ಶೃಂಗೇರಿ: ‘ಸಮಕಾಲಿನ ವಿದ್ಯಮಾನಗಳಿಗೆ ಸ್ಪಂದಿಸಲು ಹನಿಗವನ ಅತ್ಯಂತ ಅವಶ್ಯಕ. ಕೆಲವೇ ಸಾಲುಗಳಲ್ಲಿ ಒಂದು ಮಿಂಚು, ಬೆರಗು, ವಿಡಂಬನೆ, ವ್ಯಂಗ್ಯ, ವಿಷಾದ, ತಮಾಷೆ, ಸುಂದರ ಕಲ್ಪನೆ, ಹೋಲಿಕೆ ಪದ ಜೋಡಣೆಯೇ ಚುಟುಕು ಸಾಹಿತ್ಯ’ ಎಂದು ಚುಟುಕು ಕವಿ ಎಚ್.ದುಂಡಿರಾಜ್ ತಿಳಿಸಿದರು.

ಶೃಂಗೇರಿ ಪಟ್ಟಣದ ವಿ.ಆರ್ ಗೌರಿಶಂಕರ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಚುಟುಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರೇಮ, ರಾಜಕೀಯದಿಂದ ಆಧ್ಯಾತ್ಮದ ತನಕ ಎಲ್ಲಾ ವಿಷಯಗಳ ವೈವಿಧ್ಯವನ್ನು ಕೆಲವೇ ಸಾಲುಗಳಲ್ಲಿ ಮತ್ತು ಅತ್ಯಂತ ಕಡಿಮೆ ಪದಗಳಲ್ಲಿ ಹೇಳಬಹುದು. ಕಾವ್ಯ ಇರುವುದು ಕವಿತೆಯ ಗಾತ್ರದಲ್ಲಿ ಅಲ್ಲ, ಅದು ನೀಡುವ ಅನುಭವದಲ್ಲಿ. ಕವನಗಳು ಕೇವಲ ಹಾಸ್ಯಕ್ಕೆ ಸೀಮಿತವಾಗಿಲ್ಲ. ಅದು ಸರಳತೆ ಮತ್ತು ಸಮಕಾಲೀನತೆಯ ಗುಣದಿಂದ ಸಾಹಿತ್ಯೇತರ ಕ್ಷೇತ್ರದವರನ್ನೂ ಆಕರ್ಷಿಸುತ್ತದೆ. ಕವನಗಳ ಮೂಲಕ ಓದು, ಬರವಣಿಗೆಯನ್ನು ಆರಂಭಿಸುವವರು ಕ್ರಮೇಣ ಸಾಹಿತ್ಯದ ಇತರ ಪ್ರಕಾರಗಳನ್ನು ಸಾಹಿತ್ಯ ರಚಿಸಲು ಶುರು ಮಾಡಿದ್ದಾರೆ ಎಂದರು.

