ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್  ಒಳಜಗಳ ಮುಚ್ಚಲು ಚೈತ್ರಾ ಪ್ರಕರಣ ಬಳಕೆ: ಆರೋಪ

Published 23 ಸೆಪ್ಟೆಂಬರ್ 2023, 13:26 IST
Last Updated 23 ಸೆಪ್ಟೆಂಬರ್ 2023, 13:26 IST
ಅಕ್ಷರ ಗಾತ್ರ

ಮೂಡಿಗೆರೆ: ಕಾಂಗ್ರೆಸ್‌ನಲ್ಲಿ ಅಧಿಕಾರದ ಗದ್ದುಗೆಗಾಗಿ ನಡೆಯುತ್ತಿರುವ ಒಳ ಜಗಳವನ್ನು ಮುಚ್ಚಿಕೊಳ್ಳಲು ಚೈತ್ರಾ ಕುಂದಾಪುರ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ತಾಲ್ಲೂಕು ವಕ್ತಾರ ನಯನ ತಳವಾರ ಆರೋಪಿಸಿದ್ದಾರೆ.

ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಚೈತ್ರಾ ಪ್ರಕರಣ ನಡೆದಿದ್ದೇ ಆಗಿದ್ದಲ್ಲಿ ತನಿಖೆ ನಡೆಸುವುದು ಹಾಗೂ ಶಿಕ್ಷೆ ವಿಧಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಹಣ ಪಡೆದಷ್ಟೆ ಹಣ ನೀಡಿರುವುದು ಕೂಡ ತಪ್ಪು.  ಗೋಪಾಲ ಪೂಜಾರಿ ಅವರನ್ನೂ ಬಂಧಿಸಬೇಕು. ಈ ಪ್ರಕರಣದಿಂದ ಬಿಜೆಪಿ ಪಕ್ಷ ಯಾವುದೇ ಹಣ ಹಾಗೂ ಅಮಿಷಕ್ಕೆ ಒಳಗಾಗಿ ಟಿಕೆಟ್‌ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದ್ದು, ಗೋಪಾಲ ಪೂಜಾರಿಯನ್ನು ಬಂಧಿಸಿ ತನಿಖೆ ನಡೆಸುವ ಮೂಲಕ ಸತ್ಯಾಂಶವನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT