ಕಳೆದ ಒಂದು ವರ್ಷದಿಂದ ಬೆಲೆ ಕುಸಿತದಿಂದ ಟೊಮೆಟೊ ಬೆಳೆಗಾರರು ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಿ ಸಾಲಗಾರರಾಗಿದ್ದಾರೆ. ಹೀಗಾಗಿ ಟೊಮೆಟೊ ಬೆಳೆಯುವುದನ್ನೇ ತ್ಯಜಿಸಿದ್ದಾರೆ. ಬೆಳೆಯುವ ಪ್ರದೇಶವೇ ಕಡಿಮೆ ಆಗಿದೆ. ಸ್ವಲ್ಪಮಟ್ಟಿಗೆ ಬೆಲೆ ಏರಿಕೆಯಾಗಿದ್ದರೂ ರೈತರಿಗೆ ಹೆಚ್ಚಿನ ಅನುಕೂಲ ಆಗುವುದಿಲ್ಲ.
–ಎನ್. ಶಿವಾನಂದ, ಪ್ರಗತಿಪರ ರೈತ, ಅನಕಲ್ ಗ್ರಾಮ.
ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಜಿಲ್ಲೆಯ ರೈತರಿಂದ ಮಾಲು ಬರುತ್ತಿರುವುದು ಕಡಿಮೆ. ಆಂಧ್ರಪ್ರದೇಶ ಮತ್ತಿತರ ಕಡೆಗಳಿಂದ ರವಾನೆ ಆಗುತ್ತಿದೆ. ಇತರೆ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ. ಮಳೆಯ ಕೊರತೆಯಿಂದ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಈ ಹಿನ್ನಲೆಯಿಂದ ಬೆಲೆ ಏರಿಕೆ ಕಾಣುತ್ತಿದೆ.
–ಆನಂದ್, ಟೊಮೆಟೊ ವ್ಯಾಪಾರಿ
ಟೊಮೆಟೊ ಬೆಳೆಯುವವರೂ ಕಡಿಮೆ. ನೊಣಗಳ ಕಾಟದಿಂದ ಫಸಲೂ ಕಡಿಮೆ. ಹೀಗಾಗಿ ಸಾಧಾರಣ ಬೆಲೆ ಸಿಗುತ್ತಿದೆ. ಆದರೆ ಬೆಲೆ ಏರಿಕೆಯ ಲಾಭ ಪಡೆಯಲು ರೈತರಲ್ಲಿ ಟೊಮೆಟೊ ತೋಟಗಳೇ ಇಲ್ಲ. ಬೆಲೆ ಏರಿಕೆಯಾದರೂ ಅದರಪೂರ್ಣ ಲಾಭ ರೈತರಿಗೆ ದೊರೆಯದೆ ಮಧ್ಯವರ್ತಿಗಳ ಪಾಲಾಗುತ್ತದೆ.