ಪ್ರಸ್ತುತ ಉತ್ತಮ ಕವನಗಳನ್ನು ಬರೆಯಲು ಬೇಕಾದ ಅಧ್ಯಯನ ಮತ್ತು ತಾಳ್ಮೆ ಇಲ್ಲದೆ ಕೇವಲ ಉತ್ಸಾಹವನ್ನು ಬಂಡವಾಳವಾಗಿ ಇಟ್ಟುಕೊಂಡು ಬರೆಯುವವರು ಹೆಚ್ಚಾಗಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ‘ಜಿಲ್ಲೆಯಲ್ಲಿ ಹಲವರು ಚುಟುಕು ಕವಿಗಳಿದ್ದಾರೆ. ಅವರನ್ನು ಇಂತಹ ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಬೇಕು. ಕಲೆ, ಸಾಹಿತ್ಯ, ಸಂಗೀತ ಮತ್ತು ಚುಟುಕು ಸಾಹಿತ್ಯ ಮನಸ್ಸನ್ನು ಅರಳಿಸುತ್ತದೆ. ರಾತ್ರಿ ನಿದ್ದೆ ಬರದಿದ್ದರೆ ಪುಸ್ತಕ ಓದಬೇಕು. ಕನ್ನಡ ಭಾಷೆ ಎಂದರೆ ಸಂಬಂಧಗಳ ಬೆಸೆಯುವ ಮಾಧ್ಯಮ. ಭಾಷೆಯ ಬಗ್ಗೆ ಜ್ಞಾನ ಶಕ್ತಿ ಮತ್ತು ಇಚ್ಛಾಶಕ್ತಿ ಬೇಕು’ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ‘ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹೇಳಿಕೊಡಬೇಕು. ತುಂಬಾ ಸಮಯ ದೊಡ್ಡ ವಿಷಯದ ಬಗ್ಗೆ ಗಮನ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಆ ವಿಷಯವನ್ನು 4 ಸಾಲುಗಳಲ್ಲಿ ಹೇಳುವುದೇ ಚುಟುಕು’ ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ, ‘ಸಾಹಿತ್ಯಕ್ಕೆ ಬಹು ದೊಡ್ಡ ಶಕ್ತಿ ಇದೆ. ನಾವು ಕೆಲವೊಮ್ಮೆ ಸಾಧನೆ ಮಾಡಲು ಹೊರಟಾಗ ಸಮಸ್ಯೆಗಳು ಎದುರಾಗುತ್ತವೆ. ಅದನ್ನು ಎದುರಿಸಿ ನಿಂತಾಗ ಸಾಧನೆ ಮಾಡಬಹುದು. ಸಾಹಿತ್ಯದಲ್ಲಿ ಜಾತಿ, ಧರ್ಮ, ಪಕ್ಷ ಮೀರಿ ಬೆಳೆದಿದೆ’ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್ ಸುಬ್ರಹ್ಮಣ್ಯ, ಶೈಲಾಜ ರತ್ನಕರ್ ಹೆಗ್ಡೆ, ಪುಷ್ಪಾ ಲಕ್ಷ್ಮೀನಾರಯಣ್, ನೌಕರರ ಸಂಘದ ಅಧ್ಯಕ್ಷ ಬಿ.ಜಿ. ನಾಗೇಶ್, ಸಬ್ ಇನ್ಸ್ಪೆಕ್ಟರ್ ಅಭಿಷೇಕ್, ಮೋಹನ್ ರಾಜಣ್ಣ, ಅಂಗುರ್ಡಿ ದಿನೇಶ್, ಸಮಂಗಲಿ ಆನಂದಸ್ವಾಮಿ, ಎಚ್.ಎಸ್. ವೇಣುಗೋಪಾಲ್, ಪ್ರವೀಣ್ ಪೂಜಾರಿ, ಚಂದ್ರಶೇಖರ್ ಮೆಣಸೆ, ಎಚ್.ಎ. ಶ್ರೀನಿವಾಸ್, ಎಚ್.ಆರ್. ಚಂದ್ರಪ್ಪ, ಚಿಕ್ಕನಲ್ಲೂರು ಪರಮೇಶ್, ಜೆ.ಎಂ. ಹರ್ಷ, ಎಸ್.ಎಸ್ ಪೂರ್ಣೇಶ್, ಆಗುಂಬೆ ಗಣೇಶ್ ಹೆಗ್ಡೆ, ಶೃಂಗೇರಿ ರಾಮಣ್ಣ, ಉಮೇಶ್ ಹರಿಹರ, ಎಸ್.ಎಸ್. ವೆಂಕಟೇಶ್, ಗುರುಮೂರ್ತಿ, ಸೌಮ್ಯಾ ವಿಜಯಕುಮಾರ್, ಸುನೀತಾ ನವೀನಗೌಡ, ರಮೇಶ್ ಶೂನ್ಯ, ಚೇತನ್ ಕಲ್ಲಾಳಿ, ಕೌಸ್ತುಭಾ ಭಟ್, ಜಗದೀಶ್, ಯೋಗಪ್ಪ ಇದ್ದರು.

‘ಕನ್ನಡದ ಹಬ್ಬಕ್ಕೆ ರಾಜಕಾರಣ ಮಾಡಬಾರದು’

