ನವದೆಹಲಿ: ಭಾರತದ ಗುಲ್ವೀರ್ ಸಿಂಗ್ ಅವರು ಬುಡಾಪೆಸ್ಟ್ನಲ್ಲಿ ನಡೆದ ಜೂಲೈ ಈಸ್ತವಾನ್ ಮೆಮೊರಿಯಲ್ ಹಂಗೇರಿಯನ್ ಅಥ್ಲೆಟಿಕ್ಸ್ ಗ್ರ್ಯಾನ್ಪ್ರೀ ಟೂರ್ನಿಯಲ್ಲಿ 3000 ಮೀ. ಓಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ವಿಶ್ವ ಅಥ್ಲೆಟಿಕ್ಸ್ನ ಕಾಂಟಿನೆಂಟಲ್ ಟೂರ್ ಗೋಲ್ಡ್ ಮಟ್ಟದ ಈ ಸ್ಪರ್ಧೆಯಲ್ಲಿ ಗುಲ್ವೀರ್ ಅವರು 7ನಿ.34.49 ಸೆಕೆಂಡುಗಳಲ್ಲಿ ಗುರಿ ತಲುಪಿ, ಐದನೇ ಸ್ಥಾನ ಪಡೆದರು. ಇದರೊಂದಿಗೆ, ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು (7ನಿ.38.26ಸೆ.) ಉತ್ತಮಪಡಿಸಿಕೊಂಡರು.

ಕೆನ್ಯಾದ ಕಿಪ್ಸಂಗ್ ಮ್ಯಾಥ್ಯೂ ಕಿಪ್ಚುಂಬಾ (7ನಿ.33.23ಸೆ.) ಚಿನ್ನ ಗೆದ್ದರೆ, ಮೆಕ್ಸಿಕೊದ ಎಡ್ವರ್ಡೊ ಹೆರೆರಾ (7ನಿ.33.58ಸೆ.) ದ್ವಿತೀಯ ಸ್ಥಾನ ಪಡೆದರು. ಯುಗಾಂಡದ ಆಸ್ಕರ್ ಚೆಲಿಮೊ (7ನಿ.33.93ಸೆ.) ಹಾಗೂ ಉರುಗ್ವೆಯ ವ್ಯಾಲೆಂಟಿನ್ ಸೋಕಾ (7ನಿ.34.28ಸೆ.) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡರು.

27 ವರ್ಷ ವಯಸ್ಸಿನ ಗುಲ್ವೀರ್, 5,000 ಮೀ. (12ನಿ.59.77ಸೆ.) ಹಾಗೂ 10,000 ಮೀ. (27ನಿ.00.22ಸೆ.) ಓಟದಲ್ಲಿಯೂ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಜಪಾನ್ನ ಟೋಕಿಯೊದಲ್ಲಿ ಸೆಪ್ಟೆಂಬರ್ 13ರಿಂದ 21ರ ವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಸ್ನ 5,000 ಮೀ. ಸ್ಪರ್ಧೆಗೆ ಅರ್ಹತೆಯನ್ನೂ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.