ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾರಿಯರ್ಸ್‌ಗೆ ಲಸಿಕೆ ವರದಾನ’

Last Updated 23 ಜನವರಿ 2021, 2:21 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕೋವಿಡ್ 19 ವಾರಿಯರ್ಸ್‌ಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿ.ಪಂ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಮತ್ತು ಡಾ.ಚಂದ್ರಮೋಹನ್ ಚಾಲನೆ ನೀಡಿದರು.

ಸರಸ್ವತಮ್ಮ ಮಾತನಾಡಿ, ‘ಕೋವಿಡ್ 19 ತುರ್ತು ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ತಮ್ಮ ಜೀವದ ಹಂಗು ತೊರೆದು ಮನೆಮನೆಗೆ ತೆರಳಿ ಕಾರ್ಯನಿರ್ವಹಿಸಿರುವ ಸಿಬ್ಬಂದಿಗೆ ಮೊದಲ ಹಂತದ ಲಸಿಕೆ ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಇದರಿಂದ ಸಂಕಷ್ಟದ ಸಂದರ್ಭದಲ್ಲಿ ಕೈ ಹಿಡಿದಿರುವ ವಾರಿಯರ್ಸ್ ಗೆ ಲಸಿಕೆ ನೀಡುತ್ತಿರುವುದು ನೆಮ್ಮದಿ ತಂದಿದೆ. ಎಲ್ಲ ವಾರಿಯರ್‌ಗಳಿಗೆ ಇದು ವರದಾನವಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕಾಗಿದೆ’ ಎಂದು ಹೇಳಿದರು.

ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ಮಾತನಾಡಿ, ‘ಕೋವಿಡ್ ತುರ್ತು ಸಂದರ್ಭದ ಆರಂಭದ ದಿನಗಳಲ್ಲಿ ಜನತೆಯನ್ನು‌ ಸೋಂಕಿನಿಂದ ಸಂರಕ್ಷಿಸಲು ಹಗಲಿರುಳು ಶ್ರಮಿಸಿದ ಆಶಾ ಕಾರ್ಯಕರ್ತರು, ಗ್ರಾ.ಪಂ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಸದಾ ಸ್ಮರಿಸಬೇಕಾಗಿದೆ. ಅವರೆಲ್ಲರ ಅವಿರತ ಸೇವೆಯಿಂದ ಈ ಭಾಗದ ಸಾಕಷ್ಟು ಜನತೆ ನೆಮ್ಮದಿಯಿಂದ ‌ಬಾಳುವಂತಾಗಿದೆ. ಸರ್ಕಾರದ ನಿರ್ದೇಶನದಂತೆ ಮೊದಲ ಹಂತದ ಲಸಿಕೆಯನ್ನು ‌ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಲಸಿಕೆ ಪಡೆದ ಬಳಿಕ ಸಿಬ್ಬಂದಿಯು ಮತ್ತಷ್ಟು ಹುರುಪಿನಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT