ಚಿಕ್ಕಬಳ್ಳಾಪುರ: ನಗರದ ಎಸ್‌ಜೆಸಿಐಟಿ ಕಾಲೇಜಿನಿಂದ ಜು. 19ರಂದು ಕೆಸೆಟ್, ಕಾಮೆಡ್ ಕೆ, ರಸಾಯನ ವಿಜ್ಞಾನ, ಭೌತವಿಜ್ಞಾನ ಹಾಗೂ ಗಣಿತ ವಿಷಯದ ಮಾಕ್ ಟೆಸ್ಟ್ ಕಾರ್ಯಕ್ರಮದ ವರ್ಚುವಲ್ ಉದ್ಘಾಟನಾ ಸಮಾರಂಭ ಜರುಗಲಿದೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಮಂಗಳಾನಂದನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಕಾರ್ಯಕ್ರಮದ ಕುರಿತು ಮಾತನಾಡುವರು. 19ರಿಂದ 30ರವರೆಗೆ ಉಚಿತ ಕ್ರ್ಯಾಷ್ ಕೋರ್ಸ್ ನಡೆಯಲಿದೆ.
ಆ. 2ರಂದು ಭೌತ ವಿಜ್ಞಾನ, ಆ.4ರಂದು ರಸಾಯನ ವಿಜ್ಞಾನ, ಆ. 6ರಂದು ಗಣಿತ ವಿಷಯದ ಮಾಕ್ ಪರೀಕ್ಷೆಗಳು ನಡೆಯಲಿವೆ ಎಂದು ಎಸ್‌ಜೆಸಿಐಟಿಯ ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.