ಯಾವುದೇ ಕನ್ನಡದ ಹಬ್ಬವನ್ನು ಆಚರಿಸುವಾಗ ರಾಜಕಾರಣ ಮಾಡಬಾರದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ‘16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು 2 ದಿನ ಆಚರಿಸಲು ನಿರ್ಧರಿಸಲಾಗಿತ್ತು. ಸಮ್ಮೇಳಾಧ್ಯಕ್ಷರಾಗಿ ಕಲ್ಕುಳಿ ವಿಠಲ್ ಹೆಗ್ಡೆ ಅವರ ಆಯ್ಕೆಯ ವಿಚಾರದಲ್ಲಿ ರಾಜಕೀಯ ಪ್ರೇರಪಣೆಯ ವಿರೋಧದಿಂದ ಕನ್ನಡದ ಸಮ್ಮೇಳನ ನಡೆಸುವುದು ಕಷ್ಟವಾಯಿತು. ಪೇಟ್ರೋಲ್ ಬಾಂಬ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದರು. ಆ ಸಂದರ್ಭದಲ್ಲಿ ಜನರು ಮತ್ತು ಸಾಹಿತಿಗಳ ಹಿತದೃಷ್ಟಿಯಿಂದ ಸಮ್ಮೇಳನವನ್ನು ಒಂದು ದಿನಕ್ಕೆ ನಿಲ್ಲಿಸಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು. ಮಲೆನಾಡಿನಲ್ಲಿ ಕಲ್ಕುಳಿ ವಿಠಲ್ ಹೆಗ್ಡೆ ಅವರು ಮಾಡಿರುವ ಕೆಲಸಕ್ಕೆ ಇತಿಹಾಸವಿದೆ. ಆದರಿಂದ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದರು. ‘ಈ ಕಾರ್ಯಕ್ರಮಕ್ಕೆ ಭಾಗಿಯಾಗಬಾರದು ಎಂಬ ಒತ್ತಡ ಇತ್ತು. ನಾನು ಕನ್ನಡದ ಕೆಲಸ ನಿಲ್ಲಬಾರದೆಂಬ ಕಾರಣಕ್ಕೆ ಭಾಗಿಯಾಗಿದ್ದೇನೆ. ಆದರಿಂದ ಯಾವಗಲೂ ಒಳ್ಳೆಯ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಪುಸ್ತಕಗಳ ಬಿಡುಗಡೆ: ಪ್ರಶಸ್ತಿ ಪ್ರದಾನ

ಕನ್ನಡ ಭವನದಲ್ಲಿ ರಾಷ್ಟ್ರಧ್ವಜ ಪರಿಷತ್ತಿನ ಧ್ವಜ ನಾಡಧ್ವಜ ಹಾರಿಸುವ ಮೂಲಕ ಸಮ್ಮೇಳನ ಆರಂಭವಾಯಿತು. ಕಿಗ್ಗಾ ಎಚ್.ಶ್ರೀನಿವಾಸ್ ಅವರ ‘ಕನ್ನಡ ನುಡಿ’ ಪುಸ್ತಕ ಮತ್ತು ಚಿಕ್ಕಮಗಳೂರು ಸೌಭಾಗ್ಯ ಮಹಾಂತೇಶ್ ಅವರ ‘ಚಿನ್ನದ ಟೋಪಿ’ ಹಾಗೂ ಸಿಂಗಟಗೆರೆ ಶಪಿತಾ ಬೇಗಂ ಅವರ ‘ನೆನಪಿನ ಪಯಣ’ ಹಾಗೂ ‘ನನ್ನುಡಿಯ ತೇರು’ ಕೃತಿಗಳನ್ನು ಸಮ್ಮೇಳಣದಲ್ಲಿ ಬಿಡುಗಡೆ ಮಾಡಲಾಯಿತು. ಮಧ್ಯಾಹ್ನ ಚುಟುಕು ಕವಿಗೋಷ್ಠಿ ಮತ್ತು ಚುಟುಕು ಸಾಹಿತ್ಯ ಗೋಷ್ಠಿ ನಡೆದವು. ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ವಿಶೇಷ ಮನ್ನಣೆ ಹಾಗೂ ಅಖಿಲ ಭಾರತ ಕನ್ನಡ ಚುಟುಕು ಸಿರಿ ಪ್ರಶಸ್ತಿಯನ್ನು ಎಂ.ಜಿ.ದೇಶಪಾಂಡೆ ಸಾಹಿತಿ ಬಿ.ಶಿವಶಂಕರ್ ಅವರಿಗೆ ಶೃಂಗೇರಿ ಕ್ಷೇತ್ರದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಪ್ರದಾನ ಮಾಡಿದರು. ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಚುಟುಕು ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಥಳೀಯ ಕಲಾವಿದರು ಹಾಗೂ ನಾಟ್ಯ ನೃತ್ಯ ಕಲಾ ಅಕಾಡೆಮಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.