ಆಲ್ದೂರು: ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಸಭೆ ನಡೆಯಿತು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಎಚ್.ಎಸ್.ಕೃಷ್ಣೆಗೌಡ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಸಮಾಧಾನದ ಪ್ರತೀಕದಂತೆ ತುಂಬು ಜೀವನ ನಡೆಸಿದರು. ರಾಜಕೀಯ ಜೀವನದಲ್ಲಿ ಹೆಸರು, ಪದವಿ ನಿರೀಕ್ಷೆಗಾಗಿ ಬಂದವರಲ್ಲ ರಾಜಕೀಯವನ್ನು ಸೇವೆ ಎಂದು ಪರಿಗಣಿಸಿದವರು ಎಂದರು.

ಮಹಿಳಾ ಮುಖಂಡರಾದ ಸವಿತಾ ರಮೇಶ್, ವೀರಶೈವ ಸಮಾಜ ಮತ್ತು ಕಾಂಗ್ರೆಸ್ ಪಕ್ಷ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ಪುರಸಭೆಯಿಂದ ರಾಜಕೀಯ ಜೀವನ ಪ್ರಾರಂಭಿಸಿರಾಜ್ಯಮಟ್ಟದ ನಾಯಕರಾಗಿ ಬೆಳೆದ ಜೀವನ ಚರಿತ್ರೆ ಎಲ್ಲರಿಗೂ ಮಾದರಿ ಎಂದರು.

ಮುಖಂಡ ನವರಾಜು ಮಾತನಾಡಿ, ಶಿವಶಂಕರಪ್ಪ ಅವರು ಎಂದಿಗೂ ಪಕ್ಷಾಂತರ ಮಾಡದೆ ನಿಷ್ಠಾವಂತರು ಪಕ್ಷದ ಕಾರ್ಯಕರ್ತರಾಗಿ ಬದುಕು ನಡೆಸಿದವರು ಎಂದು ಸ್ಮರಿಸಿದರು.

ಸ್ಥಳೀಯರಾದ ಬಸವರಾಜ್, ಬ್ಲಾಕ್ ಅಧ್ಯಕ್ಷ ಮುದಾಬಿರ್ ಮಾತನಾಡಿದರು. ಪಕ್ಷದ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್, ರಾಜೇಶ್ ವಿ.ಜೆ., ಪ್ರಧಾನ ಕಾರ್ಯದರ್ಶಿ ಸುರೇಶ್ ಎಚ್.ಎಸ್, ಹೋಬಳಿ ಅಧ್ಯಕ್ಷ ಕೆಳಗೂರು ಪೂರ್ಣೆಶ್, ಕಾರ್ಯದರ್ಶಿ ರವಿಚಂದ್ರ, ವೀರಶೈವ ಸಮಾಜದ ಹೋಬಳಿ ಅಧ್ಯಕ್ಷರಾದ ಮಹೇಶ್, ಉಮೇಶ್ ದೇವರಹಳ್ಳಿ, ಈರೇಗೌಡ, ಬಿಡಿ, ರಮೇಶ್, ಸತೀಶ್ ಕೆ.ಜೆ., ಕೆ.ಎಲ್.ರಾಜು, ಶಿವಕುಮಾರ್, ರವಿಕುಮಾರ್ ಎಚ್.ಎಲ್, ಎ.ಯು.ಇಬ್ರಾಹಿಂ, ಅನಿಲ್, ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.