ಮಂಗಳವಾರ, ಜನವರಿ 28, 2020
25 °C

ಅಪಘಾತ: ಯೋಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ರಜೆಯ ಮೇಲೆ ಹಳ್ಳಿಗೆ ಬಂದಿದ್ದ ಸಿ.ಆರ್.ಪಿ.ಎಫ್ ಯೋಧ ಬಿ.ಸಿ.ಚಿದಾನಂದ (27) ಸಖರಾಯಪಟ್ಟಣ-ಉದ್ದೇಬೋರನಹಳ್ಳಿ ಸಮೀಪ ಕೇಸರಿ ಫಾರಂ ಬಳಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ ಸೇತುವೆಗೆ ಡಿಕ್ಕಿ ಹೊಡೆದು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಮಂಗಳವಾರ ರಾತ್ರಿಯಾದರೂ ಚಿದಾನಂದ ಮನೆಗೆ ಬಾರದಿದ್ದಾಗ ಅವರ ಕುಟುಂಬದವರು ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್‍ಐ ಮೌನೇಶ್ ಮತ್ತು ಸಿಬ್ಬಂದಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾಗ ಉದ್ದೇಬೋರನಹಳ್ಳಿ ಸೇತುವೆ ಬಳಿ ಅವರ ಶವ ಮತ್ತು ಸ್ಕೂಟಿ ಪತ್ತೆಯಾಗಿದೆ.

ಸಖರಾಯಪಟ್ಟಣ ಹೋಬಳಿಯ ಬಾಳೇನಹಳ್ಳಿ ಗ್ರಾಮದ ಕೃಷಿಕ ಬಿ.ಸಿ.ಚಂದ್ರೇಗೌಡ ಅವರ ಪುತ್ರ ಬಿ.ಸಿ.ಚಿದಾನಂದ 8 ವರ್ಷಗಳಿಂದ ಸಿ.ಆರ್.ಪಿ.ಎಫ್.ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೂ ಅವಿವಾಹಿತರು. ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಅಸ್ಸಾಂ ರೆಜಿಮೆಂಟ್‌ನಲ್ಲಿದ್ದ ಅವರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಯೋಧನ ಮೃತದೇಹವನ್ನು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗುರುವಾರ ಸ್ವಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸೂಚಿಸಿದರು. ಬಾಳೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಂದಿ ಭಾಗವಹಿಸಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು