ನರಸಿಂಹರಾಜಪುರ: ಭದ್ರಾ ಮುಳುಗಡೆ ಸಂತ್ರಸ್ತರ ರೈತರ ಭೂಮಿ ಹಕ್ಕನ್ನು ಸ್ಥಿರೀಕರಿಸಿಕೊಡುವಂತೆ ಆಗ್ರಹಿಸಿ ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ನೇತೃತ್ವದ ನಿಯೋಗ ಗುರುವಾರ ಕೊಪ್ಪ ಉಪವಲಯ ಅರಣ್ಯಾಧಿಕಾರಿ ಶಿವಶಂಕರ್ ಅವರಿಗೆ ಮನವಿ ಸಲ್ಲಿಸಿದರು.

ನರಸಿಂಹರಾಜಪುರದ ಚಿಕ್ಕಗ್ರಹಾರ ವಲಯ ಅರಣ್ಯ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಲಕ್ಕವಳ್ಳಿಯಲ್ಲಿ ನಿರ್ಮಾಣವಾಗಿರುವ ಭದ್ರಾ ಜಲಾಶಯದ ಹಿನ್ನೀರಿನಿಂದ ನರಸಿಂಹರಾಜಪುರ ತಾಲ್ಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಈ ಯೋಜನೆ ಮಧ್ಯ ಕರ್ನಾಟಕದ ಲಕ್ಷಾಂತರ ರೈತರ ಜೀವನಾಡಿಯಾಗಿ ಬದುಕನ್ನು ರೂಪಿಸಿದೆ. ಭದ್ರಾ ಮುಳುಗಡೆ ಸಂತ್ರಸ್ತರಿಗೆ 1964ರಲ್ಲಿ ಪುನರ್ ವಸತಿ ಹಾಗೂ ಪರಿಹಾರ ರೂಪವಾಗಿ ಅರಣ್ಯ ಜಮೀನನ್ನು ತಾಲ್ಲೂಕಿನ ಮುತ್ತಿನಕೊಪ್ಪ ಕಸಬಾ ಹೋಬಳಿಯ ಆರಂಬಳ್ಳಿ, ಸಿಂಸೆ, ಬಡಗಬೈಲು,ಹಿಳುವಳ್ಳಿ, ಮೆಣಸೂರು, ಮುತ್ತಿನಕೊಪ್ಪ,ಕೋಣಕೆರೆ, ಮಡಬೂರು, ಬೈರಾಪುರ, ಶಿರಿಗಳಲೆ ಹಾಗೂ ಬಾಳೆಹೊನ್ನೂರು ಹೋಬಳಿಯ ಮಲ್ಲಂದೂರು, ಬೆಳ್ಳೂರು, ಸಂಸೆ,ಹರಾವರಿ,ದಾವಣ, ಅಳೇಹಳ್ಳಿ, ವಗ್ಗಡೆ, ಗುಬ್ಬಿಗಾ, ಕರ್ಕೇಶ್ವರ, ಹಲಸೂರು,ಮುದುಗುಣಿ ಮತ್ತಿತತರ ಗ್ರಾಮಗಳಲ್ಲಿ ಕಂದಾಯ ಇಲಾಖೆಗೆ ಹಸ್ತಾಂತರಿಸಿ ಮಂಜೂರು ಮಾಡಲಾಗಿತ್ತು. ಈ ಯೋಜನೆಯ ಸಂತ್ರಸ್ತರು ಸದರಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಸಾಗುವಳಿ ಮಾಡಿ ತಮ್ಮ ಹೆಸರಿನಲ್ಲಿ ಖಾತೆ ಹೊಂದಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಈ ಜಮೀನನ್ನು ಅರಣ್ಯ ಇಲಾಖೆ ವತಿಯಿಂದ ಡಿನೋಟಿಫಿಕೇಶನ್ , ಡಿ ರಿಸರ್ವ್ ಪೂರ್ಣಗೊಂಡಿಲ್ಲದ ಕಾರಣ ಪೂರ್ಣ ಪ್ರಮಾಣದ ಹಕ್ಕು ಪ್ರಾಪ್ತವಾಗುವುದಿಲ್ಲ. ಜಮೀನಿನ ಮಾಲ್ಕಿ ಹಕ್ಕು ಸಹ ಇರುವುದಿಲ್ಲ. ಈ ನಿಟ್ಟಿನಲ್ಲಿ ಈ ಹಿಂದೆ ಹಲವು ಪ್ರಯತ್ನ ನಡೆದಿದ್ದು, ಪ್ರಸ್ತುತ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ರಾಜ್ಯದ ಲಕ್ಷಾಂತರ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ತಮ್ಮ ಭೂಮಿಯನ್ನು ಕಳೆದುಕೊಂಡ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕನ್ನು ಸ್ಥಿರೀಕರಿಸಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ್, ತಾಲ್ಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಕೆಡಿಪಿ ಸದಸ್ಯರಾದ ಅಂಜುಮ್,ಸಾಜು ಮುಖಂಡರಾದ ಸುಬ್ಬೇಗೌಡ, ಬಿನು, ದೇವಂತ, ಬೆನ್ನಿ, ನಾಗರಾಜ್, ರಂಜಿತ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.