ಅಜ್ಜಂಪುರ: ಈರುಳ್ಳಿ ಇಳುವರಿಯಲ್ಲಿ ಇಳಿಕೆ ಆಗಿರುವುದು ಹಾಗೂ ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕುಸಿತ ಕಂಡಿರುವುದು ತಾಲ್ಲೂಕಿನ ಈರುಳ್ಳಿ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ. ಬೆಳೆ ಬೆಳೆಯಲು ಹಾಕಿದ್ದ ಬಂಡವಾಳವೂ ಹಿಂತಿರುಗಿ ಬಾರದಂತಾಗಿರುವುದು ರೈತರ ಸಂಕಷ್ಠವನ್ನು ಮತ್ತಷ್ಠು ಹೆಚ್ಚಿಸಿದೆ.

ಸತತ ಮಳೆ ಈರುಳ್ಳಿ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಕಡಿಮೆಯಾದ ಬಿಸಿಲಿನ ಪ್ರಮಾಣ ಭೂಮಿಯಲ್ಲಿನ ಉಷ್ಣಾಂಶ ಕ್ಷೀಣಿಸಿದ್ದು, ಮಳೆಯಿಂದಾದ ಹೆಚ್ಚಿದ ತೇವಾಂಶಗಳು ಈರುಳ್ಳಿ ಗಡ್ಡೆ ಹಿಗ್ಗಲು ಪ್ರತಿಕೂಲ ವಾತಾವರಣ ಸೃಷ್ಠಿಸಿತು. ಈಗಾಗಿಯೇ ಈರುಳ್ಳಿ ಬೆಳೆಗೆ ಮೂರು ತಿಂಗಳು ತುಂಬಿದ್ದರೂ ಬೆಳವಣಿಗೆ ಪ್ರಮಾಣ ನಿರೀಕ್ಷಿತ ಹಂತವನ್ನು ತಲುಪಿಲ್ಲ.

80 ಕ್ವಿಂಟಾಲ್ ಇಳುವರಿ ಕಾಣುತ್ತಿದ್ದ ಭಾಗದ ಒಂದು ಎಕರೆಯಲ್ಲಿ ಸಣ್ಣ ಪ್ರಮಾಣದ ಗಡ್ಡೆಗಳಿಂದಾಗಿ ಪ್ರಸಕ್ತ ವರ್ಷ ಹೆಚ್ಚೆಂದರೆ 30 ಕ್ವಿಂಟಾಲ್ ಇಳುವರಿಯೂ ಕಾಣುತ್ತಿಲ್ಲ. ಬೆಳೆದಿರುವ ಈರುಳ್ಳಿ ಗಡ್ಡೆದಪ್ಪ ಚಿಕ್ಕದಿದ್ದು, ಮಾರುಕಟ್ಟೆಯವರು ಇವನ್ನು ಸಿ ಗ್ರೇಡ್ ಈರುಳ್ಳಿ ಎಂದು ಪರಿಗಣಿಸುತ್ತಾರೆ. ಸಣ್ಣ ಗಡ್ಡೆ ಧಾರಣೆಯೂ ಕಡಿಮೆಯಿದ್ದು, ಪ್ರತೀ ಕೆಜಿ ಸಣ್ಣ ಈರುಳ್ಳಿ ಸುಮಾರು $5 ರಿಂದ $6 ದರವಿದೆ. ಇದೇ ಅಂಕಿ ಅಂಶದಂತೆ ಎಕರೆಗೆ $15 ಸಾವಿರದಿಂದ $18 ಸಾವಿರ ಆದಾಯ ಪಡೆಯಬಹುದಾಗಿದೆ ಅಷ್ಠೇ ಎನ್ನುತ್ತಾರೆ ಈರುಳ್ಳಿ ಬೆಳೆಗಾರ ರೈತ ಗೌರಾಪುರದ ಪ್ರಶಾಂತ್.

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಬೀಜ, ಗೊಬ್ಬರ, ಕೀಟನಾಶಕ, ಕಳೆನಾಶಕ, ಬೆಳವಣಿಗೆ ಟಾನಿಕ್ ಸಿಂಪಡಣೆ, ಬೇಸಾಯ, ಈರುಳ್ಳಿ ಗಡ್ಡೆ ಕೀಳುವುದು, ಹೊಲದಿಂದ ಸ್ಥಳಾಂತರಿಸುವುದು, ಗಡ್ಡೆ ಸ್ವಚ್ಚಗೊಳಿಸುವುದು, ಮಾರುಕಟ್ಟೆಗೆ ಸಾಗಾಣಿಕಾ ವೆಚ್ಚ ಸೇರಿದಂತೆ ಕನಿಷ್ಠ $30 ಸಾವಿರ ವೆಚ್ಚವಾಗುತ್ತದೆ ಎನ್ನುತ್ತಾರೆ ರೈತ ಬಸವರಾಜು.

