ಗುರುವಾರ , ಆಗಸ್ಟ್ 18, 2022
25 °C
ಪಂಡಿತಾರಾಧ್ಯ ಶ್ರೀ ಅಭಿಮತ

ವಿಶ್ವಕ್ಕೆ ಬೆಳಕು ನೀಡಿದ ಅಕ್ಕ ನಾಗಲಾಂಬಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತರೀಕೆರೆ: ವಚನ ಸಾಹಿತ್ಯ ರಚಿಸಿ, ಬೆಳೆಸಿ ಸಂರಕ್ಷಣೆ ಮಾಡುವಲ್ಲಿ ಶಿವಶರಣೆ ಅಕ್ಕನಾಗನಾಗಲಾಂಬಿಕೆ ಕಾರ್ಯ ಮಹತ್ವದಾಗಿದೆ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. 

ಅವರು ಪಟ್ಟಣದ ಅಕ್ಕನಾಗಲಾಂಬಿಕೆ ಕಾಲೋನಿಯಲ್ಲಿ ನಿರ್ಮಾಣವಾಗಿರುವ ನೂತನ ಅಕ್ಕನಾಗಲಾಂಬಿಕೆ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಅಕ್ಕನಾಗಲಾಂಬಿಕೆ ಅವರು ಕಲ್ಯಾಣದಿಂದ ಇಲ್ಲಿಯವರೆಗೆ ಬಂದು ವಚನ ಸಾಹಿತ್ಯ ಮತ್ತು ಅನುಭವ ಮಂಟಪವನ್ನು ಪರಿಚಯಿಸಿದರು ಎಂದು ಹೇಳಿದರು.

ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ‘ನಮ್ಮ ಅಧಿಕಾರ ಅವಧಿಯಲ್ಲಿ ಸಮುದಾಯ ಭವನಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯಾತ್ರಿನಿವಾಸಕ್ಕೆ ಹೆಚ್ಚಿನ ಅನುದಾನ ನೀಡುವುದಲ್ಲದೇ, ಈ ಕ್ಷೇತ್ರವನ್ನು ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ದಿ ಪಡಿಸಲಾಗುವುದು’ ಎಂದರು.

ಮುಖಂಡ ಎಸ್.ಎಂ. ನಾಗರಾಜು, ಅಕ್ಕನಾಗಲಾಂಬಿಕೆ ಬಿಜ್ಜಳ ಆಡಳಿತದಲ್ಲಿನ ಕಂದಾಚಾರಗಳನ್ನು ಖಂಡಿಸಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದರು ಎಂದರು.

ಮುಖಂಡ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ‘ಅನೇಕರ ಶ್ರಮದಿಂದ ಪೂಜ್ಯರ ಮಾರ್ಗದರ್ಶನದಿಂದ ಸಮುದಾಯ ಭವನ ನಿರ್ಮಾಣವಾಗಿದೆ. ನಮ್ಮ ಅಧಿಕಾರ ಅವಧಿಯಲ್ಲಿ ಅನುದಾನ ನೀಡಲಾಗಿದೆ’ ಎಂದರು. 

 ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಆನಂದಪ್ಪ, ಪುರಸಭಾ ಸದಸ್ಯರಾದ ಆಶಾ ಅರುಣ್ ಕುಮಾರ್, ಉಪ ವಿಭಾಗಧಿಕಾರಿ ಸಿದ್ದಲಿಂಗರೆಡ್ಡಿ ಮಾತನಾಡಿದರು.  ತಹಶೀಲ್ದಾರ್ ಪೊರ್ಣಿಮಾ, ಮುಖಂಡರಾದ ಕೆ.ಆರ್. ಧ್ರುವಕುಮಾರ್, ದೋರನಾಳು ಪರಮೇಶ್, ಸಮುದಾಯ ಭವನ ಸಮಿತಿ ಸದಸ್ಯರಾದ ರಂಗಪ್ಪ, ಪದ್ಮರಾಜ್, ಚಿತ್ರಶೇಖರಪ್ಪ, ರಾಜಪ್ಪ, ಇಒ ಗೀತಾ ಶಂಕರ್, ಪುರಸಭಾ ಮುಖ್ಯಧಿಕಾರಿ ಮಹಂತೇಶ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ದಾದಾಪೀರ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.