ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಯುಜಿಡಿಯಿಂದ ನೇರವಾಗಿ ಚರಂಡಿಗಳಿಗೆ ಕೊಳಚೆ ನೀರು ಹರಿಸುತ್ತಿರುವ ವಿಚಾರವು ತೀವ್ರವಾಗಿ ಚರ್ಚೆಯಾಯಿತು. ಈ ಸಮಸ್ಯೆಗೆ ಪರಿಹಾರ ನೀಡದಿದ್ದರೆ ಸತ್ಯಾಗ್ರಹ ಮಾಡುವೆ ಎಂದು ಸದಸ್ಯ ಆರ್.ಮಟಮಪ್ಪ ತಿಳಿಸಿದರು. ಆಗ ಮತ್ತಷ್ಟು ಸದಸ್ಯರು ಇದೇ ವಿಚಾರವಾಗಿ ಧ್ವನಿ ಎತ್ತಿದರು.

ಯುಜಿಡಿ ಬ್ಲಾಕ್ ಆದ ವೇಳೆ ಆ ನೀರನ್ನು ಪೈಪ್ಗಳ ಮೂಲಕ ನೇರವಾಗಿ ಚರಂಡಿಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ರೀತಿಯಲ್ಲಿ ಮಾಡಲು ನಗರಸಭೆ ಅಧಿಕಾರಿಗಳಿಗೆ ಹೇಳಿದವರು ಯಾರು? ಈ ಅವ್ಯವಸ್ಥೆ ಸರಿಪಡಿಸದಿದ್ದರೆ ಸತ್ಯಾಗ್ರಹ ಮಾಡುತ್ತೇನೆ ಎಂದು ಆರ್.ಮಟಮಪ್ಪ ಸಭೆಯ ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ನರಸಿಂಹಮೂರ್ತಿ, ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಮಂಟಪದ ಕೊಳಚೆ ನೀರನ್ನು ರಾಜಕಾಲುವೆಗೆ ಹರಿಸುತ್ತಿದ್ದಾರೆ. ಈ ನೀರು ಕೆರೆಗಳನ್ನು ಸೇರುತ್ತಿದೆ ಎಂದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಈ ರೀತಿ ರಾಜಕಾಲುವೆಗೆ ಕೊಳಚೆ ನೀರು ಹರಿಸುವವರಿಗೆ ನೋಟಿಸ್ ನೀಡಲಾಗುವುದು. ಸಮಸ್ಯೆಯನ್ನು ಖಂಡಿತ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಮತ್ತಷ್ಟು ಆಕ್ರೋಶಗೊಂಡ ಸದಸ್ಯರು ಬರಿ ಪುಸ್ತಕದಲ್ಲಿ ಬರೆದರೆ ಸಾಲದು ಕ್ರಮ ಆಗಬೇಕು. ಈ ಹಿಂದಿನ ಸಭೆಯಲ್ಲಿಯೂ ರಾಜಕಾಲುವೆ ಒತ್ತುವರಿ ತೆರವುಗೊಳಿಸುತ್ತೇವೆ ಎಂದಿದ್ದಿರಿ. ಆದರೆ ಯಾವುದೇ ಕ್ರಮವಾಗಿಲ್ಲ. ಮಳೆ ಬಂದರೆ ಬಿಬಿ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಈ ಅಧ್ವಾನವನ್ನು ಪರಿಹರಿಸುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ಗಜೇಂದ್ರ ಮಧ್ಯಪ್ರವೇಶಿಸಿ, ‘ಅನುದಾನದ ಕೊರತೆ ಇದೆ. ಆದ ಕಾರಣ ಕೆಲಸಗಳು ಆಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ಚರ್ಚೆ ಹೆಚ್ಚುತ್ತಿದ್ದಂತೆ ನಗರಸಭೆ ಮಾಜಿ ಅಧ್ಯಕ್ಷರೂ ಆದ ಸದಸ್ಯ ಡಿ.ಎಸ್.ಆನಂದರೆಡ್ಡಿ ಮಧ್ಯಪ್ರವೇಶಿಸಿದರು. ‘ಪರಿಹಾರಕ್ಕೆ ಯಾವ ಕ್ರಮಗಳು ಆಗಿವೆ ಎನ್ನುವುದು ಮುಖ್ಯವಾಗಿ ಚರ್ಚೆ ಆಗಬೇಕು. ಎಸ್ಟಿಪಿ ಘಟಕ ಬದಲಾವಣೆಗೆ 16ನೇ ವಾರ್ಡ್ನಲ್ಲಿ 42.38 ಎಕರೆ ಜಾಗ ಗುರುತಿಸಲಾಗಿತ್ತು. ಈ ವಿಚಾರ ಎಲ್ಲಿಗೆ ಬಂದಿತು’ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.

