ಚಿಕ್ಕಬಳ್ಳಾಪುರ: ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿಯೇ ಬಾಧಿಸುತ್ತಿದೆ. ಮಂಜೂರಾಗಿರುವ ಹುದ್ದೆಗಳಲ್ಲಿ ಶೇ 70ಕ್ಕೂ ಹೆಚ್ಚು ಭಾಗ ಸಿಬ್ಬಂದಿಯೇ ಇಲ್ಲ!

ವರ್ಷದಿಂದ ವರ್ಷಕ್ಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚುತ್ತಲೇ ಇದೆ. ಈ ವರ್ಷ ಜಿಲ್ಲೆಯಿಂದ ವರ್ಗಾವಣೆ, ನಿವೃತ್ತರಾಗುವವರು ಇದ್ದರೆ, ಜಿಲ್ಲೆಗೆ ಬರುವ ಸಿಬ್ಬಂದಿಯ ಸಂಖ್ಯೆ ಇಲ್ಲವೇ ಇಲ್ಲ ಎನ್ನುವ ಸ್ಥಿತಿ ಇದೆ.

ಉಪ ನಿರ್ದೇಶಕರಿಂದ ಹಿಡಿದು ‘ಡಿ’ ದರ್ಜೆ ಸಹಾಯಕರವರೆಗೆ ಜಿಲ್ಲೆಗೆ 459 ಹುದ್ದೆಗಳು ಮಂಜೂರಾಗಿವೆ. 2021ರಲ್ಲಿ ಈ ಹುದ್ದೆಗಳಲ್ಲಿ 224 ಹುದ್ದೆಗಳು ಮಾತ್ರ ಭರ್ತಿಯಾಗಿದ್ದವು. 235 ಹುದ್ದೆಗಳು ಖಾಲಿ ಇದ್ದವು. ಆದರೆ 2023ರ ವೇಳೆಗೆ 187 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 272 ಹುದ್ದೆಗಳು ಖಾಲಿ ಇವೆ. 2025ರ ಈ ಅವಧಿಯಲ್ಲಿ 142 ಹುದ್ದೆಗಳು ಭರ್ತಿಯಾಗಿದ್ದು 317 ಹುದ್ದೆಗಳು ಖಾಲಿ ಇವೆ.

ರಾಜ್ಯದಲ್ಲಿ ಹಾಲು ಉತ್ಪಾದನೆ ಮಾಡುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಪ್ರಮುಖವಾದುದು. 2019ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2.13 ಲಕ್ಷಕ್ಕೂ ಹೆಚ್ಚು ಜಾನುವಾರು, 26,397 ಎಮ್ಮೆಗಳು, 6.13 ಲಕ್ಷಕ್ಕೂ ಹೆಚ್ಚು ಕುರಿಗಳು, 1.88 ಲಕ್ಷಕ್ಕೂ ಹೆಚ್ಚು ಮೇಕೆಗಳು, 2,481 ಹಂದಿಗಳು ಇವೆ. ಇವುಗಳನ್ನು ನಂಬಿಕೊಂಡೇ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿರುವ ಜಾನುವಾರು ಗಣತಿಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2019ರ ಜಾನುವಾರು ಗಣತಿಗೂ ಈಗಿನ ಗಣತಿಗೂ ಶೇ 20ರಷ್ಟು ರಾಸುಗಳ ಸಂಖ್ಯೆ ಕಡಿಮೆ ಆಗಿದೆ. ಈ ಹಿಂದಿನ ಗಣತಿಯಲ್ಲಿ ಕುರಿ, ಮೇಕೆಗಳು 8 ಲಕ್ಷ ಇದ್ದವು. ಈಗ 10 ಲಕ್ಷಕ್ಕೆ ಹೆಚ್ಚಿದೆ. ಕೋಳಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಹೀಗಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಅಧಿಕವಾಗಿಯೇ ಇದೆ.

ಪೂರ್ಣ ಪ್ರಮಾಣದಲ್ಲಿ ಹುದ್ದೆಗಳು ಭರ್ತಿಯಾಗದ ಕಾರಣ ಜಾನುವಾರು, ಕುರಿ, ಮೇಕೆಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಇಷ್ಟೊಂದು ಪ್ರಮಾಣದ ಹುದ್ದೆಗಳು ಖಾಲಿ ಆಗಿರುವುದರಿಂದ ಪಶುಪಾಲನಾ ಇಲಾಖೆಯ ಸೇವೆ ಕುರಿಗಾಹಿಗಳು ಮತ್ತು ರೈತರಿಗೆ ಸಕಾಲದಲ್ಲಿ ದೊರೆಯುತ್ತಿಲ್ಲ. ಮತ್ತೊಂದು ಕಡೆ ಈಗ ಇರುವ ಸಿಬ್ಬಂದಿಯ ಕೆಲಸದ ಹೊರೆಯನ್ನು ಹೆಚ್ಚಿಸಲಾಗಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ರೈತರು ಮತ್ತು ಕುರಿಗಾಹಿಗಳು ಚಿಕಿತ್ಸೆಗಾಗಿ ಪರದಾಡಬೇಕಾಗಿದೆ.

