ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೇಳೂರು: ಮಳೆ ನೀರಿಗೆ ಕೆಸರು ಗದ್ದೆಯಾದ ಕಾಲೇಜು ರಸ್ತೆ

Published 20 ಜೂನ್ 2024, 13:59 IST
Last Updated 20 ಜೂನ್ 2024, 13:59 IST
ಅಕ್ಷರ ಗಾತ್ರ

ಚೇಳೂರು: ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಪಟ್ಟಣದ ಸರ್ಕಾರಿ ಕಾಲೇಜು ರಸ್ತೆಯು ಸಂಪೂರ್ಣ ಕೆಸರುಮಯವಾಗಿದೆ. ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕಾಲೇಜು ರಸ್ತೆ ತಗ್ಗು ಪ್ರದೇಶದಲ್ಲಿದೆ. ಇತ್ತೀಚೆಗೆ ಗ್ರಾಮ ಪಂಚಾಯತಿಯಿಂದ ತಗ್ಗು ಪ್ರದೇಶಕ್ಕೆ ಮಳೆ ನೀರು ನಿಲ್ಲದಂತೆ ಕೆಸರು ಮಣ್ಣನ್ನು ಹಾಕಲಾಗಿತ್ತು. ಈಗ ಮಳೆ ನೀರಿಗೆ ಮಣ್ಣು ಕೆಸರಾಗಿ ಮಾರ್ಪಟ್ಟಿದೆ.

ಇಲ್ಲಿನ ಸರ್ಕಾರಿ ಕಾಲೇಜು ಆವರಣದಲ್ಲಿ ಅಂಗನವಾಡಿ ಇವೆ. ಎಲ್‌ಕೆಜಿ ಯಿಂದ ದ್ವಿತೀಯ ಪಿಯುವರೆಗೆ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಬರಬೇಕಿದೆ.

ಸುಮಾರು ದಿನಗಳಿಂದ ರಸ್ತೆ ಹಾಳಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸುಗಮ ರಸ್ತೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನಿವಾಸಿಗಳು, ರೈತರು, ಕೂಲಿ ಕಾರ್ಮಿಕರು ಈ ರಸ್ತೆಯಲ್ಲಿ ಓಡಾಡುತ್ತಿದ್ದು, ಎಲ್ಲಿ ಕಾಲು ಜಾರಿ ಬೀಳುತ್ತೇವೆ ಎಂಬ ಭಯದಿಂದ ಸಂಚರಿಸುತ್ತಿದ್ದಾರೆ. ಬೇಸಿಗೆ ವೇಳೆ ಸುಗಮ ರಸ್ತೆ ‌ಮಾಡಿ‌ ಎಂದು ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಇಂದು ಕೆಸರಿನಿಂದ ಸರಿಯಾದ ಮಣ್ಣು ಹಾಕಿ ನೀರು ನಿಲ್ಲದಂತೆ ಮಾಡಲು ಸಹ ಆಗುತ್ತಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT