ಕೊಪ್ಪ: ‘ರ್ಯಾಗಿಂಗ್ ಒಂದು ಪಿಡುಗಾಗಿದ್ದು, ಉನ್ನತ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಂದ ಹೆಚ್ಚು ನಡೆಯುವ ಅಪವಾದಗಳಿವೆ. ರ್ಯಾಗಿಂಗ್ಗೆ ಕಿರಿಯ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಪಿಎಸ್ಐ ಜಿ.ಕೆ.ಬಸವರಾಜ್ ಹೇಳಿದರು.

ಪಟ್ಟಣ ಸಮೀಪದ ಎ.ಎಲ್.ಎನ್.ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್ ವಿರುದ್ಧ ದಿನ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಕಾಲೇಜಿಗೆ ಅಥವಾ ಹಾಸ್ಟೆಲ್ಗೆ ಹೊಸದಾಗಿ ಸೇರ್ಪಡೆಯಾದಾಗ ತಮ್ಮ ಕುಟುಂಬದ ಸದಸ್ಯರಂತೆ ಕಾಣಬೇಕು ಎಂದರು.

'ವಿದ್ಯಾರ್ಥಿಗಳು ದೇಶ, ಸಂಸ್ಕೃತಿ ಬಗ್ಗೆ ಗೌರವ, ಪ್ರೀತಿ ಬೆಳೆಸಿಕೊಂಡಾಗ ರ್ಯಾಗಿಂಗ್ನಂತಹ ಕ್ರೌರ್ಯವನ್ನು ತಡೆಗಟ್ಟಬಹುದು. ರ್ಯಾಗಿಂಗ್ ತಡೆಯುವಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯೂ ಮಹತ್ವದ್ದಾಗಿದೆ. ರ್ಯಾಗಿಂಗ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ’ ಎಂದರು.

ಪಿಎಸ್ಐ ಬಸವರಾಜ್ ಅವರನ್ನು ಗೌರವಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲ ಡಾ.ಡಿ.ಕೆ.ಮಿಶ್ರಾ, ಡಾ.ಜಗದೀಶ್ ಮಯ್ಯ, ಡಾ.ಪೂಜಾ ಹುಯಿಲಗೋಳ, ಉಪನ್ಯಾಸಕರಾದ ಸಿ.ಎಚ್.ಪ್ರಕಾಶ್, ಡಾ.ಶ್ರದ್ಧಾ, ಡಾ.ಸುಕೃತ್, ಪೊಲೀಸ್ ಸಿಬ್ಬಂದಿ ಮಥಾಯಿ, ಕಾಲೇಜು ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.