ಆಗ ಪೌರಾಯುಕ್ತರು ಜಿಲ್ಲಾಧಿಕಾರಿ ಅವರು ಈ ಜಮೀನನ ಪೈಕಿ ಐದು ಎಕರೆ ಮಾತ್ರ ನೀಡಿದ್ದಾರೆ. ಅಲ್ಲಿ ಎಸ್ಟಿಪಿ ನಿರ್ಮಾಣ ಮಾಡುವುದರಿಂದ ಅದು ವಿಫಲ ಆಗಬಹುದು ಎನ್ನುವ ಅಭಿಪ್ರಾಯವೂ ಇದೆ. ಆದ್ದರಿಂದ ಈಗ ಇರುವ ಎಸ್ಟಿಪಿಯನ್ನೇ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. 15 ದಿನಗಳಲ್ಲಿ ಈ ಬಗ್ಗೆ ವರದಿ ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.

ಸದಸ್ಯೆ ಸ್ವಾತಿ ಮಂಜುನಾಥ್, 21 ಮತ್ತು 22ನೇ ವಾರ್ಡ್ನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ವಿಚಾರ ಪ್ರಸ್ತಾಪಿಸಿದರು. ಈ ಹಿಂದಿನ ಸಭೆಗಳಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದೆವು. ಆದರೆ ಯಾವುದೇ ಕ್ರಮ ಆಗಿಲ್ಲ. ಟೆಂಡರ್ ಆಗಿ ಕಾರ್ಯಾದೇಶ ನೀಡಿದ್ದರೂ ಕಾಮಗಾರಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ಮಲಾ ಪ್ರಭು ಅವರು ಸಹ ಇದೇ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಅಧ್ಯಕ್ಷ ಗಜೇಂದ್ರ, ‘ನಗರದ 31 ವಾರ್ಡ್ಗಳ ಪೈಕಿ ಎಲ್ಲಿ ಓವರ್ ಹೆಡ್ ಟ್ಯಾಂಕ್ಗಳು ಅಗತ್ಯವಿದೆಯೊ ಅಲ್ಲಿ ನಿರ್ಮಿಸಲಾಗುವುದು. ನಗರಾಭಿವೃದ್ಧಿ ಸಚಿವರ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.

ಜಕ್ಕಲಮಡಗು ನೀರನ್ನು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ನೀಡುವ ವಿಚಾರವಾಗಿ ಸದಸ್ಯರ ನಡುವೆ ತೀವ್ರ ವಾಗ್ವಾದಗಳು ನಡೆದವು. ಅಧ್ಯಕ್ಷ ಗಜೇಂದ್ರ ಈ ಬಗ್ಗೆ ಮಾತನಾಡುತ್ತಿದ್ದಂತೆ ಕೆಂಡಾಮಂಡಲರಾದ ಸದಸ್ಯ ರಫೀಕ್, ಈ ಬಗ್ಗೆ ಚರ್ಚೆಯನ್ನೇ ಮಾಡಬಾರದು ಎಂದರು.

ಚಿಕ್ಕಬಳ್ಳಾಪುರ ನಗರದ ವಾರ್ಡ್ಗಳಿಗೆ ನೀರಿಲ್ಲ. ಇಲ್ಲಿಗೆ ಏಕೆ ಕೊಡಬೇಕು ಎಂದರು. ಆಗ ಸಭೆಯಲ್ಲಿ ಗೊಂದಲಗಳು ಮೂಡಿದವು. ಆನಂದರೆಡ್ಡಿ ಮಧ್ಯಪ್ರವೇಶಿಸಿ, ‘ಇದು ಒಳ್ಳೆಯ ವಿಚಾರ. ಆದರೆ ನಮಗೆ ಚರ್ಚಿಸುವ ಅಧಿಕಾರ ಇಲ್ಲ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಈ ಬಗ್ಗೆ ತೀರ್ಮಾನ ಆಗಬೇಕು ಎಂದರು.

