ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಡಿಜಿಟಲ್ ಸೇವಾ ಕೇಂದ್ರ ಆರಂಭ

ಬಾಗೇಪಲ್ಲಿಯಲ್ಲಿ ನಾಗರಿಕರಿಗೆ ಆನ್‌ಲೈನ್‌ ಸೌಲಭ್ಯಗಳ ಉಚಿತ ಸೇವೆ
Last Updated 20 ಫೆಬ್ರುವರಿ 2021, 5:50 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಆಧಾರ್, ಪಡಿತರ ಚೀಟಿಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ಆನ್‌ಲೈನ್ ಆಗಿರುವುದರಿಂದ, ಜನರಿಗೆ ಅನುಕೂಲ ಕಲ್ಪಿಸಲು ತಮ್ಮ ಟ್ರಸ್ಟ್‌ನಿಂದ ಉಚಿತವಾಗಿ ಡಿಜಿಟಲ್ ಸೇವಾಕೇಂದ್ರ ಆರಂಭಿಸಲಾಗಿದೆ’ ಎಂದು ಶಾಸಕ ಹಾಗೂ ಎಸ್.ಎನ್.ಸುಬ್ಬಾರೆಡ್ಡಿ ಟ್ರಸ್ಟ್ ಅಧ್ಯಕ್ಷ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ಟ್ರಸ್ಟ್‌ನ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸುಬ್ಬಾರೆಡ್ಡಿ ಡಿಜಿಟಲ್ ಸೇವಾಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪಡೆಯಲು, ವಿದ್ಯಾರ್ಥಿ ವೇತನ, ಪಹಣಿ, ಆಧಾರ್, ಪಡಿತರ ಚೀಟಿಗಳು ಸೇರಿದಂತೆ ಹಾಗೂ ಉದ್ಯೋಗಾವಕಾಶಗಳು ಪಡೆಯಲು ಆನ್‌ಲೈನ್ ಡಿಜಿಟಲ್ ಆಗಿ ಪರಿವರ್ತನೆ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಅರ್ಜಿಗಳು ಪಡೆಯಬೇಕಾಗಿದೆ. ತಾಲ್ಲೂಕಿನ ಕಚೇರಿ, ಪಂಚಾಯಿತಿಗಳಲ್ಲಿ ವಿವಿಧ ಕೆಲಸಗಳಿಗೆ ಹಾಗೂ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಕೆಲಸಗಳು ಬಿಟ್ಟು ಕಾಯಬೇಕಾಗಿದೆ. ಅರ್ಜಿಗಳು ಪಡೆಯಲು ಸಾಲುಗಟ್ಟಿ ನಿಲ್ಲಬೇಕಾಗಿದೆ. ಇದರಿಂದ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದುತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪವರೊ ವೈ.ನಾರಾಯಣ, ಪ್ರಾಧ್ಯಾಪಕರಾದ ಡಾ.ಕೆ.ಎಂ.ನಯಾಜ್ ಅಹಮದ್, ಗ್ರಂಥಪಾಲಕ ಡಾ.ಸಿ.ಎಸ್. ವೆಂಕಟರಾಮರೆಡ್ಡಿ ಇದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಮಾಜಿ ಅಧ್ಯಕ್ಷ ಎಸ್.ಎಸ್. ರಮೇಶ್ ಬಾಬು, ಸ್ಥಾಯಿಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಎ.ಶ್ರೀನಿವಾಸ್, ಮುಖಂಡರಾದ ಗಡಿದಂಶಿವರಾಮರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT