ಚೇಳೂರು (ಬಾಗೇಪಲ್ಲಿ): ಚೇಳೂರು ತಾಲ್ಲೂಕಿನ ದಿಗವನೆಟಕುಂಟಪಲ್ಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.

ಮೀನು ಹಿಡಿದು, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಆಶಾಬೀ (54) ಮೃತಪಟ್ಟವರು.

ಈ ಕುಟುಂಬದವರು ಕೆರೆ, ಕುಂಟೆಗಳಲ್ಲಿ ಮೀನು ಹಿಡಿದು ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡಿಕೊಂಡಿದ್ದರು. ಗ್ರಾಮದಲ್ಲಿರುವ ಕೆರೆಯಲ್ಲಿ ಹಗಲಿನಲ್ಲಿ ಬಲೆಗಳನ್ನು ಹಾಕಿ, ರಾತ್ರಿ ಸಮಯದಲ್ಲಿ ಬಲೆಗೆ ಬಿದ್ದ ಮೀನುಗಳನ್ನು ಹಿಡಿದು ಮಾರುತ್ತಿದ್ದರು.

ಗುರುವಾರ ರಾತ್ರಿ ಎಂದಿನಂತೆ ಕೆರೆಗೆ ದೋಣಿ ಇಳಿಸಿದ್ದಾರೆ. ಕೆರೆಯಲ್ಲಿನ 11 ಕೆ.ವಿ ವಿದ್ಯುತ್ ತಂತಿಗಳು ದೋಣಿಯಲ್ಲಿನ ಮಾಬುಸಾಬ್ ಮತ್ತು ಅವರ ಪತ್ನಿ ಆಶಾಬೀಗೆ ತಗುಲಿವೆ. ಇದರಿಂದ ಆಶಾೀ ಸ್ಥಳದಲ್ಲೇ ಮೃತಪಟ್ಟಿದ್ದು, ಮಾಬುಸಾಬ್ ಗಾಯಗೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಸ್ಥಳಕ್ಕೆ ಬಂದ ಬಾಗೇಪಲ್ಲಿ ಅಗ್ನಿಶಾಮಕ ಸಿಬ್ಬಂದಿ, ಕೆರೆಯಲ್ಲಿ
ಮುಳುಗಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ. ಬಾಗೇಪಲ್ಲಿ
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಮೃತಪಟ್ಟ ಮಹಿಳೆ ಕುಟುಂಬಕ್ಕೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಚೇಳೂರು ತಾಲ್ಲೂಕು ಮುಖಂಡ ಜಹೀರ್ ಬೇಗ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.