ಕಡಬ(ಉಪ್ಪಿನಂಗಡಿ): ತಾಲ್ಲೂಕಿನ ರೆಂಜಲಾಡಿ ಗ್ರಾಮದಲ್ಲಿನ ಖಂಡಿಗ ಎಂಬಲ್ಲಿ 9ನೇ ತರಗತಿ ವಿದ್ಯಾರ್ಥಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಖಂಡಿಗ ನಿವಾಸಿ ಲಕ್ಷ್ಮಣ ಗೌಡ ಅವರ ಪುತ್ರ ಗಗನ್ ಕುಮಾರ್(14) ಮೃತಪಟ್ಟವ.

ಗಗನ್ ಕುಮಾರ್ ಸ್ಥಳೀಯ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದ. ಆತನ ವಿದ್ಯಾಭ್ಯಾಸದ ಪ್ರಗತಿಯನ್ನು ನೋಡಲು ಆತನ ತಂದೆ ಶಾಲೆಗೆ ಹೋಗಿದ್ದರು. ಅಲ್ಲಿ ಮಗನ ಕಲಿಕಾ ಪ್ರಗತಿ ಉತ್ತಮವಾಗಿಲ್ಲವೆಂಬುದು ತಿಳಿದು ಬಂದಿತ್ತು. ಸಂಜೆ ಶಾಲೆಯಿಂದ ಮನೆಗೆ ಮರಳಿದ ಬಾಲಕ, ಬಳಿಕ ಮನೆ ಸಮೀಪವೇ ಸಂತೋಷದಿಂದಲೇ ಆಟವಾಡಿಕೊಂಡಿದ್ದ. ಬಳಿಕ ಮನೆಗೆ ಬಂದು ತಿಂಡಿ ತಿಂದು ಕೊಠಡಿಯೊಳಗೆ ಪುಸ್ತಕ ತೆಗೆದುಕೊಂಡು ಓದಲೆಂದು ತೆರಳಿ ಬಾಗಿಲಿನ ಚಿಲಕ ಹಾಕಿಕೊಂಡಿದ್ದಾನೆ. 10 ನಿಮಿಷದ ಬಳಿಕ ಬಾಲಕನ ತಂದೆ ಆತನನ್ನು ಕರೆದರೂ ಪ್ರತಿಕ್ರಿಯೆ ಬಾರದಿದ್ದಾಗ ಕೊಠಡಿಯ ಬಾಗಿಲನ್ನು ಒಡೆದು ಹಾಕಿ ನೋಡಿದಾಗ ಬಾಲಕ ನೇಣಿಗೆ ಹಾಕಿಕೊಂಡಿರುವುದು ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.