ಪ್ರಸ್ತುತ ಮಳೆಯಿಂದಾಗಿ ಹಿಗ್ಗದ ಈರುಳ್ಳಿ, ಬೆಳ್ಳುಳ್ಳಿ ದಪ್ಪಷ್ಟು ಮಾತ್ರ ಬೆಳವಣಿಗೆ ಕಂಡಿವೆ. ಮತ್ತಷ್ಟು ದಿನ ಈರುಳ್ಳಿ ಗಡ್ಡೆ ಹಿಗ್ಗಲು ಭೂಮಿಯಲ್ಲಿ ಉಳಿಸಿದರೂ ಬೆಳವಣಿಗೆ ಆಗೋ ಬದಲಿಗೆ ಗಡ್ಡೆಯೇ ಕೆಟ್ಟು ಹೋಗಬಹುದಾದ ಅಪಾಯವೂ ಇದೆ. ಇನ್ನು ಗಡ್ಡೆ ಕಿತ್ತು, ಸ್ವಚ್ಚಗೊಳಿಸಿ, ಮಾರುಕಟ್ಟೆಗೆ ಕೊಂಡೊಯ್ಯಲು $15 ಸಾವಿರ ವಿನಿಯೋಗಿಸಬೇಕಿದೆ. ಅಷ್ಟು ಆದಾಯವೂ ಬರಲ್ಲ. ಈರುಳ್ಳಿ ಸಮೇತ ಹೊಲ ಉಳುಮೆ ಮಾಡೋಣ ಎನಿಸುತ್ತದೆ. ಆದರೆ ತಿನ್ನೋ ಗಡ್ಡೆಗಳನ್ನು ಮಣ್ಣಾಗಿಸಲು ಮನಸ್ಸು ಬಾರದಾಗಿದೆ. ಹೀಗಾಗಿ ಅನಿವಾರ್ಯವಾಗಿ ಸಣ್ಣ ಗಡ್ಡೆಗಳನ್ನೇ ಕೀಳುವಂತಾಗಿದೆ ರೈತ ಮಲ್ಲೇಶಪ್ಪ.

ತರಕಾರಿಗೆ ಸದಾ ಬೆಲೆ ಇದ್ದೇ ಇರುತ್ತದೆ. ಅದರಲ್ಲಿಯೂ ಹೆಚ್ಚಿನ ಬಳಕೆಯ ಈರುಳ್ಳಿಗೆ ಹೆಚ್ಚು ದರವಿರುತ್ತದೆ ಎಂದು ಸಾಲ ಮಾಡಿ ಬೆಳೆ ಮಾಡಿದ್ದೆ.ಆದರೆ ಬೆಲೆಯೂ ಕಡಿಮೆ ಆಗಿದೆ. ಇತ್ತ ಇಳುವರಿಯೂ ಕುಂಡಿತಗೊಂಡಿದೆ. ಒಟ್ಟಾರೆ ಇಳುವರಿ ಮತ್ತು ದರ ಎರಡೂ ಅರ್ಧಕ್ಕಿಂತ ಕಡಿಮೆಯಾಗಿದೆ. ಲಾಭ ಬೇಡ ಹಾಕಿದ್ದ ಬಂಡವಾಳವೂ ಕೈಸೇರುತ್ತಿಲ್ಲ. ಪಡೆದ ಸಾಲವನ್ನು ಹೇಗೆ ಹಿಂತಿರುಗಿಸೋದು ಎಂಬ ನೋವು ಕಾಡುತ್ತಿದೆ ಎಂದು ರೈತ ತಿಪ್ಪೇಶ್ ಕಳವಳ ವ್ಯಕ್ತಪಡಿದ್ದಾರೆ.

ಅಜ್ಜಂಪುರ-ತರೀಕೆರೆ-ಕಡೂರು ಭಾಗದಲ್ಲಿ ಹೆಚ್ಚಿನ ಮಳೆಯಿಂದಾಗಿ ಈರುಳ್ಳಿ ಗಡ್ಡೆ ಕಟ್ಟಿಲ್ಲ. ಈರುಳ್ಳಿ ಬೆಳೆಗಾರರಿಗೆ ಕನಿಷ್ಠ 125 ಕೋಟಿ ನಷ್ಠ ಸಂಭವಿಸಿದೆ. ಕೂಡಲೇ ರಾಜ್ಯ ಸರ್ಕಾರ ಭಾಗವನ್ನು ಅತಿವೃಷ್ಠಿ ಪ್ರದೇಶ ಎಂದು ಘೋಷಣೆ ಮಾಡಬೇಕು. ಪ್ರತೀ ಎಕರೆ ಈರುಳ್ಳಿಗೆ $15 ಸಾವಿರ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಮಹೇಶ್ ಆಗ್ರಹಿಸಿದ್ದಾರೆ.

ತಾಲ್ಲೂಕಿನ ಮಣ್ಣು ಫಲವತ್ತಾಗಿದೆ. ಆದರೆ ಬಹುತೇಕ ಕೃಷಿಕರು ಈರುಳ್ಳಿಯನ್ನೇ ಪ್ರಮುಖ ಬೆಳೆಯಾಗಿಸಿ, ಬೆಳೆಯುತ್ತಿದ್ದಾರೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ಮುಂಗಾರು ಬೆಳೆ ಕೈಕೊಡುತ್ತಿದೆ. ಕಳೆದ 20 ವರ್ಷಗಳಲ್ಲಿ ನಾಲ್ಕು ಬಾರಿ ಮಾತ್ರ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿದೆ. ಉಳಿದ 16 ಬಾರಿ ರೈತರು ನಷ್ಠ ಅನುಭವಿಸಿದ್ದಾರೆ. ಸರ್ಕಾರ ಹಾಗೂ ಕೃಷಿ ಇಲಾಖೆ ಇಲ್ಲಿನ ರೈತರ ನಷ್ಠವನ್ನು ಸರಿದೂಗಿಸುವ ನಿಟ್ಟಿನಲ್ಲಿ ಈರುಳ್ಳಿಗೆ ಪರ್ಯಾಯ ಬೆಳೆ ಅಭಿವೃದ್ಧಿಪಡಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.