ಪ್ರತಿ ಆಸ್ಪತ್ರೆಗಳಿಗೆ ‘ಡಿ’ ದರ್ಜೆ ನೌಕರರು ಪ್ರಮುಖವಾಗಿ ಬೇಕು. ರಾಸುಗಳನ್ನು ರೈತರು ಆಸ್ಪತ್ರೆಗೆ ಕರೆತಂದಾಗ ಅವುಗಳ ಆರೈಕೆ, ಚಿಕಿತ್ಸೆ ನೀಡುವಾಗ ಸಹಾಯ ಮಾಡುವುದು, ಆಸ್ಪತ್ರೆಗಳ ನಿರ್ವಹಣೆ ಹೀಗೆ ನಾನಾ ರೀತಿಯಲ್ಲಿ ‘ಡಿ’ ದರ್ಜೆ ನೌಕರರು ಕೆಲಸ ಮಾಡುತ್ತಾರೆ. ಆದರೆ, ಜಿಲ್ಲೆಯಲ್ಲಿ 172 ಹುದ್ದೆಗಳಲ್ಲಿ 158 ‘ಡಿ’ ದರ್ಜೆ ನೌಕರರ ಹುದ್ದೆಗಳು ಖಾಲಿ ಇವೆ. ಎಷ್ಟೋ ಕಡೆ ಆಸ್ಪತ್ರೆಗಳ ಬಾಗಿಲು ತೆಗೆದು ಕಸ ಹೊಡೆಯಲು ಅಗತ್ಯ ಸಿಬ್ಬಂದಿ ಇಲ್ಲ! ಇದು ಆಸ್ಪತ್ರೆಗಳ ನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ.

ಈಗ ಇರುವ ‘ಡಿ’ ದರ್ಜೆ ನೌಕರರಲ್ಲಿ 59 ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 13 ಮಂದಿ ಗುತ್ತಿಗೆ ಪಶುವೈದ್ಯರು, 7 ಮಂದಿ ಹೊರ ಗುತ್ತಿಗೆ ವಾಹನ ಚಾಲಕರು ಕೆಲಸ ಮಾಡುತ್ತಿದ್ದಾರೆ.

ಒಂದೆರೆಡು ಕುರಿ, ಮೇಕೆಗಳಿಗೆ ರೋಗ ತಗುಲಿದರೆ ಅವುಗಳನ್ನು ಆಸ್ಪತ್ರೆಗಳಿಗೆ ಕರೆತರಬಹುದು. ಆದರೆ 20, 30 ಕುರಿಗಳಿಗೆ ರೋಗ ತಗುಲಿದರೆ ಆಟೊಗಳಲ್ಲಿ ಆಸ್ಪತ್ರೆಗೆ ಕರೆತರಬೇಕು. ಇದು ಸಹಜವಾಗಿ ಕುರಿಗಾಹಿಗಳಿಗೆ ಹೊರೆ ಆಗುತ್ತದೆ. ಇದರ ಬದಲು ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಹೆಚ್ಚು ಮಾಡಬೇಕು ಎನ್ನುವ ಆಗ್ರಹ ಕುರಿಗಾಹಿಗಳದ್ದು.

ಪಶು ಸಂಗೋಪನಾ ಇಲಾಖೆಯು ಜಾನುವಾರುಗಳಿಗೆ ವಿವಿಧ ಲಸಿಕೆಗಳನ್ನು ಹಾಕುತ್ತದೆ. ನಿಗದಿತ ಕಾಲಮಿತಿಯ ಒಳಗೆ ಲಸಿಕೆಗಳನ್ನು ಹಾಕಬೇಕು. ಆದರೆ ಸಿಬ್ಬಂದಿ ಕೊರತೆಯಿಂದ ಲಸಿಕೆ ಹಾಕುವುದು ಸೇರಿದಂತೆ ಇಲಾಖೆಯ ಇನ್ನಿತರ ಕೆಲಸಗಳ ಮೇಲೆ ಹೊರೆ ಬೀಳುತ್ತಿದೆ ಎನ್ನುತ್ತವೆ ಇಲಾಖೆಯ ಮೂಲಗಳು.

ನೂತನ ಸರ್ಕಾರ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಬೇಕು. ಗ್ರಾಮೀಣ ಭಾಗಗಳಲ್ಲಿ ಪಶುಗಳ ಚಿಕಿತ್ಸೆಗೆ ಕಿಲೋ ಮೀಟರ್ಗಟ್ಟಲೆ ನಡೆದು ಹೋಗಬೇಕು. ಅಗತ್ಯ ಸಿಬ್ಬಂದಿ ಇದ್ದರೆ ಅವರು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡುವರು. ಸರ್ಕಾರ ಈ ವಿಚಾರವಾಗಿ ಗಮನವಹಿಸಬೇಕು ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.