ಗುರುವಾರ , ಅಕ್ಟೋಬರ್ 22, 2020
24 °C

ಗ್ರಾಮೀಣ ಜನರಿಗೆ 'ಯುವಿ ಸಾನಿಟೈಸರ್' ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಳೂರು: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡವು ಕೊರೊನಾ ವೈರಸ್ ಶಮನಗೊಳಿಸುವ 'ಯುವಿ ಸಾನಿಟೈಸರ್' ಅನ್ನು ಅಭಿವೃದ್ಧಿ ಪಡಿಸಿದೆ.

ಕೇಂದ್ರ ಸರ್ಕಾರದ 'ಉನ್ನತ ಭಾರತ ಅಭಿಯಾನ'ದ ಅಂಗವಾಗಿ ಈ ಸಾಧನ ಅಭಿವೃದ್ಧಿಪಡಿಸಲಾಗಿದೆ.

ಕೊರೊನಾ ತಡೆಗಟ್ಟುವ ಹಾಗೂ ಜನರಲ್ಲಿ ಸುರಕ್ಷತಾ ಅರಿವು ಮೂಡಿಸುವ ಸಲುವಾಗಿ 'ಹಳ್ಳಿಗಳ ಕಡೆಗೆ ನಮ್ಮ ನಡಿಗೆ' ಹೆಸರಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಈ ಸ್ಯಾನಿಟೈಸರ್ ಬಾಕ್ಸ್ ಗಳನ್ನು ಉಚಿತವಾಗಿ ವಿತರಿಸುತ್ತಿದೆ.

ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಸಂಜಯ್ ಜೈನ್, 'ಚಿಕ್ಕಬಳ್ಳಾಪುರ ಜಿಲ್ಲೆಯ ಚನ್ನಸಂದ್ರ, ಉಪ್ಪಾರಪೇಟೆ, ಕುರುಬೂರು ಮತ್ತು ದೊಡ್ಡ ಗಾಜನೂರು ಗ್ರಾಮಗಳಲ್ಲಿ 100ಕ್ಕೂ ಹೆಚ್ಚು 'ಯುವಿ ಸ್ಯಾನಿಟೈಸರ್' ಕಿಟ್‍ಗಳನ್ನು ವಿತರಿಸಲಾಗಿದೆ' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.