ಉಪಾಧ್ಯಕ್ಷ ನಾಗರಾಜ್, ಖಾಸಗಿ ಬಡಾವಣೆಗಳಲ್ಲಿ ಬೆಸ್ಕಾಂನವರು ಅಳವಡಿಸಿರುವ ಟ್ರಾನ್ಸ್ಫಾರ್ಮರ್ ತೆರವಿಗೂ ಲಕ್ಷಾಂತರ ರೂಪಾಯಿ ಕೇಳುತ್ತಿದ್ದಾರೆ. ಈ ಬಗ್ಗೆ ಒಂದು ಸ್ಪಷ್ಟ ನೀತಿ ಅಗತ್ಯ ಎಂದು ಪ್ರತಿಪಾದಿಸಿದರು.

ಸದಸ್ಯರಾದ ರುಕ್ಮಿಣಿ, ಕಣಿತಹಳ್ಳಿ ವೆಂಕಟೇಶ್, ಅಫ್ಜಲ್, ಪೌರಾಯುಕ್ತ ಮನ್ಸೂರ್ ಅಲಿ ಹಾಗೂ ಸದಸ್ಯರು ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಚರ್ಚೆ ವೇಳೆ ತೀವ್ರ ಜಟಾಪಟಿಗಳೂ ನಡೆದವು.

ಜಕ್ಕಲಮಡಗು ಹೂಳಿನ ಚರ್ಚೆ

ಡಿ.ಎಸ್.ಆನಂದರೆಡ್ಡಿ ಬಾಬು ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಪೂರೈಸುವ ಜಕ್ಕಲಮಡಗು ಜಲಾಶಯದ ಹೂಳು ತೆಗೆಯಲು ಮತ್ತು ಉದ್ಯಾನಗಳ ಅಭಿವೃದ್ಧಿಗೆ ನಮ್ಮ ಆಡಳಿತದಲ್ಲಿ ಹಣ ಮೀಸಲಿಡಲಾಗಿತ್ತು. ಆದರೆ ಯಾವುದೇ ಪ್ರಗತಿ ಆಗಿಲ್ಲ ಎಂದರು. ಆಗ ಪೌರಾಯುಕ್ತರು ಉದ್ಯಾನಕ್ಕೆ ಸಂಬಂಧಿಸಿದಂತೆ ಕೆಲಸಗಳು ಪ್ರಗತಿಯಲ್ಲಿ ಇವೆ. ಜಕ್ಕಲಮಡಗು ಹೂಳು ತೆಗೆಯುವ ವಿಚಾರವಾಗಿ ಅಧಿಕಾರಿಗಳ ತಂಡ ಜಲಾಶಯಕ್ಕೆ ಭೇಟಿ ನೀಡಿತ್ತು. ಆದರೆ ಈಗ ನಿಗದಿಯಾಗಿರುವ ₹ 2.55 ಕೋಟಿ ಹಣ ಅದಕ್ಕೆ ಸಾಲುವುದಿಲ್ಲ ಎಂದರು.

‘ಖಾತೆ’ ಪ್ಯಾಕೇಜ್

ಆಡಳಿತ ಪಕ್ಷದ ಸದಸ್ಯ ಮಂಜುನಾಥಾಚಾರಿ ಬಡಾವಣೆಗಳಿಗೆ ನಗರಸಭೆಯು ಎನ್ಒಸಿ ನೀಡುವಾಗ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕು. ಇಂತಿಷ್ಟು ಎಂದು ಪ್ಯಾಕೇಜ್ ಮಾಡಿಕೊಂಡು ನಗರಸಭೆಯಿಂದ ಖಾತೆಗಳನ್ನು ನೀಡಲಾಗುತ್ತಿದೆ. ಸಭೆಯ ಗಮನಕ್ಕೆ ತರದೆ ಯಾವುದೇ ಬಡಾವಣೆಗಳಿಗೂ ಎನ್ಒಸಿ ನೀಡಬಾರದು ಎಂದು ಆಗ್ರಹಿಸಿದರು. ಆಗ ವಿರೋಧ ಪಕ್ಷದ ಸದಸ್ಯರು ‘ಪ್ಯಾಕೇಜ್ ಅಂದರೆ ಏನು? ಎಷ್ಟು ಪಡೆಯಲಾಗುತ್ತದೆ. ಖುದ್ದು ಆಡಳಿತ ಪಕ್ಷದ ಸದಸ್ಯರೇ ಈ ಆರೋಪ ಮಾಡುತ್ತಿದ್ದಾರೆ’ ಎಂದು ಅಧ್ಯಕ್ಷರ ವಿರುದ್ಧ ಮುಗಿಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.