ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯ: ಸಂಘಟನೆಗಳಿಂದ ಪ್ರತಿಭಟನೆ

Last Updated 31 ಜನವರಿ 2023, 5:35 IST
ಅಕ್ಷರ ಗಾತ್ರ

ಬೆಳ್ತಂಗಡಿ: ಆದಿವಾಸಿ ಸಮುದಾಯದ ಮುಖಂಡ ಜಯಾನಂದ ಪಿಲಿಕಳ ಅವರ ಮೇಲೆ ಶಾಸಕರು ದಬ್ಬಾಳಿಕೆ ನಡೆಸಿ ಅವಮಾನ ಮಾಡಿ ಹಲ್ಲೆ ಮಾಡುವುದಾಗಿ ಸಾರ್ವಜನಿಕವಾಗಿ ಬೆದರಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಮೂಲನಿವಾಸಿ ಮಲೆಕುಡಿಯರ ಸಂಘ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಯಿತು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಎಸ್.ವೈ ಗುರುಶಾಂತ್, ‘ಶೋಷಿತ ಸಮುದಾಯ ವನ್ನು ಮತ್ತಷ್ಟು ಶೋಷಿಸುವ ಕಾರ್ಯಕ್ಕೆ ಶಾಸಕರು ಮುಂದಾಗಿದ್ದಾರೆ. ಜಯಾನಂದ ಮೇಲೆ ನಡೆದ ಹಲ್ಲೆ ಯತ್ನ ಸ್ವಾಭಿಮಾನಿ ಮಲೆಕುಡಿಯ ಸಮುದಾಯದ ನೇಲೆ ನಡೆದ ದಾಳಿಯಾಗಿದೆ’ ಎಂದರು.

ಮಾಜಿ ಸಚಿವ ಕೆ.ಗಂಗಾಧರ ಗೌಡ ಮಾತನಾಡಿ, ‘ಪೊಲೀಸ್ ಇಲಾಖೆ ಶಾಸಕರ ಸರ್ವಾಧಿಕಾರಕ್ಕೆ ಬೆಂಬಲ ನೀಡು
ತ್ತಿರುವುದು ದುರಂತ. ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡದಿದ್ದ ಕಾರಣ ಜನ ಬೀದಿ ಗಿಳಿಯಬೇಕಾದ ಅನಿವಾರ್ಯತೆ ಬರುತ್ತಿದೆ. ಈ ಹೋರಾಟವನ್ನು ನ್ಯಾಯ ಸಿಗುವವರೆಗೆ ಮುಂದುವರಿಸುತ್ತೇವೆ’ ಎಂದರು.

ಸಿಪಿಎಂ ಮುಖಂಡ ಶಿವಕುಮಾರ್, ಕಾರ್ಮಿಕ ಮುಖಂಡ ಬಿ‌.ಎಂ. ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಲೇಶ್ ಕುಮಾರ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ. ‌ವಸಂತ, ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷ ಜಯರಾಮ ಮಲೆಕುಡಿಯ ಮಾತನಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶೇಖರ್ ಕುಕ್ಕೇಡಿ, ಮರಾಠಿ ನಾಯ್ಕ ಯುವ ವೇದಿಕೆ ಸ್ಥಾಪಕ ಸಂತೋಷ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ಮುಖಂಡರಾದ ಮನೋಹರ ಕುಮಾರ್, ಅಭಿನಂದನ್ ಹರೀಶ್ ಕುಮಾರ್, ಅಬ್ದುಲ್ ರಹಿಮಾನ್ ವಪಡ್ಪು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ವಸಂತ ನಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ, ಮಲೆಕುಡಿಯ ಸಮುದಾಯದ ಪೂವಪ್ಪ ಮಲೆಕುಡಿಯ ಕುತ್ಲೂರು, ನವೀನ್ ಬಾಂಜಾರು, ನಾರಾಯಣ ಮಲೆಕುಡಿಯ, ಜಿ.ಕೆ. ನಾರಾಯಣ ಧರ್ಮಸ್ಥಳ, ರಾಮಚಂದ್ರ ಶಿಶಿಲ, ಸುಕುಮಾರ್ ದಿಡುಪೆ, ಭೂನ್ಯಾಯ ಮಂಡಳಿ ಮಾಜಿ ಸದಸ್ಯ ನೀಲಯ್ಯ ಮಲೆಕುಡಿಯ, ವಸಂತ ಮಲೆಕುಡಿಯ ಸವಣಾಲು, ಚೇತನ್ ಮಲೆಕುಡಿಯ, ರಘು ಜಾಲಡೆ, ಅಶೋಕ್ ಎರ್ಮೆಲೆ, ಲಿಂಗಪ್ಪ ಮಲೆಕುಡಿಯ ಅರಸಿಕಟ್ಟೆ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಾಶೀಲ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ ಇದ್ದರು.

ಶೇಖರ ಲಾಯಿಲ ಸ್ವಾಗತಿಸಿದರು. ಪ್ರತಿಭಟನಕಾರರು ಬೆಳ್ತಂಗಡಿ ಎಸ್.ಐ ಮೂಲಕ ಮೇಲಧಿಕಾರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT