿಭಾಗದ ಪ್ರಾಧ್ಯಾಪಕಿ ಡಾ.ಪಲ್ಲವಿ ತಿಳಿಸಿದರು.

ತಾಲ್ಲೂಕಿನ ದೊಡ್ಡದಾಸೇನಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಗ್ರಾಮದಲ್ಲಿ ಬೀಡುಬಿಟ್ಟಿರುವ ರೇಷ್ಮೆ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಗ್ರಾಮದ ಮಹಿಳೆಯರಿಗೆ ಹಮ್ಮಿಕೊಂಡಿದ್ದ ರೇಷ್ಮೆಗೂಡುಗಳಿಂದ ಅಲಂಕಾರಿಕ ಕರಕುಶಲ ವಸ್ತುಗಳ ತಯಾರಿಕಾ ಕೌಶಲಾಭಿವೃದ್ಧಿ ತರಬೇತಿಯಲ್ಲಿ ಅವರು ಮಾತನಾಡಿದರು.

ದೊಡ್ಡದಾಸೇನಹಳ್ಳಿಯ ಸ್ವಸಹಾಯ ಮಹಿಳಾ ಗುಂಪುಗಳು, ಸ್ತ್ರೀಶಕ್ತಿ ಗುಂಪುಗಳು, ಅಂಗವಿಕಲರು ಹಾಗೂ ಗ್ರಾಮದ ರೈತರು ತರಬೇತಿ ಪಡೆದುಕೊಂಡರು. ರೇಷ್ಮೆ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಬಸವರಾಜ್, ಆದರ್ಶ್, ಚಂದನ್, ಅಮೋಘ್, ಹರ್ಷದ್, ದಿವಾಕರ, ಐಶ್ವರ್ಯ, ಅಶ್ವಿನಿ, ಭಾರತಿ, ಚೈತ್ರಾ, ಚಂದನ, ಜಯಲಕ್ಷ್ಮಿ, ಜಯಶ್ರೀ, ಲಾವಣ್ಯ ಹಾಗೂ ಮಮತಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT