ಶೃಂಗೇರಿ: ಖಾಸಗಿ ಕ್ಲಬ್ ಮತ್ತು ಖಾಸಗಿ ಬಡಾವಣೆಗೆ ತುಂಗಾ ಕಿರುಗಾಲುವೆ ತಡೆಗೋಡೆ ಹೆಸರಿನಲ್ಲಿ, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ತಡೆಗೋಡೆ ನಿರ್ಮಾಣ ಮಾಡುತ್ತಿರುವ ಬಗ್ಗೆ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್, ಮರ್ಕಲ್ ಗ್ರಾಮ ಪಂಚಾಯಿತಿ ಸದಸ್ಯ ಕೆ.ಪ್ರಶಾಂತ್ ಕರ್ನಾಟಕ ನೀರಾವರಿ ನಿಗಮ ತುಂಗಾ ಮೇಲ್ದಂಡೆ ಯೋಜನೆ ಉಪ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.

‘ಮೆಣಸೆ ಗ್ರಾಮದಲ್ಲಿ ನೀರಾವರಿ ನಿಗಮದ ಇಲಾಖೆಯಿಂದ ತುಂಗಾನದಿಗೆ ಕಿರುಹಳ್ಳ, ಉಪನದಿ ಅಥವಾ ಕಿರುಕಾಲುವೆ ಹೆಸರಿನಲ್ಲಿ ಖಾಸಗಿ ಬಡಾವಣೆಗೆ ₹ 1 ಕೋಟಿ ಮೊತ್ತದ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ನಡೆದಿರುವ ಸ್ಥಳ ಅತಿವೃಷ್ಟಿ, ಪ್ರಕೃತಿ ವಿಕೋಪ ಅಥವಾ ಭೂಕುಸಿತಕ್ಕೆ ಒಳಗಾಗಿರುವ ಪ್ರದೇಶವಾಗಿರುವುದಿಲ್ಲ’ ಎಂದು ಇಲಾಖೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

‘ಈ ಹಿಂದೆಯೇ ಈ ಕಾಮಗಾರಿ ನಡೆಯುತ್ತಿರುವ ಅಕ್ಕಪಕ್ಕದ ಜಮೀನುಗಳು ಅನ್ಯಕ್ರಾಂತವಾಗಿ ಖಾಸಗಿ ಬಡಾವಣೆಯಾಗಿರುತ್ತವೆ. ಅದಾಗಲೇ ಅನ್ಯಕ್ರಾಂತಗೊಂಡ ಖಾಸಗಿ ಬಡಾವಣೆಗೆ ಪ್ರಭಾವಿಗಳು ಖಾಸಗಿ ಜಮೀನಿಗೆ ಸರ್ಕಾರಿ ಅನುದಾನದಲ್ಲಿ ತಡೆಗೋಡೆ ಹಾಗೂ ಬಾಕ್ಸ್ ಡ್ರೈನೇಜ್ ಮಾಡಿರುವುದು ಕಾನೂನು ಬಾಹಿರವಾಗಿದೆ. ಇಲಾಖೆಯು ತಡೆಗೋಡೆ ನಿರ್ಮಾಣ ಮಾಡಿರುವ ಜಾಗವನ್ನು ಇಲಾಖೆ ಪರಿಶೀಲಿಸಿ, ಅನ್ಯಕ್ರಾಂತ ಜಮೀನು ಆಗಿದ್ದರೆ ಕೂಡಲೇ ಕಾಮಗಾರಿ ತಡೆಹಿಡಿಯಬೇಕು. ಪ್ರಕೃತಿ ವಿಕೋಪದಲ್ಲಿ ರೈತರ ಜಮೀನಿಗೆ ಏನು ತೊಂದರೆ ಆಗಿದೆ ಎಂದು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತುಂಗಾನದಿಯಿಂದ ಹಾನಿಗೊಳಗಾದ ರೈತರ ಜಮೀನು ಸರ್ಕಾರಿ ಕಟ್ಟಡ, ಮಠ, ಮಂದಿರಗಳಿಗೆ ಕಾಮಗಾರಿ ನಿರ್ವಹಿಸುವಾಗ ಆದ್ಯತೆ ನೀಡಬೇಕು.ಅನ್ಯಕ್ರಾಂತವಾಗಿ ಖಾಸಗಿ ಬಡಾವಣೆಗೆ ಸರ್ಕಾರಿ ಅನುದಾನದಲ್ಲಿ ತಡೆಗೋಡೆ, ಕಾಲುವೆಗಳನ್ನು ನಿರ್ಮಾಣ ಮಾಡಿದರೆ ಹಣ ಬಿಡುಗಡೆ ಮಾಡಬಾರದು. ಈ ರೀತಿ ಮಾಡಿದ ಎಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೋಳ್ಳಬೇಕು ಎಂದು ದೂರು ನೀಡಲಾಗಿದೆ ಎಂದು ಮರ್ಕಲ್ ಗ್ರಾಮ ಪಂಚಾಯಿತಿ ಸದಸ್ಯ ಕೆ.ಪ್ರಶಾಂತ್ ಹೇಳಿದರು.

ದೂರನ್ನು ಲೆಕ್ಕಿಸದೆ ಹಣ ಪಾವತಿ ಮಾಡಿದರೆ ಕಾಮಗಾರಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ವಿದ್ಯಾರಣ್ಯ ಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.